Thursday, April 28, 2011

ಹುಡುಗರ ಮನಸು-2

       ಅಂದಹಾಗೆ ಪ್ರವೀಣನ ಜೊತೆ ಮಾತನಾಡುತಿದ್ದಿದ್ದು ಅವನ girlfriend ಕಾವ್ಯ. ಅವರಿಬ್ಬರು 2 ವರ್ಷ ಆಗಿತ್ತು commit  ಆಗಿ ಪ್ರತಿದಿನ ಫೋನ್ ನಲ್ಲಿ ಒಂದು ಸಾರಿ  ಅದ್ರು ಮಾತಾಡ್ತಾ ಇದ್ರೂ ಕಾವ್ಯ ತನ್ನ ಫ್ರೀ ಮೆಸೇಜ್ ಪೂರ್ತಿ ಪ್ರವೀಣನಿಗೆ ಕಳಿಸ್ತ ಇದ್ಲು ಪ್ರವೀಣ ಕೂಡ ಹೇಗೋ ಕಷ್ಟ ಪಟ್ಟು 100 ಕ್ಕಿಂತ ಹೆಚ್ಚು ಮೆಸೇಜ್ ಕಳಿಸ್ತ ಇದ್ದ ತನು ಬೆಳಗಿನ ಜಾವ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವ ತನಕ ಎಲ್ಲ ವಿಷಯಗಳನ್ನು ಒಂದೂ ಬಿಡದ ಹಾಗೆ update ಮಾಡ್ತಿದ್ದ, ಸಮಯ ಸಿಕ್ಕಾಗೆಲ್ಲ ಅವಳನ್ನ meet ಮಾಡ್ತಿದ್ದ ಒಟ್ನಲ್ಲಿ ಇಬ್ರು ಜೋಡಿ  ಹಕ್ಕಿಗಳಾಗಿದ್ರು ಎರಡು  ವರ್ಷದಿಂದ. 

       ಆದ್ರೆ ಕೆಲವು ತಿಂಗಳುಗಳ ಹಿಂದೆ ಪ್ರವೀಣ Msc ಸೇರ್ಕೊಂಡ ಕಾವ್ಯ ಇನ್ನು 1st  Bsc ಓದ್ತಾ ಇದಾಳೆ ಆಗ್ಲಿಂದ ಸ್ವಲ್ಪ ಇವರ ಮಧ್ಯೆ ಬಿರುಕಾಗಿದೆ. ಅದ್ರು ಏನು ಆಗದೆ ಇರೋ ಹಾಗೆ ಪ್ರವೀಣ ಮತ್ತೆ ಕಾವ್ಯ ಎಲ್ಲರ ಎದುರಿಗೂ ನಟಿಸ್ತ ಇದ್ರೂ. ಇ ನಡುವೆ ಒಂದು ದಿನ ಪ್ರವೀಣ ಕಾವ್ಯ ಗೆ ಫೋನ್ ಮಾಡಿ ಮಾತಾಡ್ತಾ ಇದ್ದ ಸುಮಾರು 1ಘಂಟೆ ಮಾತಾಡಿದ್ದ, ಕಾವ್ಯ ಅದ್ರು ಇನ್ನು ಮಾತಾಡೋ ಇನ್ನು ಮಾತಾಡೋ ಅಂತ ಕೇಳ್ತಾನೆ ಇದ್ಲು ಯಾಕೆ ಅಂತ ಗೊತ್ತಿಲ್ಲ ಅವಳಿಗೆ ಅವನ ವಾಯ್ಸ್ ಕೇಳಬೇಕು ಅಂತ ಅಸೇನೋ ಅಥವಾ ನಂ ಹುಡುಗ ನ ಹೇಳ್ದಂಗೆ ಕೇಳ್ತಾನೆ ಅನ್ನೋ ಅಹಂಕರಾನೋ ಗೊತ್ತಿಲ್ಲ ಒಟ್ನಲ್ಲಿ ಮಾತಾಡು ಮಾತಾಡು ಅಂತಿದ್ಲು ಅಷ್ಟರಲ್ಲೇ ಪ್ರವಿಣನಿಗೆ  ಮತ್ತೊಂದು ಕಾಲ್ ಬಂತು ಮೊದ್ಲು ಯಾರು ಅಂತ ನೋಡಿಲ್ಲ ಆದ್ರೆ ಮತ್ತೆ ಬಂದಾಗ ನೋಡಿದ ಅಮ್ಮ ! ತಕ್ಷಣ ಗಾಬರಿಯಾಗಿ ಕಾವ್ಯ ಒಂದು ನಿಮಿಷ ಅಂತ disconnect ಮಾಡಿ recieve ಮಾಡಿದ. ಅ ಕಡೆ ಇಂದ ಪ್ರವೀಣನ ಅಮ್ಮ ಲೋ ಪ್ರವೀಣ ಎಲ್ಲೋ ಇದ್ಯಾ 10 ಘಂಟೆ ಆಯಿತು ಇನ್ನು ಮನೆಗೆ ಬಂದಿಲ್ಲ, ಊಟಕ್ಕೆ ಕಾಯ್ತಾ ಇದಿವೋ ಅಂದ್ರು ಅದಕ್ಕೆ ಪ್ರವೀಣ ಅಮ್ಮ ಬಂದ್ಬಿಟ್ಟೆ ಇನ್ನೇನು 10 ನಿಮಿಷ ಅಂತ ಫೋನ್ ಕಟ್ ಮಡಿ ಮತ್ತೆ ಕಾವ್ಯಗೆ ಫೋನ್ ಮಾಡಿದ, ಕಾಲ್ recieve ಮಾಡಿದ ಕಾವ್ಯ ಇಷ್ಟ ಹೊತ್ತಲ್ಲಿ ಯಾವಳ್ ಫೋನ್ ಮಾಡಿದ್ಲು ನಿಂಗೆ ಅಂದ್ಲು ಪ್ರವಿಣನಿಗೆ ಚಪ್ಪಲಿಲಿ ಹೂಡೆದ ಹಾಗಾಯಿತು, ಕಾವ್ಯ ಅಮ್ಮನ ಜೊತೆ ಮಾತಾಡ್ತಿದ್ದೆ ಅಂದ, ಅದಕ್ಕವಳು ನ ನಂಬಬೇಕ ಅಂದ್ಲು ಪ್ರವಿಣನಿಗೆ ತುಂಬಾ ಬೇಜಾರಾಗಿ ಕಾಲ್ disconnect ಮಾಡಿದ. ಕಾವ್ಯ ಮತ್ತೆ ಫೋನ್ ಮಾಡಿದ್ಲು ಪ್ರವೀಣ recieve ಮಾಡಲಿಲ್ಲ ಒಂದು ನಿಮಿಷ ಅದಮೇಲೆ ಪ್ರವಿಣನ inbox ಅಲ್ಲಿ ಒಂದು ಮೆಸೇಜ್ ಶಬ್ದ ಮಾಡಿತ್ತು ಅದು ಕಾವ್ಯ ಇಂದ 

                                                         " I HATE U "

                                                                                                    ಮುಂದುವರೆಯುವುದು :-  

No comments:

Post a Comment