Wednesday, March 21, 2012

ನಗು ಉಕ್ಕಿ ಬಂದಿತ್ತು


ನಗು ಉಕ್ಕಿ ಬಂದಿತ್ತು
ಮತ್ತೇನು ತೋಚದ ಮನಸ್ಸು
ಮತ್ತಷ್ಟು ಮೊಗವನ್ನರಳಿಸಿ
ಕಣ್ಣಿನಲ್ಲೊಂದು ಮಿಂಚು ಹರಿಸಿ
ಮೊಗದ ನರಗಳನೆಲ್ಲ ನಾಟ್ಯಮಾಡಿಸಿತ್ತು
ನಗು ಉಕ್ಕಿ ಬಂದಿತ್ತು

ಸಲುಗೆಯ ಮಿತಿ ನಾವು ದಾಟಿರಲೇ ಇಲ್ಲ
ಸುಮ್ಮನೆ ಇನ್ನೊಬ್ಬರ ಕೊಂಕಿಸಿಯೂ ಇಲ್ಲ
ಹೀಯಾಳಿಸುವಾಸೆ ಇಬ್ಬರಿಗು ಇರಲಿಲ್ಲ
ಕಣ್ಣಿನ ಮಾತುಗಳೆ ಇಬ್ಬರಿಗು ತಿಳಿದು
ತಂಪಿನ ಸಂಜೆಯನೂ ನಾಚಿಸುವಂತಹ
ನಗು ಉಕ್ಕಿ ಬಂತಿತ್ತು

ಹಿಂದಿನದ ನೆನೆದವು ಇಂದಿನದ ನೆನೆದವು
ನಡುವಿನ ಸಮಯದ ಮೆಲುಕು ಮೂಡಿತ್ತು
ಕಿತ್ತಾಟ ಪರದಾಟ ಹೊಡೆದಾಟ ನೆನೆದು
ಮಾತು ಬಿಟ್ಟಂತಹ ಕಹಿ ಘಳಿಗೆ ಕೂಡ
ಸಿಹಿಯಾಗಿ ಮನವನ್ನು ತಣಿಸಿಬಿಟ್ಟಿತ್ತು
ನಗುವು ಉಕ್ಕಿ ಬಂದಿತ್ತು

ಸಣ್ಣ ನಗು ಶತ್ರುವನ್ನೂ ಮಿತ್ರನನ್ನಾಗಿ ಮಾಡುತ್ತದೆ
ಪವನ್ ಪಾರುಪತ್ತೇದಾರ :) :)

1 comment:

  1. ನಿಮ್ಮ ಬ್ಲಾಗ್ ಚೆನ್ನಾಗಿದೆ!
    ನಿಮ್ಮ ಬರವಣಿಗೆಯ ಶೈಲಿ ಇಷ್ಟ ಆಯಿತು ಕವನಕ್ಕೆ ವಸ್ತುಗಳ ಆಯ್ಕೆ ಸೂಪರ್!
    ನಿಮ್ಮ ಒಳಗೆ ಒಬ್ಬ ಒಳ್ಳೆಯ ಕವಿ ಇದ್ದಾನೆ !
    ನೀವು ಮತ್ತಷ್ಟು ಬರೆದು ದೊಡ್ಡ ಕವಿಯಾಗಬೇಕು!
    ಶುಭವಾಗಲಿ ಗೆಳೆಯ ನಿಮಗೆ ..

    ReplyDelete