Thursday, March 8, 2012

ಹೊಗಳುಭಟ್ಟ

ಒಂದು ಕಾಲವಿತ್ತಂತೆ
ಬಹುಪರಾಕಿಗೆ ಬಹುಮಾನ ಇತ್ತಂತೆ
ಅಸೂಯೆಯ ಅಳುಕಿಗು ಅವಮಾನದ ನೋವಿಗೂ
ಬಹುಪರಾಕ್ ಹೇಳಿದರೆ ಸಾಕಂತೆ
ಬಹುಮಾನ ಇತ್ತಂತೆ

ಅಂತರಂಗದ ಸಂತೆಯ ನೋಡುವವರಿರಲಿಲ್ಲ
ಒಳ್ಳೆಯವ ಕೆಟ್ಟವ ಎನ್ನೊ ಹಂಗಿಲ್ಲ
ತನ್ನತನ ಕಳೆದರು ಚಿಂತೆಯೇ ಇಲ್ಲ
ಎದುರಿನವ ಅಟ್ಟದಲಿ ಕೂರಬೇಕಲ್ಲ,
ಬಹುಮಾನವಷ್ಟೆ ಮೊದಲ ಆದ್ಯತೆ ನಿನಗೆ

ಕ್ರೂರಿಯೋ ದ್ರೋಹಿಯೋ ಅರಿವು ನಿನಗಿಲ್ಲ
ಪಾಪದಲಿ ಪಾಲು ನಿನಗು ಬಂತಲ್ಲ
ಬಹುಮಾನವಷ್ಟೆ ಮೊದಲ ಆದ್ಯತೆ ನಿನಗೆ

ಅಂತರಂಗದ ಸಂತೆಯಲಿ ಬಹಳಷ್ಟು ವಸ್ತುಗಳು
ಮೂಲೆಗುಂಪಾಗಿದೆ ಒಳ್ಳೆತನದಿಂದ
ತನ್ನತನ ತಾನೆ ಕಳೆದಿದೆ ಆಸೆಯಿಂದ
ಕ್ರೂರಿಗಳು ದ್ರೋಹಿಗಳು ಮೆರೆಯುವರು ನಿನ್ನಿಂದ
ಪಾಪವದು ಸುತ್ತುತಿದೆ ಹೊಗಳಿಕೆಯ ಸುಳಿಯಿಂದ

ಕೊನೆಗೂಮ್ಮೆ ನಿನಗೆ ಲಭಿಸಿದ ಫಲವೇನು??
ಬಹುಪರಾಕಿಗೊಂದು ಬಹುಮಾನ
ಹೊಗಳುಭಟ್ಟನೆಂಬ ಬಿರುದು....... !

ಪವನ್ ಪಾರುಪತ್ತೇದಾರ :-

1 comment:

  1. ಈ ಕವಿತೆ ಚೆನ್ನಾಗಿದೆ. ಜಗತ್ತು ಕಲಿಸಿದ ಮತ್ತು ಕಲಿಸುವ ಪಾಠ ಇಲ್ಲಿದೆ. ಕಲಿಯುತ್ತಲೇ ಇರಬೇಕಾದಾಗ ಒಂದುಷ್ಟು ಬಹುಪರಾಕಿಗೆ ಆಸೆ ಪಟ್ಟವರ ಮೂಲೆಗುಂಪನ್ನು ಕಾಣುತ್ತಿದ್ದೇನೆ. ಎದೆಯಿಂದ ಪದಗಳಿಗೆ ಹರಿದ ಭಾವ ಈಗಿರಬೇಕು. ಶುಭವಾಗಲಿ.

    ReplyDelete