Wednesday, October 26, 2011

ಎಣ್ಣೆ ಸ್ನಾನದ ಆರಂಭ
ಮೊದಲ ಪೂಜೆ ನಿನಗೆ ಹೇರಂಭ
ಹೊಸ ಹೊಸ ಉಡುಪಿನ ಸುಗ್ಗಿಯಲಿ
ವಿಧ ವಿಧ ಭೋಜನ ಅಡುಗೆಯಲಿ

ಓದು ಬರಹವ ಕಲಿತವ ನಿ
ಪರಿಸರ ಕಾಳಜಿ ಅರಿತವ ನಿ
ಶಬ್ದ ಹಬ್ಬದಲ್ಲಿ ಬೇಕಿಲ್ಲ
ದೀಪ ಹಚ್ಚು ನೀ ಮನೆಯೆಲ್ಲ

ಕಟ್ಟು ನೀ ಬಲಿಯ ಕೋಟೆಯ
ಮಾಡಿ ಸಗಣಿಯ ಉಂಡೆಯ
ಎಳ್ಳು ಹೂವಿನ ಅಲಂಕಾರ
ದುಷ್ಟ ಶಕ್ತಿಗಳ ಸಂಹಾರ

ಸುತ್ತಮುತ್ತಲಿನ ಮಕ್ಕಳ ಜೊತೆಗೆ
ಬೆಸೆಯಬೇಡ ನಿ ಹೊಗೆಯ ಹಗೆ
ಪರಿಸರ ರಕ್ಷಣೆ ಅತಿ ಮುಖ್ಯ
ಬೆಳೆಸಿಕೊ ಉತ್ತಮ ಸಾಂಗತ್ಯ

ದೀಪಾವಳಿಯ ಶುಭಾಷಯಗಳೊಂದಿಗೆ ಪವನ್ :-

Friday, October 21, 2011

ಗೆಳೆತನದಲ್ಲಿ ಲೋಪವೇ ಇಲ್ಲ

ಶಿಷ್ಯ ಶಿಷ್ಯ ಶಿಷ್ಯ ಬಾರೋ ಬಾರಿಗೋಗಣ 
ಶಿಷ್ಯ ಶಿಷ್ಯ ಎಣ್ಣೆ ಹೊಡೆದು ಟೈಟು ಅಗಣ

ಬದುಕಲ್ಲೇನು ಶಾಶ್ವತವಿಲ್ಲ
ಗೆಳೆತನದಲ್ಲಿ ಲೋಪವೇ ಇಲ್ಲ
ಕೈಯಲ್ಲಿದ್ದರೆ ದುಡ್ಡಿನ ಕಂತೆ
ಸುತ್ತ ಮುತ್ತ ಕಳ್ಳರ ಸಂತೆ

ಶಿಷ್ಯ ಕಾಸ್ ಐತಾ ನೋಡು
ಇಲ್ದಿದ್ರೆ ತಿರುಗಿ ನೋಡ್ದೆ ಓಡು
ಓನರ್ ಎತ್ಕಂಡವನೇ ರಾಡು
ಸಿಕ್ರೆ ನಮ್ದು ನಾಯಿ ಪಾಡು
ಒಳ್ಳೆದ್ರಲ್ಲು ಕೆಟ್ಟದ್ರಲ್ಲೂ ಸಮ ಪಾಲು ಮಾಡೋಣ

ಶಿಷ್ಯ ಶಿಷ್ಯ ಶಿಷ್ಯ ಬಾರೋ ಓಡಿಹೊಗಣ
ಶಿಷ್ಯ ಶಿಷ್ಯ ಶಿಷ್ಯ ಬಾರೋ escape ಅಗಣ

ಒಬ್ಬನ  ಕಷ್ಟ ಎಲ್ಲರ ಹೊರೆಗೆ
ಒಬ್ಬನ ನಲಿವು ಎಲ್ಲರ ಮೊಗಕೆ
ಗೆದ್ದರೆ ಒಬ್ಬನೇ ಬೀಗುವುದಿಲ್ಲ
ಸೋಲಲು ಎಂದು ಬಿಡುವುದು ಇಲ್ಲ 

ಮಚ್ಚ ನಿಂದ ಕಿರಿಕ್ ಹೇಳು
ಕೊಡ್ತೀನ್ ಪ್ರಾಣ ಅದ್ರು ಕೇಳು
ಅಪ್ಪ ಅಮ್ಮಂಗಿಂತ ಹೆಚ್ಚು
ಗೆಳೆತನ ಅನ್ನೋ ಹುಚ್ಚು

