Sunday, January 29, 2012

ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ


ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ತುಂಬಿರಲಿ ಬಿಂದಿಗೆ ಹಲವು ಭಾವಗಳ ಜೊತೆಗೆ
ಹಾಸ್ಯದ ಮಿತಿಯಿರಲಿ ವಿರಹದ ಕುರುಹಿರಲಿ
ಸ್ನೇಹದ ಅರಿವಿರಲಿ ಪ್ರೀತಿಯ ಪರಿವಿರಲಿ
ನೋವಿನ ಲೇಪವು ಆಗಾಗ ಅಗುತಲಿ
ಕಲ್ಪನೆಯ ಶಿಲೆಯಾಗಿ ಕೆತ್ತುವ ತಂತ್ರವ
ಕಲಿಸಿ ಕೊಡು ಬಾರಮ್ಮ ಶಾರದೆ
ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ನೋವಿನ ಮನಸಿಗೆ ಸಾಂತ್ವಾನ ನೀಡಲಿ
ನಲಿವಿನ ಕ್ಷಣಗಳಿಗೆ ಸಾಕ್ಷಿಯೂ ಅಗಲಿ
ದಾರಿ ತಪ್ಪಿದ ಮನಕೆ ದಿಕ್ಸೂಚಿ ತೋರಲಿ 
ದಣಿದ ಹೃದಯಕ್ಕೆ ಹಿಡಿ ಧೈರ್ಯ ನೀಡಲಿ
ಎಲ್ಲ ಭಾವಗಳನು ಪದಗಳಲಿ ತುಂಬುವ  
ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ನೋವಾಗದಿರಲಿ ನನ್ನ ಭಾವಗಳಿಂದ
ಮಗುವಷ್ಟೇ ಮುಗ್ಧತೆ ಅಡಕವಾಗಿರಲಿ
ಅತಿರೇಕ ಎಂದಿಗೂ ಮುಟ್ಟದೆ ಇರಲಿ 
ಅರ್ಥವಾಗದ ಭಾವ ವ್ಯರ್ಥವಾದೀತು    
ಆಗದಿರಲಿ ಸೀಮಿತ ನನಗಷ್ಟೇ ನನ ಭಾವ
ಎಲ್ಲರ ಹೃದಯದಳು ಬಂಧಿಯಾಗಿರಲಿ
ಸಾಗರವ ಮೀರಿಸುವ ಅಪರಿಮಿತ ಶಕ್ತಿಯ 
ಭಾವ ಬಿಂದಿಗೆಯ ಭಿಕ್ಷೆ ನೀಡಮ್ಮ ಶಾರದೆ
ತಾಯಿ ಶಾರದೆ ಎಲ್ಲರನ್ನು ಆಶೀರ್ವದಿಸಲಿ 
ಪವನ್ :-  

2 comments:

  1. ಕವಿತೆ ಹರಡಿಕೊಂಡಿರುವ ವಿಸ್ತಾರ ನಿಜಕ್ಕೂ ತುಂಬಾ ಸೋಜಿಗದ್ದು.. ಕವಿಯ ಹುಟ್ಟಿನ ಕಾರಣಗಳ ಜಾಡಿಡಿದು ಹೊರಟವನು ಶಾರದೆಯಲ್ಲಿ ಮೊರೆಯಿಡುವ ಪರಿ ತುಂಬಾ ಸೊಗಸಾಗಿದೆ.. ಕವಿ ಎಲ್ಲಾ ಭಾವಗಳಿಗೂ ಪ್ರತಿನಿಧಿಯಾಗುತ್ತಾನಂತೆ.. ಪ್ರೀತಿ, ಪ್ರೇಮ, ವಿರಹ, ನೋವುಗಳಿಗೆ ದನಿಯಾಗುವ ಕವಿಮನದ ಹೃದಯ ವೈಶಾಲ್ಯತೆಗೆ ಹಿಡಿದ ಕೈಗನ್ನಡಿ ಈ ಕವಿತೆ.. ಇಷ್ಟೇ ಅಲ್ಲದೆ ಕವಿ ತೊಟ್ಟಿಲ ಕಂದನ ನಗುವಾದಂತೆ, ತೊಟ್ಟಿಯ ಕಂದನ ಆಕ್ರಂದನವೂ ಆಗುತ್ತಾನೆ, ನೋವು, ಹತಾಶೆ ಮತ್ತು ವಿಡಂಬನೆಗಳ ಪ್ರತಿನಿಧಿಯೂ ಆಗುತ್ತಾನೆ.. ಅವನು ಅವತರಿಸದ ಭಾವವೇ ಇಲ್ಲ.. ಆ ಎಲ್ಲಾ ಭಾವಗಳನ್ನು ಕವಿತೆಯಲ್ಲಿ ಹದಗೊಳಿಸಿರುವ ನಿಮ್ಮ ಜಾಣ್ಮೆ ಶ್ಲಾಘನೀಯವಾದುದು..:))) ತುಂಬಾ ಹಿಡಿಸಿತು ಕವಿತೆ ಪವನಣ್ಣ..

    ReplyDelete
  2. ಶುಕ್ರವಾರಕ್ಕೆ ತಕ್ಕುದಾಗಿದೆ ಈ ಸರಸ್ವತಿ ಪೂಜೆ.

    ಸರ್ವವೂ ಸಭ್ಯವಾಗಲಿ ಎನ್ನುವ ನಿಮ್ಮ ಆಶಯಕ್ಕೆ ಶರಣು.

    ನನ್ನ ಬ್ಲಾಗಿಗೂ ಬನ್ನಿರಿ.

    ReplyDelete