Monday, November 22, 2010

ನಿನ್ನೊಂದಿಗೆ ಬೆಸೆದಿತ್ತು ನನ್ನ ಇ ಜೀವ

ನೀಡುತ್ತಿದ್ದೆ ನೀ ಎಂದೆಂದು ಕಿರುನಗೆಯ
ಅದನರಿಯುವಷ್ಟು ಬುದ್ಧಿವಂತ ನಾ ಆಗಲಿಲ್ಲ
ತೋರುತಿದ್ದೆ ನೀ ಎಂದೆಂದು ಬಿಂಕ ಬಿನ್ನಾಣ
ಬಲವಂತದಿ ಪ್ರೀತಿಸಲು ನನಗೆ ತಿಳಿದಿರಲಿಲ್ಲ
ಕೋಪದಿ ಕಿರುಚಾಡಿ ಬಿಟ್ಟೆ ನೀ ಮಾತು
ಕತ್ತಲಾಯಿತು ನನಗೆ ಮಧ್ಯಾಹ್ನದ ಹೊತ್ತು
ಹೇಳಿದೆ ನಿನ್ನಯ ಗೆಳತಿ ಬಳಿ ದೂರು
ನನ್ನ ತಪ್ಪು ತಿದ್ದುವಳು ನೀ ಅಲ್ದೆ ಯಾರು
ದೂರವಾದೆ  ನನ್ನ ಬಿಟ್ಟು ಸಹಿಸಲಾರೆ ಇ ನೋವ
ನಿನ್ನೊಂದಿಗೆ ಬೆಸೆದಿತ್ತು ನನ್ನ ಇ ಜೀವ

                                         ನೋವಿನಿಂದ ಪವನ್:-

Thursday, November 18, 2010

21ರ ಅನುಭವ part1

 ಆಗಿನ್ನೂ ವಯಸ್ಸು ಇಪ್ಪತ್ತೊಂದಷ್ಟೇ ಡಿಪ್ಲೋಮಾ ಮುಗಿಸಿದ ನನಗೆ ಹಣ ಸಂಪಾದಿಸುವ ಹುಚ್ಚು. ಆ ಹುಚ್ಚು ನನ್ನ ಕುಟುಂಬದವರ ಇಂಜಿನಿಯರಿಂಗ್ ಓದಿಸುವ ಆಸೆಯನ್ನು ನುಚ್ಚು ನೂರು ಮಾಡಿತ್ತು. ಯಾವುದೊ ಖಾಸಗಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ hardware ಮತ್ತು networking  ಕಲಿಯುತ್ತಿದ್ದೆ. ೭ ತಿಂಗಳ ಅವಧಿಯ course ಅದ್ದರಿಂದ ಮನೆಯಲ್ಲೇ ಕೂತು ಕಾಲಹರಣ ಮಾಡುವ ಬದಲು ಯಾವುದಾದರು ಕೆಲಸಕ್ಕೆ ಹೋಗಿ ಹಣ ಸಂಪಾದಿಸೋಣವೆಂದು ಕೆಲಸದ ಬೇಟೆಗೆ ಹೊರಟೆ. ನನ್ನ ಸ್ನೇಹಿತ ಪುತ್ರ ಅದಾಗಲೇ ಸಂಗೀತ mobiles ನಲ್ಲಿ ಕೆಲಸ ಮಾಡುತಿದ್ದ, ಅವನ ನಿರ್ದೆಶನದಂತೆ ಯಾವುದೋ interview ಗೆ ಹೊರಟೆ. ನನ್ನ ಜೊತೆಗೆ ಮತ್ತೊಬ್ಬ ಸ್ನೇಹಿತ ನವೀನ್ ಸಹ ಬಂದಿದ್ದ ಮೊದಲ interview ನಲ್ಲೆ ಇಬ್ಬರಿಗೂ ಕೆಲಸ ಸಿಕ್ಕಿತು ಮಾರ್ಕೆಟಿಂಗ್ executive ೬೦೦೦ ಸಂಬಳ ಆಹಾ!! ಏನೋ ಸಂತೋಷ, ಆ ಕೆಲಸ ಸಿಕ್ಕಿದ ಖುಷಿಯಲ್ಲಿ ದಿನಪೂರ್ತಿ ನನ್ನ ಮುಖದಲ್ಲಿ ಮಂದಹಾಸ ಕಡಿಮೆಯೇ ಆಗಿರಲಿಲ್ಲ. ಮಾರನೆಯ ದಿವಸ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾದೆ ಆಗ ನಮ್ಮ ಎಜಮನರು ಒಂದು fire extinguisher ತಂದು ಮುಂದಿಟ್ಟು industrial areas ಗೆ ಹೋಗಿ ಕಂಪನಿಗಳಿಗೆ ಇದನ್ನು ಮಾರಾಟ ಮಾಡಿ ಬನ್ನಿ ಎಂದರು. ಡಿಪ್ಲೋಮಾ e & ce ಓದಿದ ನನಗೆ fire extinguisher ಮಾರುವ ಕೆಲಸ, ಸರಿ ಯಾವ ಕೆಲಸ ಆದರು ಅದನ್ನು ಶ್ರದ್ಧೆಯಿಂದ ಮಾಡಬೇಕು ಎಂದುಕೊಂಡು ನಾನು ಮತ್ತು ನನ್ನ ಸ್ನೇಹಿತ fire entinguisher ಮತ್ತು ಒಂದಷ್ಟು brouchers ಮತ್ತು ವಿಸಿಟಿಂಗ್ ಕಾರ್ಡ್ಗಳನ್ನು ಹೊತ್ತು ಬೊಮ್ಮಸಂದ್ರ industrial area ಗೆ ನಡೆದೆವು . ಯಾವ ಕಂಪನಿಗಳ ಬಾಗಿಲಿಗೆ ಹೋದರು watchman ಗಳು ಒಳಗೆ ಬಿಡುತ್ತಿರಲಿಲ್ಲ ಅಲ್ಪ ಸ್ವಲ್ಪ ಇಂಗ್ಲಿಷ್ ನಲ್ಲೆ getout ಅಂದು ಬಿಡುತಿದ್ದರು, ಆ ದಿನವೆಲ್ಲ ಅಲೆದು ಅಲೆದು ಸುಸ್ತಾಗಿ ಮತ್ತೆ ಆಫಿಸಿಗೆ ಬಂದು ಸರ್ ನಮ್ಮಿಂದ ಇ ಕೆಲಸ ಸಾಧ್ಯವಿಲ್ಲ ದಯವಿಟ್ಟು ಕ್ಷಮಿಸಿ ಎಂದು ಹೇಳಿ ಮನೆಗೆ ಹೊರಟುಬಿಟ್ಟೆವು.............. ಮುಂದೆ ಇದೆ ಮಾರಿಹಬ್ಬ........