ಸುಖ ದುಖ ನೋವು ಸಲಿವಲಿ ಸಮ ಪಾಲು ಮಾಡೋಣ

ಶಿಷ್ಯ ಶಿಷ್ಯ ಶಿಷ್ಯ ಬಾರೋ ಒಂದುಗುಡೋಣ
ಶಿಷ್ಯ ಶಿಷ್ಯ ಜೊತೆ ಸೇರಿ ಪಾರ್ಟಿ ಮಾಡೋಣ











Thursday, October 20, 2011

ಯಥಾ ಗುರು ಹಾಗೆ ಶಿಷ್ಯ

ರಾಘವೇಂದ್ರ ಭವನದ ಸರ್ಕಲ್ ನ ಬಳಿಯ ಬೇಕರಿಯಲ್ಲಿ ನಾನು ಮತ್ತೆ ಗೆಳೆಯ ಯಾದವ್ ಕೆಟ್ಟದ್ದನ್ನ ಸುಡುತ್ತ ನಿಂತಿದ್ದೆವು. ಹಾಗೆ ಮಾತನಾಡುತ್ತಿರುವಾಗ ನಮ್ಮ ಮಾತುಗಳು ಕನಸಿನ ಬಗ್ಗೆ ಹೊರಟಿತು. ನಾನು ಹೇಳಿದೆ, ಮಗ ಕನಸು ಕಾಣಬೇಕು ಮಗ ಯಾವಾಗಲು, ಆಗಲೇ ಎತ್ತರಕ್ಕೆ ಬೆಳೆಯಕ್ಕೆ ಸಾಧ್ಯವಾಗೋದು ಅಂತ. ಯಾದವ್ ಒಂದು ರೀತಿಯ ಮಾರ್ಮಿಕವಾದ ನಗು ತೋರಿ ಶಾಸ್ತ್ರೀ ನಿದ್ದೆ ಮಾಡಿದ್ರೆ ತಾನೆ ಮಗ ಕನಸು ಕಾಣಕ್ ಆಗೋದು?? ನಿದ್ದೇನೆ ಇಲ್ಲ ಅಂದ್ರೆ ಕನಸು ಎಲ್ಲಿಂದ ಕಾಣನ ಹೇಳು ಅಂದ.ನಿದ್ದೇನೆ ಮಾಡದೇ ಕನಸು ಕಂಡ್ರೆ ಹಗಲುಗನಸು ಕಾಣಬೇಡ ಅಂತ ಬೈತಾರೆ. ಕನಸು ಕಾಣಕ್ಕದ್ರು  ನಿದ್ದೆ ಮಾಡೋಣ ಅಂದ್ರೆ ಎಲ್ಲಿ ಸ್ವಾಮಿ ಬರುತ್ತೆ ನಿದ್ರೆ?? ಪಕ್ಕದ ಮನೆ ಪದುಮಕ್ಕ ನಮಮ್ಮ ನೀರಿಗೆ ಹೋದಾಗ ಏನ್ರಿ ಗಿರಿಜಮ್ಮ ನಿಮ್ಮ ಮಗ ಅದೇನೋ ಇಂಜಿನಿಯರಿಂಗ್ ಓದಿದ್ದನಲ್ಲ ಕೆಲಸ ಸಿಕ್ತ ಅವನಿಗೆ ಅಂತ ಕೇಳಿದಾಗ ನಮಮ್ಮ ಇಲ್ಲ ಕಣ್ರೀ ಯಾವ್ದೋ recession  ಅಂತ ತೊಂದರೆ ಬಂದಿದೆ ಅಂತೆ ಅದದ್ಮೇಲೆ ಸಿಗತ್ತೆ ಅಂತ ಹೇಳ್ದ ಅಂತ ಹೇಳೋ ಮಾತು ಕೇಳಿದಾಗ, ನಮಪ್ಪ ಅವರ ಹೊಲದಲ್ಲಿ ಕೆಲಸ ಮಾಡುವ ಕೂಲಿಯವರು ಏನ್ ಸಾಮಿ ನಮ್ ಚಿಕ್ ಐನೋರು ಎಲ್ಲನ ಕೆಲಸಕ್ಕೆ ಹೋಗ್ತವ್ರ, ಇಲ್ಲ ಮನೇಲೆ ಮುದ್ದೆ ಮುರಕೊಂಡು ಅವ್ರ ಇನ್ನ ಅಂತ ಕೇಳಿದಾಗ ನನ್ನಪ್ಪ ನನ್ನ ಕಡೆ ನೋಡಿ ಹುಡುಕ್ತ ಇದ್ದನಪ್ಪ ಇನ್ನು ಯಾವಾಗ್ ಸಿಗತ್ತೋ ಗೊತ್ತಿಲ್ಲ ಅಂತ ಹೇಳೋವಾಗ ನೋಡಿ ಇನ್ನು ನನಗೆ ನಿದ್ದೆ ಅದ್ರು ಎಲ್ಲಿ ಬರಲು ಸಾಧ್ಯ?? ನನಗೆ ಮಾತ್ರ ಅಲ್ಲ ಸ್ವಾಭಿಮಾನ ಇರುವ ಯಾವುದೊ ವ್ಯಕ್ತಿಗೂ ನಿದ್ದೆ ಬರಲ್ಲ ಇನ್ನು ಕನಸು ಕಾಣುವುದು ಬಹಳ ದೂರದ ಮಾತು ಅಂತ ಒಂದೇ ಮಾತಿನಲ್ಲಿ ಹೇಳಿಬಿಟ್ಟ.

