Sunday, December 5, 2010

ಹೊಟ್ಟೆ ಕಿಚ್ಚಾಯಿತು ನನಗೆ ಚಂದ್ರನಾ ಮೇಲೆ

ಹೊಟ್ಟೆ ಕಿಚ್ಚಾಯಿತು ನನಗೆ ಚಂದ್ರನಾ ಮೇಲೆ
ಮಕ್ಕಳೆಲ್ಲ ಚಂದಿರನ ತಂದಿರಾ ಎಂದರು
ಹುಡುಗಿಯರೆಲ್ಲ ಚಂದಿರನೆ ಸುಂದರ ಎಂದರು
ಅವನ ಹೊಳಪ ನೋಡಿ ಕಾಣುವ ಇಂದ್ರ ಎಂದರು
ಹೊಟ್ಟೆ ಕಿಚ್ಚಾಯಿತು ನನಗೆ ಚಂದ್ರನಾ ಮೇಲೆ
ಯುದ್ಧ ಮಾಡಲು ಹೊರಟೆ ನಾ ಅವನ ಮೇಲೆ
ಮೊದಲ ದಿನ ಯುದ್ಧದಲಿ ನಾ ಕೆಳಗೆ ಅವ ಮೇಲೆ
ಮುಂದೆರಡು ದಿನ ಸ್ವಲ್ಪ ಕುಗ್ಗಿದ
ಮತ್ತೆರಡು ದಿನ ಮತ್ತಷ್ಟು ನಲುಗಿದ
ಹಾಗೆ ಹದಿನೈದು ದಿನದಲಿ ಗೆದ್ದೇ ನಾ ಅವನ
ಅಮಾವಾಸ್ಯೆಯಂದು ಮುಗಿಸಿದೆ  ಅವನ ಆಕಾಶ ಯಾನ

                                                             ಪವನ್:-

1 comment:

  1. Nimma aashaya galella neraverali pawan.. nam aashayagalu avugale..

    ReplyDelete