ನನ್ನೀ ಮನಸಿಗೇನೋ ಆಗಿ ಹೋಗಿದೆ

ನನ್ನೀ ಮನಸಿಗೇನೋ ಆಗಿ ಹೋಗಿದೆ
ನಿದಿರೆಯೊಳಗು ನಿನ್ನಾ ರೂಪ ಕಾಡುತಿದೆ
ನನ್ನೀ ನಾಲಿಗೆಗೆನೋ ಆಗಿ ಹೋಗಿದೆ
ಕ್ಷಣ ಕ್ಷಣಕು ನಿನ್ನ ಹೆಸರನ್ನೇ ತೊದಲುತಿದೆ
ನನ್ನ ಹೆಸರಲು ನನ್ನ ಉಸಿರಲು
ನಿನ್ನಾ ಹೆಸರೇ ಸೇರಿ ಹೋಗಿದೆ
ನಿಂತಲ್ಲು ಕುಂತಲ್ಲು ಓಡಾಡುವಾಗಲು
ನಿನ್ನಾ ನೆನಪೇ ನನ್ನ ಕಾಡುತಿದೆ

|| ನನ್ನೀ ಮನಸಿಗೇನೋ ಆಗಿ ಹೋಗಿದೆ||

ನನ್ನ ನರ ನಾಡಿಯಲು ನಿನ್ನಾ ಹೆಸರೇ ಹರಿಯುತಿದೆ
ನನ್ನ ಮೈಯ ಮೇಲಿರುವ ಪ್ರತಿ ರೋಮದಲು ನಿನ್ನಾ ಪ್ರೀತಿಯಿದೆ
ನನ್ನ ಎದೆಯನ್ನು ಬಗೆದು ತೆಗೆದರೆ ನಿನ್ನ ಚಿತ್ರವೇ ಕಾಣುವುದು
ನನ್ನ ತುಟಿಗಳ ಅಂಚಿನಲಿ ನಿನ್ನ ಹೆಸರೇನೆ ಇರುವುದು

