ಇಲ್ಲ ಅಭ್ಯಂತರ ಕೇಳಲು ಪ್ರೀತಿ ಬೈಗುಳ
ಇಲ್ಲ ನನಗಾತುರ ಕೇಳಲು ಎದೆಯ ತಳಮಳ
ಕಾಯುವೆ ಕೊನೆಯ ಕ್ಷಣದವರೆಗೂ
ಜನುಮದ ಕೊನೆಯ ಘಳಿಗೆವರೆಗೂ
ಹಾಕೆನು ಹೃದಯದ ಬಾಗಿಲ ತೆರೆದಿದೆ ನಿನಗಾಗಿ
||ಇಲ್ಲ ಅಭ್ಯಂತರ ಕೇಳಲು ಪ್ರೀತಿ ಬೈಗುಳ||
ಸಮಯದ ಪರಿವೆ ಇಲ್ಲ ನಿನ್ನೊಂದಿಗೆ ಮಾತನಾಡುತಿರಲು
ಕತ್ತಲೆ ಲೋಕವೆಲ್ಲ ನಿ ನನ್ನ ಜೊತೆಗೆ ಇರಲು
ಮಾತಿಗೆ ಕೊರತೆ ಇಲ್ಲ ಮೌನದ ಸುಳಿವೇ ಇಲ್ಲ
ಬದುಕಲಿ ನೀನೆ ಎಲ್ಲ ನೀನಿಲ್ಲದೆ ಏನು ಇಲ್ಲ
||ಇಲ್ಲ ಅಭ್ಯಂತರ ಕೇಳಲು ಪ್ರೀತಿ ಬೈಗುಳ||
ಮುಸ್ಸಂಜೆಯು ಮಂಕಾಗಿದೆ ನಿನ್ನದೇ ಚೆಲುವಲಿ
ಮುಂಜಾನೆಯೇ ಮರೆತೋಗಿದೆ ನಿನ್ನದೇ ನೆನಪಲಿ
ಸಹನೆಗೆ ಮಿತಿಯೇ ಇಲ್ಲ ಸಂಶಯ ಇನ್ನು ಬೇಕಿಲ್ಲ
ಸಂತಸ ಬದುಕು ಎಲ್ಲ ನಾನಾಗುವೆ ನಿನ್ನ ನಲ್ಲ
||ಇಲ್ಲ ಅಭ್ಯಂತರ ಕೇಳಲು ಪ್ರೀತಿ ಬೈಗುಳ||
No comments:
Post a Comment