ಸಮಾಜ ಎಷ್ಟು ಬದಲಾಗಿಬಿಟ್ಟಿದೆ ಅಲ್ವಾ?? ಇಲ್ಲ ನಾವೇ ಬದಲಾಗಿದ್ದಿವ?? ಮೊದಲಿಗೆ ೧೦ನೇ ಕ್ಲಾಸ್ ಓದಿದರೆ ಸಾಕು ಕೆಲಸ ಸಿಕ್ತಿತ್ತಂತೆ ನಮ್ ತಾತ ಓದಿದ್ದು ಬರಿ ೭ನೇ ಕ್ಲಾಸು ಲೋವೆರ್ ಸೆಕೆಂಡರಿ ಅಂತೆ, ಅವರು ನಮ್ಮೂರಲ್ಲಿ ಫೇಮಸ್ ಎಲೆಕ್ಟ್ರಿಕ್ contractor. ಇನ್ನು ನಮ್ಮ ತಂದೆ PUC ಓದಿದಕ್ಕೆ ಎಷ್ಟೋ ಸರ್ಕಾರೀ ಕೆಲಸಗಳು ಬಂದಿದ್ದವಂತೆ.ನಮ್ಮ ಅಣ್ಣಂದಿರು ಡಿಗ್ರಿ ಓದಿ ಒಳ್ಳೆಯ ಕಡೆ ಕೆಲಸಗಳಲ್ಲೂ ಇದ್ದಾರೆ. ಆದ್ರೆ ಈಗ ಇಂಜಿನಿಯರಿಂಗ್ ಮಡಿ MBA  ಮಾಡಿ. MA ಗಳು MCA ಗಳು ಎಲ್ಲ ಮಾಡಿಯೂ ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿರುತ್ತಾರೆ. ಮೊನ್ನೆ ಮೊನ್ನೆ syntel ಎಂಬ ಕಂಪನಿ ಗೆ ವಾಕ್-ಇನ್ ಇಂಟರ್ವ್ಯೂ ಗೆ ಎಂದು ಹೋಗಿದ್ದೆ. ಇದ್ದ ಉದ್ಯೋಗಾವಕಾಶ ಸುಮಾರು ೬೦ ಅಂತೆ ಅಲ್ಲಿ ೬೦೦೦ ಕ್ಕೂ ಹೆಚ್ಚು ಜನ ಗೇಟ್ ನ ಹೊರಗೆ ಕಾಯುತಿದ್ದೆವು. ಅದರಲ್ಲಿ ೩೦೦೦ ಉತ್ತರ ಭಾರತೀಯರು ಒಂದು ೨೦೦೦ ತಮಿಳುನಾಡು ಮತ್ತು ಆಂಧ್ರ ಮತ್ತು ಕೇರಳಿಗರು ನಮ್ಮ ಜನ ಸುಮಾರು ೧೦೦೦. ಗೇಟ್ ತೆಗೆದಿದ್ದೆ ತಡ ಒಳ್ಳೆ ತಿರುಪತಿ ವೆಂಕಟರಮಣನ ದರ್ಶನಕ್ಕೆ ಭಕ್ತರು ನುಗ್ಗುವಂತೆ ನುಗ್ಗಲು ಆರಂಭಿಸಿದರು. ನಾನು ನನ್ನ ಗೆಳೆಯ ನುಗ್ಗಲು ಸಾಧ್ಯವಾಗದೆ ಬೇಡ syntel ಸಹವಾಸ ಎಂದು ವಾಪಾಸ್ ಬಂದೆವು.ಇಂತಹ ಅದೆಷ್ಟೋ ನಿದರ್ಶನಗಳು ನಮ್ಮ ಮುಂದೆ ಇದ್ದೇ ಇವೆ 

ನನ್ನ ಗೆಳೆಯ ಯಾದವ್ ಮತ್ತು ನನ್ನಲ್ಲಿ ಹೀಗೆ ಹಲವರು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ.  ನೆನ್ನೆ ಒಂದು  ಚರ್ಚೆ ನಡೀತು. ನನ್ನ ಅಣ್ಣನ ಮಗನ್ನ ಸ್ಕೂಲ್ ಗೆ ಸೇರಿಸಿದ್ದಾರೆ. nursery  ಗೆ  ಅವ್ರು  ಕಟ್ಟಿರೋ  ಶುಲ್ಕ  ೭೦,೦೦೦,  ನಾನು ಶಾಲೆಗೆ ಸೇರಿದ ವರ್ಷದಿಂದ ೭ನೆ ತರಗತಿಯವರೆಗೂ ನನ್ನ ಶಾಲೆಯ ಶುಲ್ಕ ವರ್ಷಕ್ಕೆ ೨೭ರು ಮಾತ್ರ ಪ್ರೌಢ ಶಾಲೆಯಲ್ಲಿ ವರ್ಷಕ್ಕೆ ೮೦೦ರು ಮತ್ತು polytechnic ವರ್ಷಕ್ಕೆ ೭೦೦೦, ಮತ್ತು ಇಂಜಿನಿಯರಿಂಗ್ ವರ್ಷಕ್ಕೆ ೩೫೦೦೦. ನನ್ನ ವಿದ್ಯಾಭ್ಯಾಸವೆಲ್ಲ ನನ್ನ ಅಣ್ಣನ ಮಗ ತನ್ನ ಪ್ರೈಮರಿ ಶಿಕ್ಷಣ ಮುಗಿಸೋ ಅಷ್ಟರಲ್ಲಿ ಅಗೋ ಖರ್ಚಲ್ಲಿ ಮುಗಿದು ಹೋಗಿರುತ್ತದೆ ಅಲ್ಲವೇ?? ಅದಕ್ಕೆ ಯಾದವ್ ಹೇಳ್ದ ಮಗಾ ಮೊದಲೆಲ್ಲ ವಿದ್ಯೆ ಕಳಿಸಿ ಗುರುದಕ್ಷಿಣೆ ಕೇಳ್ತಾ ಇದ್ರೂ ಆದರೆ ಈಗ ಮೊದಲೇ ಗುರುದಕ್ಷಿಣೆ ತೊಗೋತಾರೆ ಆದ್ರೆ ಮಕ್ಕಳು ವಿದ್ಯೆ ಕಲಿತರೋ ಇಲ್ಲವೋ ಯಾರು ಕೇರ್ ಮಾಡಲ್ಲ ಅಂತ. ನನಗು ಅನ್ನಿಸ್ತು ಯಾದವ್ ಮಾತು ಶೇಕಡಾ ನುರಕ್ಕಿಂತ ಹೆಚ್ಚು ಸತ್ಯ.

