Tuesday, January 17, 2012

ಬುದ್ಧಿ ಮಾತು


ಚಪ್ಪಲಿಯ ಕೊನೆಯು ಕಿತ್ತು ಹೋಗಿತ್ತು
ಹಿಮ್ಮಡಿ ಅರ್ಧ ನೆಲವ ನೆಕ್ಕಿತ್ತು
ಅಂಗಿಯಲಿ ಆಕಾಶ ನೋಡ ಬಹುದಿತ್ತು
ಅರಮನೆ ತುಸು ದೂರ ನಡೆಯಬಹುದಿತ್ತು
ಆಸೆಯ ಹೊರೆಯಂತು ಹೆಗಲ ಮೇಲಿತ್ತು

ಸಗಣಿ ನೀರನು ರಾಚಿ ಅಂಗಳವ ತೊಳೆದರು
ರಂಗೋಲಿ ತುಂಬೆಲ್ಲ ಬಣ್ಣಗಳ ತುಂಬಿದರು
ಅಸೆ ಪಟ್ಟಿಯ ಎಲ್ಲ ದೇವರುಗಳ ಮುಂದಿಟ್ಟರು
ನಿನ್ನದಷ್ಟೇ ನಿನಗೆ ಲಭ್ಯವೋ ಮನುಜ

ಕೊಟ್ಟಿದ್ದು ತನಗೆಂದು ನಂಬಿ ಕೂರಲೆ ಬೇಡ
ಹೆಚ್ಚಾಗಿ ಎಂದಿಗೂ ಬಚ್ಚಿಡಲು ಬೇಡ
ಕೊಡೆ ಹಿಡಿಸಿಕೊಳ್ಳೋ ಜನರೇನೆ ಎಲ್ಲ
ಹತ್ತಿದ ಏಣಿಗೆ ಮರ್ಯಾದೆ ಇಲ್ಲ
ಸಹಕಾರ ಉಪಕಾರ ನೆನೆಯೊರೆ ಇಲ್ಲ
ಊರಿನ ಉಸಾಬರಿ ನಿನಗೆ ಬೇಕಿಲ್ಲ

ಸುಮ್ನೆ ಹೀಗೆ ಬುದ್ಧಿ ಮಾತು ಪವನ್ :-

1 comment:

  1. ಹೆಗಲ ಮೇಲಿದ್ದ ಆಸೆಯ ಹೊರೆಯ ಹಿಂದಿನ ರಹಸ್ಯ ಕೊನೆಗೆ ನೋವನ್ನೇ ನೀಡಿದೆ.ಕವನದ ಮೊದಲ ನಾಲ್ಕು ಸಾಲುಗಳಂತೂ ಗಂಭೀರ ಚಿಂತನೆಯವು.ಊರಿನ ಉಸಾಬರಿ ನಿನಗೆ ಬೇಕಿಲ್ಲ ಎನ್ನುವಾಗ,ಊರಿಗುಪಕಾರ ಹೆಣಕ್ಕೆ ಶೃಂಗಾರ ಗಾದೆಯನ್ನು ನೆನಪಿಸಿತು.ಒಂದು ಮಾರ್ಮಿಕ ಕವನವಿದು.

    ReplyDelete