ಶರವೇಗ ನನ್ನುಗುಳು
ಒಂದೊಂದು ಉಗುಳಿಗೂ ಒಂದೊಂದು ಜೀವ
ಯಾರ ಸಾವಿನ ನಾದವೋ ಹಿಡಿದವನೆ ಬಲ್ಲ
ನಿಶ್ಯಭ್ದಕ್ಕು ಬದ್ದ ನಾನು
ಸದ್ದು ಮಾಡುವುದರಲ್ಲೂ ಮುಂದು
ನಿಪುಣ ನಾ ನಿರಪರಾಧಿ ಕೂಡ
ಕೊಲ್ಲುವುದು ನನ್ನುಗುಳಾದರು ತಪ್ಪು ನನದಲ್ಲ
ನನ್ನ ಹಿಡಿಯುವವನ ಮನಸು
ಶಾಂತಿಯ ಗುಡಿಸಿಲಿನಲಿ ಇಲ್ಲ
ಕೋಪ ತಾಪಗಳ ಸೆರೆಮನೆಯಲುಂಟು
ಉದ್ವೇಗ ಮನವೆಲ್ಲ ಮೂಡಿಬಂದಿರಲು
ನಾನು ನಾನೆಂಬ ಅಹಂನ ಹಂಗಿನಲ್ಲುಂಟು
ಜೀವ ತೆಗೆದರಷ್ಟೇ ಸಮಾಧಾನ ಅವನಿಗೆ
ಸಾಯುವ ತನುಗಿಂತ ಕವಡೆಗೆ ಬೆಲೆಯುಂಟು
ಎಷ್ಟು ಸಾವು ನೋಡಿಹೆನೋ ಲೆಕ್ಕವೇ ಇಲ್ಲ
ಹೊಗೆಯಾಗಿ ನಿಟ್ಟುಸಿರ ಬಿಟ್ಟಿರುವೆ ಕೂಡ
ಮದ ಮತ್ಸರವು ನನಗಿಲ್ಲ
ನನ್ನ ಹಿಡಿದವನ ಸೊತ್ತು ಅದು
ಕೊಂದವನು ನಿರ್ದಯಿ ಸಾಯುವವ ದುರ್ದೈವಿ
ಕೋವಿಯು ನಾ ಮೂಕ ಸಾಕ್ಷಿಯಿಲ್ಲಿ
ಕೋವಿಯು ನಾ ಮೂಕ ಸಾಕ್ಷಿಯಿಲ್ಲಿ
ಹೊಸ ಪ್ರಯತ್ನ :)
ಪವನ್ ಪಾರುಪತ್ತೇದಾರ :-
ಒಂದೊಂದು ಉಗುಳಿಗೂ ಒಂದೊಂದು ಜೀವ
ಯಾರ ಸಾವಿನ ನಾದವೋ ಹಿಡಿದವನೆ ಬಲ್ಲ
ನಿಶ್ಯಭ್ದಕ್ಕು ಬದ್ದ ನಾನು
ಸದ್ದು ಮಾಡುವುದರಲ್ಲೂ ಮುಂದು
ನಿಪುಣ ನಾ ನಿರಪರಾಧಿ ಕೂಡ
ಕೊಲ್ಲುವುದು ನನ್ನುಗುಳಾದರು ತಪ್ಪು ನನದಲ್ಲ
ನನ್ನ ಹಿಡಿಯುವವನ ಮನಸು
ಶಾಂತಿಯ ಗುಡಿಸಿಲಿನಲಿ ಇಲ್ಲ
ಕೋಪ ತಾಪಗಳ ಸೆರೆಮನೆಯಲುಂಟು
ಉದ್ವೇಗ ಮನವೆಲ್ಲ ಮೂಡಿಬಂದಿರಲು
ನಾನು ನಾನೆಂಬ ಅಹಂನ ಹಂಗಿನಲ್ಲುಂಟು
ಜೀವ ತೆಗೆದರಷ್ಟೇ ಸಮಾಧಾನ ಅವನಿಗೆ
ಸಾಯುವ ತನುಗಿಂತ ಕವಡೆಗೆ ಬೆಲೆಯುಂಟು
ಎಷ್ಟು ಸಾವು ನೋಡಿಹೆನೋ ಲೆಕ್ಕವೇ ಇಲ್ಲ
ಹೊಗೆಯಾಗಿ ನಿಟ್ಟುಸಿರ ಬಿಟ್ಟಿರುವೆ ಕೂಡ
ಮದ ಮತ್ಸರವು ನನಗಿಲ್ಲ
ನನ್ನ ಹಿಡಿದವನ ಸೊತ್ತು ಅದು
ಕೊಂದವನು ನಿರ್ದಯಿ ಸಾಯುವವ ದುರ್ದೈವಿ
ಕೋವಿಯು ನಾ ಮೂಕ ಸಾಕ್ಷಿಯಿಲ್ಲಿ
ಕೋವಿಯು ನಾ ಮೂಕ ಸಾಕ್ಷಿಯಿಲ್ಲಿ
ಹೊಸ ಪ್ರಯತ್ನ :)
ಪವನ್ ಪಾರುಪತ್ತೇದಾರ :-
ನನ್ನ ಗೆಳೆಯನ ಕವಿಹೃದಯ ಯಾಕೋ ಸ್ವಲ್ಪ ದುಗುಡದಲ್ಲಿ ಕೋವಿನೊಳಗಿಣುಕಿದಂತಿದೆ. ಬದುಕಿನ ಗೋಡೆಯ ಒಂದು ಕೊಕ್ಕೆಗೆ ನೇತು ಹಾಕಿದ ಕೋವಿ ಉಸಿರಾಡಿ ಬಿಟ್ಟಿದೆ ಇಲ್ಲಿ!
ReplyDeleteಚೆನ್ನಾಗಿದೆ ಪವನ್.