ನನ್ನ ಮತ್ತೊಬ್ಬ ಗೆಳೆಯ ಒಂದು ಖಾಸಗಿ ಶಾಲೆಯಲ್ಲಿ ಕನ್ನಡ ಮೇಷ್ಟ್ರಾಗಿ ಕೆಲಸ ಮಾಡುತಿದ್ದಾನೆ. ಅವನು ಹೊಸತಾಗಿ ಕೆಲಸಕ್ಕೆ ಸೇರಿದ್ದ ಸಮಯ. ತರಗತಿಯಲ್ಲಿ ಬಹಳಷ್ಟು ಅಸಭ್ಯವಾಗಿ ವರ್ತಿಸುತಿದ್ದ ಒಂದಷ್ಟು ಹುಡುಗರಿಗೆ ಬೆತ್ತದ ರುಚಿ ತೋರಿಸಿದ್ದಾನೆ. ಅಷ್ಟೇ ಮಾರನೆಯ ದಿನವೇ ಅ ಹೊಡೆಸಿಕೊಂಡ ಮಕ್ಕಳ ತಂದೆ ತಾಯಂದಿರು ಬಂದು ಅವರ ಶಾಲೆಯ 
ಮುಖ್ಯೋಪಾಧ್ಯಾಯಿನಿಗೆ ದೂರು ನೀಡಿದ್ದಾರೆ. ನನ್ನಪ್ಪನಿಗೆ ಟೀಚರ್ ಹೊಡೆದರು ಎಂದು ಹೇಳಿದ್ದರೆ  ಮತ್ತೂ  ಮನೆಯಲ್ಲಿ ಒದೆ ಬೀಳುತಿತ್ತು. ನನ್ನ ಗೆಳೆಯನನ್ನ ತನ್ನ ಕೊನೆಗೆ ಕರೆಸಿಕೊಂಡ ಮೇಡಂ ನೋಡಪ್ಪ ಮಕ್ಕಳು  ಎಷ್ಟಾದರೂ  ತೀಟೆ ಮಾಡಿಕೊಳ್ಳಲಿ. ನೀನು ಅವರ ಮೇಲೆ ಕೈ ಮಾಡಬೇಡ, ಅಕಸ್ಮಾತ್ ಮಾಡಿದ್ದೆ ಆದರೆ ನಿನ್ನ ಕೆಲಸ  ಕಳೆದು ಕೊಳ್ಳಬೇಕಾದೀತು ಎಂಬ ಎಚ್ಚರಿಕೆ ನೀಡಿದ್ದಾರೆ. ಅದಕ್ಕೆ ನನ್ನ ಗೆಳೆಯ  ಮೇಡಂ  ಒಳ್ಳೆಯ  ಮಾತಿನಲ್ಲಿ  ಕೇಳದಿದ್ದರೆ  ಮಕ್ಕಳನ್ನು ತಿದ್ದುವುದದರು ಹೇಗೆ ಎಂದನಂತೆ. ಅದಕ್ಕೆ ಮೇಡಂ ಅಕಸ್ಮಾತ್ ಅವರು ಒಳ್ಳೆಯ  ದಾರಿ  ಹಿಡಿಯಲಿಲ್ಲವೆಂದರೆ ಅದು ಅವರ  ಕರ್ಮ  ನಿನಗ್ಯಾಕೆ  ಚಿಂತೆ  ಎಂದರಂತೆ.  ಅಪ್ಪಿ ತಪ್ಪಿ  ನಿಂಬೆ ಹುಳಿಯನ್ನು  ಮರೆತು ಬಾಯಲ್ಲೇ ಇಟ್ಟುಕೊಂಡು ಮೇಡಂ ಕೈಲಿ ಸಿಕ್ಕಿ ಬಿದ್ದರೆ ಗೆಣುವಿನ ಮೇಲೆ  ಬೆತ್ತದಿಂದ  ಹೊಡೆಯುತಿದ್ದ ನಮ್ಮ  ಟೀಚರ್ಗಳೆನಾದ್ರೂ ಈಗಿನ ಕಾಲದ ಮಕ್ಕಳಿಗೆ ಸಿಕ್ಕಿದ್ದರೆ, ಒಂದು ದಿನವು ಮೇಡಂ ಕೆಲಸದಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ     

