Friday, April 29, 2011

ಹುಡುಗರ ಮನಸು-3

         ಮನೆಗೆ ಬಂದ ಪ್ರವೀಣ ಮನೆಯವರ ಜೊತೆ ಕೂತು ಊಟ ಮಾಡಿದ, ಅಪ್ಪ ತಮಾಷೆ ಮಾಡ್ತಿದ್ರು ಪ್ರವಿಣನ ತಂಗಿ ಪೂಜನ ರೇಗಿಸ್ತ ಇದ್ರು, ಪ್ರವಿಣನಿಗೆ ನಗು ಬರದೆ ಇದ್ರೂ ಸಹ ನಗೋ ಹಾಗೆ ನಟಿಸ್ತ ಇದ್ದ ಹಾಗೆ ನಗ್ತಾ ಇದ್ದವರನ್ನ ನೋಡಿ ತನ್ನ ಮತ್ತು ಕಾವ್ಯ ಬಗ್ಗೆ ಯೋಚನೆ ಮಾಡಿ ನಮ್ಮ ಅಪ್ಪ ಅಮ್ಮ ತಂಗಿ ಎಷ್ಟು ಸಂತೋಷವಾಗಿದ್ದರೆ ಅಂದುಕೊಂಡ, ರಾತ್ರಿ ಹತ್ತು ಮೂವತ್ತು ಆಗಿತ್ತು ಪ್ರವಿಣನ ಮೊಬೈಲ್ ಗೆ ಫೋನ್ ಬಂತು ಪ್ರವಿಣನ ಅಪ್ಪ ಯಾರೋ ಇಷ್ಟು ಹೊತ್ತಲ್ಲಿ ಅಂತ ಕೇಳಿದ್ರು ಅದಕ್ಕೆ ಪ್ರವೀಣ ವಿನಯ್ ಅಪ್ಪ ಅಂತ ಹೇಳಿ phone recieve ಮಾಡಿದ ಮಾತಾಡ್ತಾ ಮಾತಾಡ್ತಾ ಆಯಿತು boss ಬರ್ತೀನಿ ಅಂತ ಹೇಳಿ ಫೋನ್ ಇಟ್ಟ. ನಂತರ ಅಮ್ಮ 10 ನಿಮಿಷ ಬಂದೆ ಒಂದು ವಾಕ್ ಹೋಗಿ ಬರ್ತೀನಿ ಅಂದು ಹೊರ ಹೊರಟ. ಮಗ 10 -30 ರಲ್ಲಿ ಹೊರಗೆ ಹೋಗ್ತಾ ಇದ್ದಾನಲ್ಲ ಅನ್ನೋ ಸ್ವಲ್ಪ ಆತಂಕ ಸಹ ಅವನ ತಂದೆ ತಾಯಿಗಿರಲಿಲ್ಲ ಅಷ್ಟು ನಂಬಿಕೆ ಇತ್ತು ಪ್ರವೀಣ ನ ಮೇಲೆ, ವಿನಯ್ ನ ಮೀಟ್ ಅದ ಪ್ರವೀಣ ಏನ್ ಬಾಸ್ ಇಷ್ಟ ಹೊತ್ತಲ್ಲಿ ಅಂದ, ಅದಕ್ಕೆ ವಿನಯ್ ಹಾಗೆ ಮಗ ದಂ ಹೊಡೆಯೋಣ ಬಾ ಅಂತ ಇಬ್ರು ಹೋಗಿ cigarate ಸೇದಿ ಅವರವರ ಮನೆಗಳಿಗೆ ಹೋದರು. ಮನೆಗೆ ಬಾರೋ ಅಷ್ಟರಲ್ಲಿ 11 -30 ಆಗಿತ್ತು ಎಲ್ರೂ ಮಲಗಿದ್ರು, ಪ್ರವೀಣ ಕೂಡ ರೂಮಿಗೆ ಹೋಗಿ ಮಲ್ಕೊಂಡ ಯಾಕೋ ನಿದ್ರೆ ಬರ್ತಾ ಇರ್ಲಿಲ್ಲ, ಕಣ್ಣ ಮುಂದೆ ವಿನಯ್ ಬಂದಿದ್ದ ಅವನು ಅ ರಾತ್ರಿಲಿ ಅರ್ಧ ಘಂಟೆ ತನ್ನ problems ನ ಹೇಳ್ಕೊಂಡಿದ್ದ. ವಿನಯ್ ಗೆ ನನ್ನ ಹತ್ರನೇ ಅ problem share ಮಾಡ್ಕೊಬೇಕು ಅಂತ ಯಾಕೆ ಅನಿಸ್ತು ಅಂತ ಪ್ರವೀಣ ಯೋಚನೆ ಮಡಿದ, ತನ್ನ ಮೇಲೆ ವಿನಯ್ ಗೆ ಎಷ್ಟು ನಂಬಿಕೆ ಅಂತ ತನಗೆ ತಾನೆ ಹೆಮ್ಮೆ ಪಟ್ಕೊಂಡ ಅಷ್ಟರಲ್ಲೇ ಅವನಿಗೊಂದು text message ಬಂದಿತ್ತು ದೂರದ ದಾಯಾದಿ ಅಣ್ಣ forward message ಕಳಿಸಿದ್ದ. ಪ್ರವಿಣನಿಗೆ ಮತ್ತು ಖುಷಿ ಆಯಿತು ತಕ್ಷಣ ಅವನಿಗೆ ಕಾವ್ಯ ನೆನಪಾಯಿತು ಅವಳು ಅನ್ನೋ ಮಾತುಗಳು ಅವಳು ಬೈದು ಕಳಿಸಿರೋ message ಗಳು ಅವನನ್ನ ಕಾಡಕ್ಕೆ ಪ್ರಾರಂಭ ಆಯಿತು ಅ ಕಹಿ ನೆನಪಲ್ಲೇ ನಿದಿರೆಗೆ ಜಾರಿದ್ದೆ ಪ್ರವೀಣ ನಿದಿರೆಲು ಕಾವ್ಯ ಕಳಿಸಿದ್ದ ಅ ಮೆಸೇಜ್ ಗಳು ಕಾಡ್ತಾ ಇತ್ತು ನಾ ಏನ್ ತಪ್ಪು ಮಾಡಿದ್ದೆ ಕಾವ್ಯ I HATE YOU ಅಂದ್ಯಲ್ಲ ಕಾವ್ಯ ಅಂತ ನರಳ್ತಾ ಕನವರಿಸುತ್ತ ಇದ್ದ ಪ್ರವೀಣ. ಆದರೆ ಅವನಿಗೆ ಗೊತ್ತಿಲ್ಲದಂತೆ ನಿರು ಕುಡಿಯಲು ಎದ್ದಿದ್ದ ಪೂಜಾ ಅಣ್ಣನ ವ್ಯಥೆ ನೋಡಿ ಮನದಲ್ಲೇ ಮರುಗಿದಳು 


                                                                                                  ಮುಂದುವರೆಯುವುದು :-

No comments:

Post a Comment