ಹೇಗಿರಲಿ ಗೆಳತಿ ನಿನ್ನಗಲಿ
ನಿನ್ನ ನಲ್ಮೆಯ ಮಾತುಗಳಿಲ್ಲದೆ
ನಿನ್ನ ಪ್ರೀತಿಯ ಬೈಗುಳಗಳಿಲ್ಲದೆ
ನಿನ್ಮುಂದೆ ದಡ್ಡತನ ತೋರಿಸಿಕೊಳ್ಳದೆ
ನಿನ್ನೊಡನೆ ನನ್ನ ಮನ ಬೆಸೆದುಕೊಳ್ಳದೆ
ಹೇಗಿರಲಿ ಗೆಳತಿ ನಿನ್ನಗಲಿ
ಅಂದು ನಾ ಕೇಳಿದ್ದೆ
ಏನು ಬೇಕೆಂದು ನಿನಗೆ
ಭೂರಮೆಯ ಕಂಗೊಳಿಸಿ ಹಾಲ್ಚೆಲ್ಲಿದಂತ
ಹುಣ್ಣಿಮೆ ಚಂದ್ರನೇ ಸಾಕಾ
ತಂದಿಡಲು ಸಿದ್ಧವಿದ್ದೆ ನಾ ನಿನ್ನ ಮನೆಮುಂದೆ
ಅದಕೆ ನೀ ಮುಗುಳ್ನಗುತ
ನನ್ನ ಗಲ್ಲವನು ಹಿಡಿದು
ಅಮಾವಾಸ್ಯೆಯಂದೂ ನಗುವ ಈ ಚಂದಿರನೆ ಸಾಕೆಂದಾಗ
ಕಳೆದುಹೋಗಿದ್ದ ನನ್ನ ಹುಡುಕಲು
ಅಮವಾಸ್ಯೆಯನ್ನೆ ಮರೆತೆಯಲ್ಲ ಗೆಳತಿ
ಈಗ ನೀ ಹೀಗೆ ಒಮ್ಮೆಲೆ ಮರೆಯಾದರೆ
ನನ್ನ ಬದುಕೂ ಸಹ ಅಮವಾಸ್ಯೆ ಆದೀತು
ಹೇಗಿರಲಿ ಗೆಳತಿ ನಿನ್ನಗಲಿ
ಒಮ್ಮೆ ಬೈದೊಡನೆ ನಿನ್ನ ಮುಖ ಕಾದ ಕೆಂಡ
ಮತ್ತೊಮ್ಮೆ ಹೊಗಳಿದರೆ ನಾಚುವ ಗುಲಾಬಿ
ಹೀಯಾಳಿಸಿದಾಗೆಲ್ಲ ಮೂತಿ ತಿರುಗಿಸುವಾಟ
ಹೀಗೆಳೆದು ಬಿಟ್ಟರೆ ಬಿಡುತಿದ್ದೆ ಊಟ
ಬಂದುಬಿಡು ಗೆಳತಿ ಅಗಲಿರಲಾರೆ ನಿನ್ನ
ಕಾದ ಕೆಂಡದ ಮೇಲೆ ಅಡುಗೆ ಮಾಡಿ ಬಡಿಸುವೆ
ನಾಚಿದ ಗುಲಾಬಿಯನ್ನು ನಿನ್ನ ಮುಡಿಯಲ್ಲಿ ಮುಡಿಸುವೆ
ತಿರುಗಿತಿಹ ಮೂತಿಯನು ತಡೆಹಿಡಿದು ನಿಲ್ಲಿಸುವೆ
ಪ್ರೀತಿಯ ಪದಗಳಲಿ ನಿನ್ನ ಮನ ತಣಿಸುವೆ
ಹೇಗಿರಲಿ ಗೆಳತಿ ನಿನ್ನಗಲಿ
ಪವನ್ ಪಾರುಪತ್ತೇದಾರ
photo courtecy : weirdlyrandom.tumblr.com
************************************************
ಮಧುರವಾದ ಭಾವಗಳನ್ನು ಹದವಾಗಿ ಹರಿಯಬಿಟ್ಟಿದ್ದೀರಿ ಪವನಣ್ಣ. ಪ್ರೇಮಿಯ ಮನದ ತಳದಲ್ಲಿ ನೆಲೆನಿಂತ ಭಾವಗಳನ್ನು ನೆನಪುಗಳಿಂದ ಕಲಕಿ ಹೋಗುವ ನಲ್ಲೆಯನ್ನು ಮತ್ತೆ ಅಹ್ವಾನಿಸಿದ ನಿಮ್ಮ ಪರಿ ಮೆಚ್ಚುವಂತದ್ದು. :) ತಂಗಾಳಿಯಲ್ಲಿ ಬಂದು ನಿಮ್ಮನ್ನಪ್ಪಲಿ ನಿಮ್ಮ ನಲ್ಲ. ಮತ್ತೆ ಬಂದಾಗ ಬಿಗಿಯಾಗಿ ಬಂಧಿಸಿಕೊಳ್ಳಿ, ಚಳಿಯಲ್ಲೂ ಬೆಚ್ಚಗಿರುತ್ತೀರಿ. ;)
ReplyDelete