ನಮ್ಮ ವಿದ್ಯಾಭ್ಯಾಸ ಪದ್ಧತಿ ಹೇಗಿರುತ್ತದೋ ಮಕ್ಕಳು ಹಾಗೆ ಇರುತ್ತಾರೆ. ಮಕ್ಕಳಿಗೆ ಹೆಚ್ಚು ಹೊಮೆವೊರ್ಕ್ ಕೊಡುವ ಹಾಗಿಲ್ಲ ಮಕ್ಕಳಿಗೆ ಹೊಡೆಯುವ ಹಾಗಿಲ್ಲ, ಅವರಿಗೆ ಮೊಬೈಲ್ ಫೋನ್ ಕೊಡಿಸಬೋಹುದು. ಇಂಟರ್ನೆಟ್ ಮುಂತಾದ ಸುಲಭವಾಗಿ ಅನಾನುಕುಲವಾಗಿಯೂ ಮಾರ್ಪಡಬಲ್ಲ ಅವಕಾಶಗಳನ್ನು ಒದಗಿಸುವುದು ಎಲ್ಲವು ಇದ್ದರೆ ಮಕ್ಕಳ ಭವಿಷ್ಯ ಉದ್ದಾರ. ನಿಮಗೆ ಗೊತ್ತಿರುತ್ತದೆ ಅನುಭವವು ಆಗಿರುತ್ತದೆ ಎಷ್ಟು ಜನ ಹಿಗ್ಹ್ ಸ್ಕೂಲ್ ಮಕ್ಕಳು ಇ ನಡುವೆ ಸಂಜೆ ಶಾಲೆಯಿಂದ ಬಂದೊಡನೆ ಆಟ ಆಡುವುದಕ್ಕೆ ಹೋಗದೆ facebook ನಲ್ಲಿ ಚಾಟಿಂಗ್ ಮಾಡುತ್ತ ಕುಡುತ್ತಾರೆ ಎಂದು.
ಎಷ್ಟೇ ಅಗಲಿ ಮಕ್ಕಳ ಭವಿಷ್ಯ ಜೋಪಾನ ಗೆಳೆಯರೇ.......



    

Wednesday, October 5, 2011

ಮರೆಯಲಾಗದ ಲಾಟರಿ ಟಿಕೆಟ್

ಕಾಲೇಜ್ ನ ಗೋಡೆಯ ಮೇಲೆ ಹೋಗೆ ಬಿಡುತ್ತಾ ನಾನು ಮತ್ತು ಬಾಸ್ ಬಂಡಾರಿ ಕುಳಿತಿದ್ದೆವು. ಸಿಗರೇಟನ್ನು ಘಾಡವಾಗಿ ಎಳೆದ ಭಂಡಾರಿ ಎಲ್ಲೋ ಶಿಷ್ಯ ಇನ್ನು ಸಿಂಹ ಬಂದೆ ಇಲ್ಲಾ ಅಂದ. ನಾನು ಒಮ್ಮೆ ಗಡಿಯಾರವನ್ನು ನೋಡಿ ಬಾಸ್ ಈಗ fly ಓವರ್ ಕಾಮಗಾರಿ ನಡೆಯುತ್ತಿದೆ ಅಲ್ವಾ ಟ್ರಾಫಿಕ್ ತುಂಬಾ ಇರತ್ತೆ ಅದಕ್ಕೆ ಲೇಟ್ ಆಗಿರಬೇಕು ಎಂದೆ. ಆಗ ಸಮಯ ಸುಮಾರು ೧೧ ಘಂಟೆ.  ನಾನು ದ್ವಿತೀಯ PUC ಡುಮ್ಕಿ ಹೊಡೆದು ನಮ್ಮ ಸರ್ಕಾರೀ ಕಾಲೇಜ್ ನ ಗೋಡೆಯ ಮೇಲೆ ಕೂತು ಗೆಳೆಯರ ಜೊತೆ ಹರಟೆ ಹೊಡೆಯುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದೆ. ಬಾಸ್ ನಮಗಿಂತ ಒಂದೆರಡು ವರುಷ ಹಿರಿಯರು. ಅವರು ಸಹ ಡಿಪ್ಲೋಮಾ ಇಯರ್ ಬ್ಯಾಕ್ ಆಗಿ ನಮ್ಮ ಜೊತೆಯಲ್ಲೇ ಅಡ್ಡ ಹೊಡೆಯುತಿದ್ದರು. ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟರೆ ಊಟದ  ಸಮಯಕ್ಕೆ ಮತ್ತೆ ಮನೆ ಸೇರುತಿದ್ದಿದ್ದು, ಮತ್ತೆ ಸಂಜೆ ೪ ಕ್ಕೆ ಕ್ರಿಕೆಟ್ ಆಡಲು ಹೊರಟರೆ ಮನೆ ಸೇರುತಿದ್ದಿದ್ದು ರಾತ್ರಿ ೧೦ ಘಂಟೆಗೆ. ಇಂತಹ ನಮ್ಮ ದಿನಚರಿಯಲ್ಲಿ ಸಿಂಹ ಪ್ರತಿ ದಿನ ಸಿಂಹ ಒಂದು ಒಳ್ಳೆಯ ಕೆಲಸ ಮಾಡುತಿದ್ದ. ದ್ವಿತೀಯ PUC ಫೈಲ್ ಆದರು, ಮನೆಗೆ ಒಂದಷ್ಟು ಸಹಾಯವಗುತಿದ್ದ. ಅವನು ಮಾಡುತಿದ್ದ ಕೆಲಸ ನಮ್ಮೂರಿಂದ ಬೆಂಗಳೂರಿಗೆ ಹೋಗಿ ಲಾಟರಿ ಟಿಕೆಟ್ ಕೊಂಡು ತರುವುದು. ಇಷ್ಟಕ್ಕೂ ಸಿಂಹ ಎಂದರೆ ಇವನ ಧೈರ್ಯಕ್ಕೆ ಪ್ರತಾಪಕ್ಕೆ ಕೊಟ್ಟಿರುವ ಬಿರುದೇನಲ್ಲ ಬಿಡಿ. ಅ ವಯಸಿಗೆ ಅವನ ಕಿವಿಯ ಮೇಲೆ ಒಂದೆರಡು ರೋಮ ಹುಟ್ಟಿತ್ತು, ಅದನ್ನೇ ಆಗಾಗ ನಿವುತ್ತ ಸಿಂಹ ಸಿಂಹ ಹಹಹಹ ಎಂದು ವಿಚಿತ್ರವಾಗಿ ಘರ್ಜಿಸುತಿದ್ದ. ಅದಕ್ಕೆ ನಾವು ಆಯಿತು ಬಿಡಪ್ಪ ನೀನು ಸಿಂಹನೆ ಅಂತ ಹಾಗೆ  ಕರೆಯುತಿದ್ದೆವು. ಅವನ ನಿಜವಾದ ಹೆಸರು ಮಹೇಶ್, ಮಹೇಶ್ ಕುಮಾರ್ ಯಾದವ್  

