Thursday, June 14, 2012

ವೈತರಣಿ


ಎಷ್ಟು ಪವಿತ್ರನಾಗಿದ್ದ ಅವನು
ಕಷ್ಟದಲಿ ಇದ್ದರೂ ನಿಷ್ಠನಾಗಿದ್ದ
ಹಿರಿಯರಿಗೆ ಗೌರವ ಕಿರಿಯರಿಗೆ ಮನ್ನಣೆ
ಹೆಂಗಳೆಯರೆಂದರೆ ಅಮ್ಮನದೇ ಅಕ್ಕರೆ

ಎಷ್ಟು ಮುಗ್ಧನಾಗಿದ್ದ ಅವನು
ಮಗುವೂ ಒಮ್ಮೊಮ್ಮೆ ನಾಚುವಂತಿದ್ದ
ಎಲ್ಲವನು ತಿಳಿದು ಏನನ್ನು ತೋರದೆ
ಲೋಕದಲಿ ತಾನಿನ್ನೂ ವಿದ್ಯಾರ್ಥಿ ಎಂದಿದ್ದ

ಇಂದು ಹಾಗಿಲ್ಲ
ನದಿಯು ದಿಕ್ಕ ಬದಲಿಸಿದಂತೆ
ಹುಣ್ಣಿಮೆ ಕಳೆದು ಅಮವಾಸ್ಯೆ ಬಂದಂತೆ
ತೋರ್ಪಡಿಕೆ ಅಸೂಯೆಯ ಕಲ್ಮಶವ ತುಂಬುವ
ವೈತರಣಿಯಾದನಲ್ಲ

ಬರಬಾರದಿತ್ತೇನೋ ಆಸ್ತಿ ಐಶ್ವರ್ಯ
ಬರಬಾರದಿತ್ತೇನೋ ಹೆಸರು ಮರ್ಯಾದೆ
ಒಳ್ಳೆತನ ಹರಿಸಿ ದಣಿವಾಯಿತೇನೊ ಮನವು
ನಿಂತು ಸುಖ ಪಡುವ ಮನಸು ಮಾಡಿದನಲ್ಲ

ವೈತರಣಿಯಾದನಲ್ಲ

ಪವನ್ ಪಾರುಪತ್ತೇದಾರ :-

2 comments:

  1. ಪವನ್ ಗೆಳೆಯ,

    ಕೆಲ ಮನುಷ್ಯರೇ ಹಾಗೇ ಇಲ್ಲದಾಗ ಹಗ್ಗವಾಗಿರುವವರು, ಧನವಂತರಾದ ಕೂಡಲೇ ಹಾವುಗಳಾಗಿಬಿಡುತ್ತಾರೆ!!!

    ಶೀರ್ಷಿಕೆಯ ಕ್ಲಿಷೆ ಅರ್ಥಪೂರ್ಣವಾಗಿದೆ.

    ನನ್ನ ಬ್ಲಾಗಿಗೂ ಸ್ವಾಗತ.
    www.badari-poems.blogspot.com

    ReplyDelete