ಅಂದು ಕೇಜಿಗಟ್ಟಲೆ ತೂಕ ಹೊತ್ತು
ಪಹರೆ ನಡೆಸುತಿದ್ದ ಇವನು
ನೀರಿನ ಬಾಟಲಿಗಳು
ಕೈಲೊಂದು ಮೆಷಿನ್ ಗನ್ನು
ತನ್ನ ಕಾಲ್ಗಳಿಗಿಂತಲೂ ತೂಕವಾದ ಬೂಟುಗಳು
ಹಿಮದೊಳ್ ಮುಳುಗೆದ್ದು ಬೆಳ್ಳಗಾಗುತಿತ್ತು
ಮಡದಿಯಿಂದ ಬಂದಿದ್ದ ಪ್ರೇಮ ಪತ್ರ
... ತಮ್ಮನ ಅಂಕಪಟ್ಟಿಯ ಜೆರಾಕ್ಸ್ ಪ್ರತಿ
ಅಪ್ಪ ಅಮ್ಮನ ಆರೋಗ್ಯದ ವರದಿ
ಮಗಳ ಆಟವಾಡುತ್ತಿರುವ ಫೋಟೋ
ಇವೆಲ್ಲವೂ ಆ ಕ್ಷಣದಲ್ಲಿ ನಗಣ್ಯವಾಗಿತ್ತು
ತೂಕದ ಬ್ಯಾಗಿನೊಳಗೆ ಯಾವ ಮೂಲೆಯಲ್ಲಿ
ಮನೆ ಮಾಡಿತ್ತೋ ಗಮನವೇ ಇಲ್ಲ
ಇದ್ದದ್ದೆಲ್ಲಾ ಒಂದೇ ಆಲೋಚನೆ
ಶತ್ರುವಿನ ಮೇಲೆ ಗೆಲ್ಲುವುದು ಹೇಗೆ
ಬೆನ್ನು ತೋರಿಸಿದರೆ ಹೇಯ ಅಪಮಾನ
ಮುಂದೆ ನುಗ್ಗಿದರೆ ಸಾವಿಗಾಹ್ವಾನ
ಮಗಳ ಆಟದ ಮತ್ತಷ್ಟು ಫೋಟೋಗಳು ಬೇಕೋ
ತನ್ನ ಫೋಟೋಗೆ ದೇಶದೆಲ್ಲರ ನಮನ ಬೇಕೋ
ಎಲ್ಲ ಮರೆತೋಯ್ತು
ತನ್ನ ಮನೆ ತನ್ನ ಜನ ತನ್ನ ಜಾತಿ ತನ್ನ ಕುಲ
ಹೊಳೆದಿದ್ದು ಒಂದೇ ಅದು ತನ್ನ ದೇಶ
ನುಗ್ಗಿ ಕೊಂದಿದ್ದ ಶತ್ರು ಸೈನಿಕರ
ಘನವಾಗಿಸಲು ತನ್ನ ದೇಶದ ಘನತೆ
ಮರಳಿ ಬಂದಿದ್ದ ಹೆಮ್ಮೆಯಿಂದ ನಗುತ
ವೀರ ಮರಣದ ಉಡುಗರೆಯ ಜೊತೆಗೆ
ವೀರ ಮರಣದ ಉಡುಗರೆಯ ಜೊತೆಗೆ
ಪವನ್ ಪಾರುಪತ್ತೇದಾರ
No comments:
Post a Comment