Friday, February 1, 2013

ಒಂದಷ್ಟು ವಿರಹ ಒಂದಷ್ಟು ವಿರಸ


ಈ ದೂರ ಬೇಕಿತ್ತು ಎನಗೆ
ನಿನ್ನಪ್ಪಣೆಯಿಲ್ಲದೆ ಉಸಿರೂ ಬಿಡದೆ
ತೊಳಲುತಿದ್ದ ಎನಗೆ ಈ ದೂರ ಬೇಕಿತ್ತು
ಮತ್ತೆ ನನ್ನ ಈ ಬರಿಯ ಎದೆಯೊಳು
ನಿನ್ನ ಮೆರವಣಿಗೆಯ ಮಾಡಲು
ಒಂದಷ್ಟು ವಿರಹ ಒಂದಷ್ಟು ವಿರಸ ಬೇಕಿತ್ತು

ಯಾರೋ ಜ್ಞಾನಿಗಳು ಹೇಳಿದರು
... ಪ್ರೀತಿಯೆಂದರೆ ಸನಿಹ
ನನಗನಿಸಿದ್ದು ನಿಜವಿರಬಹುದು
ಪ್ರೀತಿಯೆಂದರೆ ವಿರಹ
ಅವಳ ಸನಿಹಕ್ಕೆ ಹಾತೊರೆವ ಮನವಿದ್ದು
ಅವಳ ಕಂಡೊಡನೆ ಹೃದಯದ ಬಲ್ಬು ಹತ್ತಿರಲು
ವಿರಹದ ಬೇಗೆಗು ತಂಪನೀಯುವ ಯೋಗ

ಯಾರೋ ಜ್ಞಾನಿಗಳು ಹೇಳಿದರು
ಪ್ರೀತಿಯೆಂದರೆ ಸರಸ
ನನಗನಿಸಿದ್ದು ನಿಜರಬಹುದು
ಪ್ರೀತಿಯೆಂದರೆ ವಿರಸ
ಮುನಿಸಿಕೊಂಡಾಗೆಲ್ಲ ಮತ್ತೆ ಬಳಿಬಂದು
ಮುದ್ದಾಗಿ ಪ್ರೇಮಿಯನು ತಭ್ಭಿಕೊಂಡಾಗಲೆ
ವಿರಸದ ಛಾಯೆಗೆ ಸರಸದ ಬೆಳಕು

ಪ್ರೀತಿಯ ದಾರಿಗೆ ಎಲ್ಲವೂ ಬೇಕು
ವಿರಸ ಸರಸವಾಗಲಿ
ವಿರಹ ಸನಿಹವಾಗಲಿ
ವಿರಸಕ್ಕೆ ಕೊನೆಯೆಂದು
ವಿರಹಕ್ಕೆ ಮನನೊಂದು
ಸೋಲದಿರು ಪ್ರೇಮಿ ಈ ಪ್ರೀತಿ ತೊರೆದು
ಸೋಲದಿರು ಪ್ರೇಮಿ ಈ ಪ್ರೀತಿ ತೊರೆದು

ಪವನ್ ಪಾರುಪತ್ತೇದಾರ :-

No comments:

Post a Comment