ಹೊಸ ವರುಷ ನಿಮಗೆಲ್ಲ ಹೊಸ ಹರುಷವ ತರಲಿ
ಈರುಳ್ಳಿ ಬೆಳ್ಳುಳ್ಳಿ ಬೆಲೆ ಕಮ್ಮಿಯಾಗಲಿ
ಹಗರಣಗಳು ಇನ್ನಾದರು ಇರದಾಗಲಿ
ಕಾರ್ಗಿಲ್ ಯೋಧರಿಗೆ ಗೆಲುವಾಗಲಿ
ನಿಮ್ಮೆಲ್ಲರ ಆಸೆಗಳು ಈಡೇರಲಿ
ಹೊಸ ವರುಷ ನಿಮಗೆಲ್ಲ ಹೊಸ ಹರುಷವ ತರಲಿ
ರಾಜಕೀಯ ಇನ್ನಾದರು ಬದಲಾಗಲಿ
ಸ್ವಾರ್ಥಿಗಳು ನಮ್ಮಿಂದ ದೂರಾಗಲಿ
ಸಾಧು ಸಂತರು ಒಳ್ಳೆಯವರಾಗಲಿ
ಸಮಯಕ್ಕೆ ಸರಿಯಾದ ಮಳೆಯಾಗಲಿ
ಹೊಸ ವರುಷ ನಿಮಗೆಲ್ಲ ಹೊಸ ಹರುಷವ ತರಲಿ
ಕನ್ನಡದ ಚಿತ್ರಗಳಿಗೆ ಗೆಲುವಾಗಲಿ
ಹೊಸಬರ ಪ್ರಯತ್ನಗಳು ಫಲ ಕಾಣಲಿ
ಕನ್ನಡಿಗರ ಸಾಧನೆಗಳು ಚಿರವಾಗಲಿ
ಕನ್ನಡಮ್ಮ ನಿನಗೆ ಜಯವಾಗಲಿ
ಹೊಸ ವರುಷ ನಿಮಗೆಲ್ಲ ಹೊಸ ಹರುಷವ ತರಲಿ
ಬದಲಾವಣೆಗಳನ್ನು ಬಯಸುತ್ತ ಪವನ್ :-