|| ನನ್ನೀ ಮನಸಿಗೇನೋ ಆಗಿ ಹೋಗಿದೆ||

ನಿನ್ನ ಪ್ರೀತಿಯ ಮಾತು ಕೇಳುತ ಪಲ್ಲವಿಯನೆ ಮರೆತೆ
ರಾಗ ತಾಳಗಳ ಸಂಗಮವಿಲ್ಲದೇ ಹಾಡುವುದನ್ನು ಕಲಿತೆ
ನಿನ್ನ ಪ್ರೀತಿಯೇ ತಳವಾದಾಗ ಕುಣಿಯೋನು ನಾನಲ್ಲವೇ
ನನ್ನ ಪ್ರೀತಿಯ ತಿಳಿದುಕೊಳ್ಳುವ ಪ್ರಿಯತಮೆ ನಿನಲ್ಲವೇ

|| ನನ್ನೀ ಮನಸಿಗೇನೋ ಆಗಿ ಹೋಗಿದೆ|

Wednesday, November 17, 2010

ಭರವಸೆ ನೀಡಿ ಗೆಳೆಯರೆ

ಹುಸಿಯಾಗಿದೆ ನನ್ನ ಕನಸುಗಳು 
ಹುಡುಕಬೇಡಿ ಗೆಳೆಯರೆ
ಚದುರಾಯಿತು ನನ್ನ ಆಸೆಗಳು 
ಚಿಂತಿಸಬೇಡಿ  ಗೆಳೆಯರೆ 
ಬದುಕಾಯಿತು ಬವಣೆಯ ಆಟಗಳು 
ಗೆಲ್ಲಿಸಬೇಡಿ ಗೆಳೆಯರೆ
ನಾ ಸೋತು ಸುಣ್ಣವಾದರೂ 
ಬದುಕು ಸಾಗಿಹೋದರು
ನೀ ಗೆಲ್ಲುವೆ ಎಂಬ ಭರವಸೆಯ ಮಾತೆ ಸಾಕು ಗೆಳೆಯರೆ 
ಆ ಭರವಸೆ ನೀಡಿ ಗೆಳೆಯರೆ 

ಅಮ್ಮ

ಮುತ್ತು ನೀಡಿ ಬೆಳೆಸಿದಳು
ಮುದ್ದೆ ಮಾಡಿ ತಿನಿಸಿದಳು
ಮುತ್ತಿನಂತ ಹೆಣ್ಣವಳು ತಾಯಿ
ಮುದ್ದು ಮಾತ ಕಲಿಸಿದಳು
ಪುಟ್ಟ ಹೆಜ್ಜೆ ಇಡಿಸಿದಳು
ಎಲ್ಲರಿಗು ಮಿಗಿಲವಳು ತಾಯಿ
ಹೇಗಂತ ತೀರಿಸಲಿ ತಾಯಿಯ ಋಣವ
ಅವಳೇ ತಾನೆ ಕಣ್ಣ ಮುಂದೆ ಕಾಣಿಸೋ ದೈವ ........


ದೂರ ಹೋಗದಿರು ಗೆಳತಿ

ಈ ಪ್ರಿತೀಲಿ ಸುಳ್ಳಿಲ್ಲ
ಸುಳ್ಳಿನ ಪ್ರೀತಿ ಗೊತ್ತಿಲ್ಲ
ಹೇಳದೆ ಕೇಳದೆ ದೂರ ಮಾಡೋ ಅಸೆ ನಿನಗೆ ಬಂತಲ್ಲ
ಕಾಡಿದೆ  ಏಕೆ ಇಷ್ಟು ದಿನ
ಕರುಣೆ ಇಲ್ಲದ ಪ್ರೀತಿನಾ
ಪ್ರೀತಿಯ ಮಾಯೆಯ ನಿಜವೆಂದರಿತ ತಪ್ಪಿಗೆ ಶಿಕ್ಷೆ ಇದುವೇನ
ಕಂಬನಿ ಕೂಡ ಬತ್ತಿದೆಯೇ ಅತ್ತು ಕೇಳಲು
ಪ್ರಿತ್ಸಿಲ್ಲ ನ ನಿನ್ನ ಬಿಟ್ಟು ಹೋಗಲು
ದೂರ ಮಾಡಲು