ಪ್ರತಿ ದಿನ ಬೆಳಿಗ್ಗೆ ೭ ಘಂಟೆಗೆ ಬಸ್ ಹತ್ತುತಿದ್ದ, ೮ ಘಂಟೆಗೆ ಮೆಜೆಸ್ಟಿಕ್ ಸೇರಿ ಮೆಜೆಸ್ಟಿಕ್ ಚಿತ್ರ ಮಂದಿರದ ಪಕ್ಕದಲ್ಲಿರುವ ಲಾಟರಿ complex ನಿಂದ ಒಂದು ದೊಡ್ಡ ಕಿಟ್ ಬ್ಯಾಗ್ ತುಂಬ ಲಾಟರಿ ಟಿಕೆಟ್ ತುಂಬಿಕೊಂಡು, ಮತ್ತೆ ೧೧ ಘಂಟೆ ಅಷ್ಟರಲ್ಲಿ ನಮ್ಮೂರು ಸೇರುತಿದ್ದ. ಬಂದೊಡನೆ ನಮ್ಮ ಮಾಮೂಲಿ ಅಡ್ಡ ಅದ ಸರ್ಕಾರೀ ಕಾಲೇಜ್ ನ ಕಾಂಪೌಂಡ್ ಬಳಿಗೆ ಸಿಗರೇಟು ತರುತಿದ್ದ ನಮಗೂ ಅದರ ಒಂದೆರಡು ದಮ್ಮಿನ ಭಾಗ ಸಿಗುತಿತ್ತು. ಅದ್ಯಾಕೋ ಅವತ್ತೇ ಅವನು ಬಂದಿಲ್ಲ, ಸಮಯ ೧೧-೩೦ ಆಯಿತು ಆದರು ಸಿಂಹ ಬಂದಿಲ್ಲ. ನಾನು ಭಂಡಾರಿಗೆ ಬಾಸ್. ಇವತ್ತು ಸಿಂಹ ಬರಲ್ಲ ಅನ್ಸುತ್ತೆ ಬನ್ನಿ ಬಾಸ್ ಮನೆಗೆ ಹೋಗಣ ಅಂದೆ. ಅದಕ್ಕೆ ಭಂಡಾರಿ ಸರಿ ನಡಿ ಶಿಷ್ಯ ಅಂತ ಸೈಕಲ್ ನ carrier ಹತ್ತಿದರು. ನನ್ನ ಹಳೆಯ rally ಸೈಕಲ್ ನ ಎಷ್ಟು ತುಳಿದರು ಮುಂದಕ್ಕೆ ಸಾಗುತ್ತಿರಲಿಲ್ಲ, ಬಾಸ್ ತುಂಬಾ ಧಡೂತಿ ಎಂದು ಭಾವಿಸಬೇಡಿ ಅವರು ಹೆಸರಿಗಷ್ಟೇ ಬಾಸ್ ಇದ್ದದ್ದು ಬರೀ  40kg ಸೈಕಲ್ ಗೆ ಸರಿಯಾಗಿ ಸರ್ವಿಸ್ ಮಾಡಿಸಿರಲಿಲ್ಲ ಅಷ್ಟೇ....     

