Friday, December 31, 2010

ಹೊಸ ವರುಷ ನಿಮಗೆಲ್ಲ ಹೊಸ ಹರುಷವ ತರಲಿ

ಹೊಸ ವರುಷ ನಿಮಗೆಲ್ಲ ಹೊಸ ಹರುಷವ ತರಲಿ 

ಈರುಳ್ಳಿ ಬೆಳ್ಳುಳ್ಳಿ ಬೆಲೆ ಕಮ್ಮಿಯಾಗಲಿ
ಹಗರಣಗಳು ಇನ್ನಾದರು ಇರದಾಗಲಿ
ಕಾರ್ಗಿಲ್ ಯೋಧರಿಗೆ ಗೆಲುವಾಗಲಿ 
ನಿಮ್ಮೆಲ್ಲರ ಆಸೆಗಳು ಈಡೇರಲಿ 

ಹೊಸ ವರುಷ ನಿಮಗೆಲ್ಲ ಹೊಸ ಹರುಷವ ತರಲಿ 

ರಾಜಕೀಯ ಇನ್ನಾದರು ಬದಲಾಗಲಿ 
ಸ್ವಾರ್ಥಿಗಳು ನಮ್ಮಿಂದ ದೂರಾಗಲಿ 
ಸಾಧು ಸಂತರು ಒಳ್ಳೆಯವರಾಗಲಿ
ಸಮಯಕ್ಕೆ ಸರಿಯಾದ ಮಳೆಯಾಗಲಿ 

ಹೊಸ ವರುಷ ನಿಮಗೆಲ್ಲ ಹೊಸ ಹರುಷವ ತರಲಿ 

ಕನ್ನಡದ ಚಿತ್ರಗಳಿಗೆ ಗೆಲುವಾಗಲಿ
ಹೊಸಬರ ಪ್ರಯತ್ನಗಳು ಫಲ ಕಾಣಲಿ
ಕನ್ನಡಿಗರ ಸಾಧನೆಗಳು ಚಿರವಾಗಲಿ 
ಕನ್ನಡಮ್ಮ ನಿನಗೆ ಜಯವಾಗಲಿ 

ಹೊಸ ವರುಷ ನಿಮಗೆಲ್ಲ ಹೊಸ ಹರುಷವ ತರಲಿ 

                                                  ಬದಲಾವಣೆಗಳನ್ನು ಬಯಸುತ್ತ ಪವನ್ :-

1 comment: