ನೀನೆ ನನ್ನ ಜೀವ ನೀನೆ ನನ್ನ ಭಾವ
ಪ್ರೇಮ ಸಿಂಚನ ನೀನೇನೆ
ಬಾವ ಮಂಥನ ನಿನದೇನೆ
ಉಸಿರು ನೀಡಿ ಮತ್ತೆ ಉಸಿರು ತೆಗೆಯುವ
ಖೂನಿ ಕೋರಳು ನೀನೇನೆ
ಪ್ರೀತಿ ಕಲಿಸುವಳು ನೀನೇನೆ
ಹೃದಯ ಕದ್ದವಳು ನೀನೇನೆ
ಪ್ರೀತಿ ಮಾಡುತ ಪ್ರೀತಿ ಕೊಲ್ಲುವ
ಸಂಚು ಹೂಡುವಳು ನೀನೇನೆ
|| ನೀನೆ ನನ್ನ ಜೀವ ||
ಸುಂದರ ಸುಂದರ ಭಾವನೆ ಮುಡಿಸಿ ಮರೆಯಾದವಳು ನೀನೇನೆ
ಕಣ್ಣ ಸೈಗೆಯಲಿ ಪ್ರೀತಿ ಕರೆ ಮಡಿ ಕಾಣೆಯಾದವಳು ನೀನೇನೆ
ಪ್ರೀತಿ ಸಿಹಿಯನು ಉನಿಸುತಿದ್ದಾಗ ನಾಯಕಿ ಕೂಡ ನೀನೇನೆ
ಕಣ್ಣು ಕಾಣದ ಕುರುಡು ಪ್ರೀತಿಗೆ ಖಳ ನಾಯಕಿಯೂ ನೀನೇನೆ
||ನೀನೆ ನನ್ನ ಜೀವ||
ಮುದ್ದು ಮಾತಿನಲ್ಲಿ ಮನಸು ಕದ್ದವಳು ಮೋಹಕ ರಾಶಿಯು ನೀನೇನೆ
ನನ್ನ ಪ್ರೀತಿಯಲಿ ಉಸಿರಾಗಿರುವಳು ಮನಸು ಕೊಟ್ಟವಳು ನೀನೇನೆ
ಮನಸು ನೀಡಿ ಮತ್ತೆ ಮನಸ ಕಸಿಯುವ ಮೋಸಗಾತಿಯೂ ನೀನೇನೆ
ಪ್ರೀತಿ ಮಾಡಿ ಮತ್ತೆ ಪ್ರಾಣ ತೆಗೆಯುವ ಪ್ರೇಮ ರಕ್ಕಸಿ ನೀನೇನೆ
||ನೀನೆ ನನ್ನ ಜೀವ||
No comments:
Post a Comment