Friday, January 6, 2012

ಸರಿ ಶ್ರುತಿಯೋ ಅಪಶ್ರುತಿಯೋ


ತಂತಿ ಮೀಟುವಾಗೆಲ್ಲ ಬರಲೇಬೇಕೇನು ಇಂಪಾದ ರಾಗ
ಬದುಕಿನ ಅರಿವಿಲ್ಲದೆ ಬದುಕ ವೀಣೆ ನುಡಿಸಲು ಹೊರಟಾಗ
ಬದುಕ ವೀಣೆಯಲಿ ನೀ ಎಷ್ಟೇ ಪಳಗಿದರು
ಅಪಶ್ರುತಿಯ ರಾಗಗಳು ಮೂಡುವುದು ಹಲವಾರು
ಕಿತ್ತು ಹೋಗದು ತಂತಿ ನೀ ಹೇಗೆ ಮೀಟಿದರು
ರಾಗ ಹೊಮ್ಮುವುದಷ್ಟೇ ಅದರ ಕೆಲಸ
ಸರಿ ಶ್ರುತಿಯೋ ಅಪಶ್ರುತಿಯೋ ನುಡಿಸಿದರೆ ನೀನು
ಬೈಗುಳವೋ ಹೊಗಳಿಕೆಯೋ ಕಾಯುವುದೇ ಕೆಲಸ

ಅಭಿಮಾನ ಉಳ್ಳವರು ಅಪಶ್ರುತಿಯ ಕೇಳಿದರೂ
ಪಕ್ಕವಾದ್ಯವ ಬೆರಸಿ ಗೆಲುವನ್ನು ಕೊಡಿಸುವರು
ಅನುಮಾನ ಉಳ್ಳವರು ನೋಡಿ ನೋಡದಂತಿರುವರು
ಸರಿಶ್ರುತಿಯು ಕಂಡಾಗ ಹಿಂದೆಯೇ ಬರುವರು
ಅಹಂಕಾರ ಉಳ್ಳವರು ನಿನ್ನ ಕಡೆ ನೋಡರು
ನೀ ಒಮ್ಮೆ ಗೆದ್ದಾಗ ಧಗ ಧಗನೆ ಉರಿಯುವರು

ನಿನ್ನ ರಾಗವ ನೀನು ಸರಿಯಾಗಿ ತಿಳಿದಿಕೋ
ಜೀವನದ ತಾಳವನ್ನು ಸರಿಯಾಗಿ ಹಾಕಿಕೋ
ನಿರ್ಧಾರಗಳನ್ನೇ ಶ್ರುತಿಪೆಟ್ಟಿಗೆಯ ಮಾಡಿಕೋ
ಸರಿಯಾದ ಶ್ರುತಿಯನ್ನು ಬದುಕಿನಲಿ ತಂದುಕೋ
ರಾಗದ ಹೊಳೆಯೇ ಹರಿಯುವುದು ಬದುಕಿನಲಿ
ಸಂಗೀತದಂತೆ ಹಿತವಿಹುದು ನಿನ್ನ ಈ ಬಾಳಲಿ

ಬದುಕಿನ ರಾಗ ತಾಳ ತಪ್ಪದಿರಿ ಗೆಳೆಯರೆ ಪವನ್ :-

2 comments:

  1. ತುಂಬಾ ಅದ್ಭುತ ಹಾಗೂ ಅರ್ಥಪೂರ್ಣವಾದ ಕವಿತೆ ಇದು.ಓದಲು ಅತ್ಯಂತ ಹಿತವಾಗುವುದು.ನಿನ್ನ ರಾಗವ ನೀನು ಸರಿಯಾಗಿ ತಿಳಿದಿಕೋ
    ಜೀವನದ ತಾಳವನ್ನು ಸರಿಯಾಗಿ ಹಾಕಿಕೋ .....ಈ ಮಾರ್ಮಿಕ ನುಡಿಗಳಂತೂ ಚಿಂತನಾ ಲಹರಿಯನ್ನೇ ಬದಲಿಸುವಂತದ್ದು.
    ಅಭಿಮಾನ ಉಳ್ಳವರು ಅಪಶ್ರುತಿಯ ಕೇಳಿದರೂ
    ಪಕ್ಕವಾದ್ಯವ ಬೆರಸಿ ಗೆಲುವನ್ನು ಕೊಡಿಸುವರು
    ....ಈ ಸುಂದರ ಮುನ್ನೋಟದ ನುಡಿಗಳನ್ನು ಜೀವನ ಪೂರ್ತಿ ಸ್ವೀಕರಿಸಬಾಕಾದ್ದು.ಒಬ್ಬ ಸೃಜನಶೀಲ ಚಿಂತಕನಿಂದ ಮೂಡಿ ಬಂದಿರುವ ಈ ಕವಿತೆ ಬದುಕಿನ ನುಡಿತೋರಣವಾಗಿ ಅನಾವರಣಗೊಂಡಿದೆ.

    ReplyDelete
  2. ವಿಚಾರಗಳ ಒಳಹೊಕ್ಕು ಅವುಗಳಿಗೆ ಕವನದ ತಂತಿ ತೊಡಿಸಿ ಬದುಕಿನ ರಾಗ ಹೇಗೆ ಹಾಡಬೇಕೆಂಬ ಭಾವಕ್ಕೆ ಮರುಳಾದೆ ಪವನ್. ಅದ್ಭುತ.

    ReplyDelete