ಸಂಜೆ ೪ ಆಯಿತು ಎಲ್ಲರು ಕ್ರಿಕೆಟ್ ಆಡಲು ಮೈದಾನ ಸೇರಿದ್ದವು. ಆದರೆ ಸಿಂಹ ಅಲಿಯಾಸ್ ಮಹೇಶ ಇನ್ನು ಬಂದಿಲ್ಲ. ನಮ್ಮ ಗೆಳೆಯರಲ್ಲೆಲ್ಲ ಗುಸುಗುಸುಗಳು. ಯಾಕಂದ್ರೆ ಸಿಂಹ ಲಾಟರಿ ಟಿಕೆಟ್ ತರಲು ಬಹಳಷ್ಟು ಹಣವನ್ನು ಹೊತ್ತು ಹೋಗುತಿದ್ದ ಬರುವಾಗ ಲಕ್ಷಾಂತರ ಲಾಟರಿ ಟಿಕೆಟ್ ತರುತಿದ್ದ. ಯಾರ ಬಳಿಯಲ್ಲೂ ಮೊಬೈಲ್ ಫೋನ್ ಗಳು ಇರಲಿಲ್ಲ. ಅದೇನು ದುಡ್ಡು ಹೊಡೆದುಕೊಂಡು ಪರರಿಯಾದನೋ ಅಥವಾ ಯಾರಾದ್ರು ನಮ್ಮ ಹುಡುಗನ್ನ ಕೊಳ್ಳೆ ಹೊಡೆದರೋ. ಎಲ್ಲರಿಗು ಒಂದೊಂದು ರೀತಿಯ ಚಿಂತೆ. ಚಿಂತೆಯಲ್ಲೇ toss ಹಾರಿಸಿ ಕ್ರಿಕೆಟ್ ಆಟ ಶುರು ಮಾಡಿದೆವು. ಆಡುತ್ತಿರುವಾಗಲು  ಸಹ ನಮಗೆಲ್ಲ ಅವನದೇ ಚಿಂತೆ. ಆಟ ಮುಗಿಸಿ ವಿಕೆಟ್ ಮತ್ತು ಬ್ಯಾಟ್ ಬಾಲ್ ಎತ್ತಿಡಲು ಹೊರಡಬೇಕು ಅಷ್ಟರಲ್ಲಿ ಮೈದಾನದ ಒಂದು ಮೂಲೆಯಿಂದ ಮಹೇಶ ಒಳ ಬರುವುದನ್ನು ಗಮನಿಸಿದೆವು. ಇನ್ನೇನು ಬಳಿಬರಬೇಕು ಅಷ್ಟರಲ್ಲೇ ಎಲ್ಲರಿಂದಲೂ ಪ್ರಶ್ನೆಗಳ ಸರಮಾಲೆ. ಏನೋ ಮಗ ಯಾಕೋ ಬಂದಿಲ್ಲ ಎಲ್ ಹೋಗಿದ್ದೆ ಏನ್ ಸಮಾಚಾರ ಹೀಗೆ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರದಲ್ಲಿ ಸುಮ್ಮನಾಗಿಸಿದ್ದ ಅದು ಏನು ಅಂದರೆ ಮಗ ಉಪ್ಪಾರ್ ಪೇಟೆ ಪೋಲಿಸ್ ಸ್ಟೇಷನ್ ಗೆ ಎತ್ತಕ್ಕೊಂಡೋಗಿದ್ರು ಮಗ ಅಂದ. ನಮಗೆಲ್ಲ ಒಂದು ಕ್ಷಣ ಭಯ ಆಯಿತು ಆದರು ಸ್ವಲ್ಪ ಹೊತ್ತು ಸಮಾಧಾನ ಮಾಡ್ಕೊಂಡು ಒಂದು ಪ್ಯಾಕ್ ಸಿಗರೇಟು ತಂದು ಎಲ್ಲರು ಸೇದಿ ನಂತರ ಅವನ ಕಥೆ ಮುಂದುವರೆಸಲು ಕೇಳಿದೆವು..