ನನ್ನೀ ಮನಸೇ ನನ್ನೀ ಮನಸೇ


 ನನ್ನೀ ಮನಸೆ ನನ್ನೀ ಮನಸೇ
ಹೊಸ ಹೊಸ ಕನಸೆ ಹಸಿಬಿಸಿ ವಯಸೇ
ಹುಡುಕುತಿದೆ ಹುಡುಕುತಿದೆ ಈ ಕಣ್ಣು ನಿನಗಾಗಿ
ಬಡಿಯುತಿದೆ ಬಡಿಯುತಿದೆ ಈ ಹೃದಯ ನಿನಗಾಗಿ 

|| ನನ್ನೀ ಮನಸೇ ನನ್ನೀ ಮನಸೇ ||

ಎಲ್ಲರ ನಡುವೆ ಪ್ರೇಮಿಗಳ 
ತೆಗಳುವ ಜನರೇ ಬಲು ಬಹಳ
ಪ್ರೀತಿಯ ಹೇಳದೆ ಪ್ರೀತಿಸುವ ಹುಡುಗರು ಬಹಳ ವಿರಳ 
ನಿತ್ಯ ನಿನ್ನದೇ ಹುಡುಕಾಟ
ನಿನಗಾಗೆ ಈ ಪರದಾಟ
ನೀನೆ ಇಲ್ಲದೆ ಹೋದರೆ ನಾನು ಸೂತ್ರ ಇಲ್ಲದ ಗಾಳಿಪಟ
ಹೆದರುತಿದೆ ಹೆದರುತಿದೆ ನಿನ್ನಾ ನೋಡಲು
ಬಾ ನೀನೆ ಎದೆ ಬಳಿಗೆ ಅದರ ತುಡಿತಾ ಕೇಳಲು

|| ನನ್ನೀ ಮನಸೇ ನನ್ನೀ ಮನಸೇ ||
ನಿನ್ನೀ ಪ್ರೀತಿಯ ನಂಬಿರುವೆ
ಅದಕಾಗೆ ನ ಅಲೆದಿರುವೆ
ಪ್ರೀತಿಯ ಹುಡುಕುತ ಹುಡುಕುತ ನನ್ನ ಗುರಿಯನ್ನೇ ನಾ ಮರೆತಿರುವೆ
ನೆನೆಯುತಲಿರುವೆ ಪ್ರತಿ ನಿಮಿಷ
ಕಾಯುವೆ ನಿನಗೆ ಹಲವರುಷ
ನನ್ನೀ ಪ್ರೀತಿಯ ಅರಿತರೆ ನೀನು ನನಗೆ ತುಂಬ ಹರುಷ
ತೊದಲುತಿದೆ ತೊದಲುತಿದೆ ಪ್ರೀತಿ ಹೇಳಲು
ಕಲಿಯೇ ನೀನು ತೊದಲುವ ಭಾಷೆ ಪ್ರೀತಿ ತಿಳಿಯಲು

|| ನನ್ನೀ ಮನಸೇ ನನ್ನೀ ಮನಸೇ ||

ಪಯಣ

ಮಾತು ಮಾತಲ್ಲಿ ಪ್ರೀತಿಯ ತೋರಣ
ಮನಸಿನ ಆಳದಲಿ ಆಸೆಯ ಹೂರಣ
ಇ ಒಂಟಿ ಹೃದಯಕೆ
ಹೊಸದೊಂದು ಲೋಕಕೆ
ಅಗಲಿ ಪಯಣ ಪ್ರೀತಿಯ ಪಯಣ

ಹನಿಗವನ

ಅವಳ ಆ ಪ್ರತಿಯೊಂದು ಕುಡಿನೋಟಕೆ
ಅವಳ ಆ ಚಿನಕುರಳಿ ಮಾತಿಗೆ
ಅವಳ ಆ ಮುದ್ದಾದ ನಗುವಿಗೆ
ಅವಳ ಆ ಲತೆಯಂತ ನಡಿಗೆಗೆ
ಮನಸೋತು ಬರೆದು ಕೊಟ್ಟೆ ನಾ ಕವನ
ಅದ ನೋಡಿ ಆ ಬೆಡಗಿ ಹೇಳಿದಳು (2)
ನನ್ boyfriend ಹೆಸರು ಮೋಹನ
ಬರೆದು ಕೊಡಿ ಅವನ ಹೆಸರಲ್ಲೊಂದು ಕವನ

ಯಾವಾಗಲು ನಗ್ತಾ ಇರಿ :-
ಪವನ್