ಎಂದಿನಂತೆ ಅಂದು ಸಹ ತನ್ನ ದೊಡ್ಡ ಕಿಟ್ ಬ್ಯಾಗ್ ತುಂಬಾ ಲಾಟರಿ ಟಿಕೆಟ್ ತರುತಿದ್ದನಂತೆ. ದಾರಿಯಲ್ಲಿ ಒಬ್ಬ constable  ತಡೆದು ವಿಚಾರಣೆ ಮಾಡಿದ್ದಾನೆ. ಮಹೇಶನ ಬಳಿ ಎಲ್ಲ ದಾಖಲೆ ಇದ್ದರು ಸಹ ಕರೆದುಕೊಂಡು ಹೋಗಿ ಸ್ಟೇಷನ್ ಅಲ್ಲಿ ಕೂರಿಸಿದ್ದಾರೆ. ಮಹೇಶ ಹೆದರಿ ಸ್ಟೇಷನ್ ಅಲ್ಲಿ ಕೂತಿರುವಾಗ ಬರುವ ಪೋಲಿಸು ಗಳೆಲ್ಲ ಇವನ ಬಳಿ ಬರುವುದು ಲೋ ಏನೋ ನಿಂದು ಕೇಸ್ ಅನ್ನೋದು. ಓಹೋ ಲಾಟರಿ ಮಾರ್ತ್ಯ ಲಾಟರಿ, ಅಂತ ಒಂದು ಅವಾಜ್ ಹಾಕೋದು ಹೋಗೋದು ಮಾಡುತಿದ್ದರಂತೆ. crime ನವರು, ಮಾಮೂಲಿ ಪೋಲಿಸ್ ನವರು, ಬರುವ ಪೋಲಿಸ್ ರ ಶಿಷ್ಯಕೋಟಿಗಳು ಎಲ್ಲರು ಇವನ ಬಳಿ ಬರುವುದು ಬಯ್ಯುವುದು ಹೋಗುವುದು  ಮಾಡಿ ಮಹೇಶನಿಗೆ ಭಯದ ಪರಮಾವಧಿಯನ್ನು ತೋರಿಸಿದ್ದಾರೆ. ಲೋಕೆಪ್ ನಲ್ಲಿ ಒಬ್ಬ ಕಳ್ಳ ಕುತಿದ್ದನಂತೆ ಅವನನ್ನು ನೋಡಿಸಿ ಪೇದೆಯೊಬ್ಬ ಅವನು  ನಿನ್ನಂತಯೇ  ಲಾಟರಿ ಮರುತಿದ್ದ ನೋಡು ಅದಕ್ಕೆ ಬೇಡಿ ಹಾಕಿ ಕುಡಿಸಿರುವುದು ಅ ಕಳ್ಳನನ್ನು ಅಲ್ವೇನೋ ಅಂದರೆ ಭಯದಿಂದ ನಡುಗಿ ಹೌದು ಹೌದು ಅಂದಿದ್ದಾನೆ ಆಗಂತು ಮಹೇಶನಿಗೆ ಯಾಕಾದ್ರು ಇ ಕೆಲಸಕ್ಕೆ ಬಂದೆನೋ ಅನಿಸಿಬಿಟ್ಟಿದೆ. 

ಅಷ್ಟರಲ್ಲೇ inspector  ಬಂದಿದ್ದಾರೆ. ಬಂದವರು ಇವನನ್ನು ನೋಡಿ enri ಇವನದು ಕೇಸ್ ಅಂದಾಗ ಪೇದೆ ಸರ್ ಲಾಟರಿ ಮರ್ತ ಇದ್ದ ಸರ್ ಅಂದಿದ್ದಾನೆ  inspector  ಬಂದು ದಾಖಲೆ ಪರೀಕ್ಷೆ  ಮಾಡಿ  ಎಲ್ಲವು ಸರಿಯಗಿದ್ದಿದ್ದನ್ನು ಗಮನಿಸಿ  ಪೇದೆಗೆ ಒಂದಷ್ಟು ಬೈದು ಇವನನ್ನು ಮನೆಗೆ ಹೋಗಪ್ಪ ಎಂದು ಕಳುಹಿಸಿದ್ದಾರೆ . ಆಚೆ ಭಾರದ ಕಿಟ್ ಬ್ಯಾಗ್ ಹೊತ್ತು ತಂದ ಮಹೇಶನಿಗೆ ಪೇದೆ ಏನಪ್ಪಾ ಉಟಕ್ ಒಂದಿಪ್ಪತ್ತು ಕೊಟ್ಟು ಹೋಗು ಅಂದನಂತೆ. ಅದಕ್ಕೆ ಜೇಬಲ್ಲಿದ್ದ  monthly ಪಾಸು ತೋರಿಸಿ ಸರ್ ಇದನ್ನು  ಬಿಟ್ಟು  ೫ ಪೈಸೆ ಸಹ ಇಲ್ಲ ಸರ್ ಅಂತ ಹೊರಟು  ಬಂದಿದ್ದಾನೆ. ಒಟ್ಟಿನಲ್ಲಿ ಪೇದೆ ಮಾಡಿದ  ಅವಾಂತರ ನಮ್ಮ ಗೆಳೆಯರಲೆಲ್ಲ ಆತಂಕ ಸೃಷ್ಟಿ  ಮಾಡಿತ್ತು. ಇಷ್ಟೆಲ್ಲಾ ಕಥೆ ಹೇಳಿದ ಮೇಲೆ ಮಹೇಶ ತನ್ನ ಕಿವಿಯ  ಕೂದಲುಗಳನ್ನು ನಿವುತ್ತ ಹಹಹಹ ಸಿಂಹ ಹೆಂಗೆ ಪೋಲಿಸ್ ಸ್ಟೇಷನ್ ಎಲ್ಲ ನೋಡ್ಕೊಂಡು ಬಂದೆ ಅಂತ ಘರ್ಜಿಸಲು ಶುರು ಮಾಡಿದ್ದ. ಈಗ ಮಹೇಶ ಸಿನಿಮ ರಂಗದಲ್ಲಿ  ಸಹಾಯಕ ನಿರ್ದೇಶಕನಾಗಿ ದುಡಿಯುತಿದ್ದಾನೆ. ಇತ್ತೀಚಿಗೆ ಸಿಕ್ಕಾಗ ಈ ಘಟನೆಯ ಬಗ್ಗೆ ಮಾತನಾಡುತ್ತ, ನಮ್ಮ ಓದುಗರಿಗೂ ಈ ಘಟನೆಯ ಬಗ್ಗೆ ಹೇಳ ಬೇಕು ಎನಿಸಿತ್ತು ಹೇಳಿಬಿಟ್ಟೆ :)..... 

*******************************************************************************