Thursday, October 20, 2011

ಯಥಾ ಗುರು ಹಾಗೆ ಶಿಷ್ಯ

ರಾಘವೇಂದ್ರ ಭವನದ ಸರ್ಕಲ್ ನ ಬಳಿಯ ಬೇಕರಿಯಲ್ಲಿ ನಾನು ಮತ್ತೆ ಗೆಳೆಯ ಯಾದವ್ ಕೆಟ್ಟದ್ದನ್ನ ಸುಡುತ್ತ ನಿಂತಿದ್ದೆವು. ಹಾಗೆ ಮಾತನಾಡುತ್ತಿರುವಾಗ ನಮ್ಮ ಮಾತುಗಳು ಕನಸಿನ ಬಗ್ಗೆ ಹೊರಟಿತು. ನಾನು ಹೇಳಿದೆ, ಮಗ ಕನಸು ಕಾಣಬೇಕು ಮಗ ಯಾವಾಗಲು, ಆಗಲೇ ಎತ್ತರಕ್ಕೆ ಬೆಳೆಯಕ್ಕೆ ಸಾಧ್ಯವಾಗೋದು ಅಂತ. ಯಾದವ್ ಒಂದು ರೀತಿಯ ಮಾರ್ಮಿಕವಾದ ನಗು ತೋರಿ ಶಾಸ್ತ್ರೀ ನಿದ್ದೆ ಮಾಡಿದ್ರೆ ತಾನೆ ಮಗ ಕನಸು ಕಾಣಕ್ ಆಗೋದು?? ನಿದ್ದೇನೆ ಇಲ್ಲ ಅಂದ್ರೆ ಕನಸು ಎಲ್ಲಿಂದ ಕಾಣನ ಹೇಳು ಅಂದ.ನಿದ್ದೇನೆ ಮಾಡದೇ ಕನಸು ಕಂಡ್ರೆ ಹಗಲುಗನಸು ಕಾಣಬೇಡ ಅಂತ ಬೈತಾರೆ. ಕನಸು ಕಾಣಕ್ಕದ್ರು  ನಿದ್ದೆ ಮಾಡೋಣ ಅಂದ್ರೆ ಎಲ್ಲಿ ಸ್ವಾಮಿ ಬರುತ್ತೆ ನಿದ್ರೆ?? ಪಕ್ಕದ ಮನೆ ಪದುಮಕ್ಕ ನಮಮ್ಮ ನೀರಿಗೆ ಹೋದಾಗ ಏನ್ರಿ ಗಿರಿಜಮ್ಮ ನಿಮ್ಮ ಮಗ ಅದೇನೋ ಇಂಜಿನಿಯರಿಂಗ್ ಓದಿದ್ದನಲ್ಲ ಕೆಲಸ ಸಿಕ್ತ ಅವನಿಗೆ ಅಂತ ಕೇಳಿದಾಗ ನಮಮ್ಮ ಇಲ್ಲ ಕಣ್ರೀ ಯಾವ್ದೋ recession  ಅಂತ ತೊಂದರೆ ಬಂದಿದೆ ಅಂತೆ ಅದದ್ಮೇಲೆ ಸಿಗತ್ತೆ ಅಂತ ಹೇಳ್ದ ಅಂತ ಹೇಳೋ ಮಾತು ಕೇಳಿದಾಗ, ನಮಪ್ಪ ಅವರ ಹೊಲದಲ್ಲಿ ಕೆಲಸ ಮಾಡುವ ಕೂಲಿಯವರು ಏನ್ ಸಾಮಿ ನಮ್ ಚಿಕ್ ಐನೋರು ಎಲ್ಲನ ಕೆಲಸಕ್ಕೆ ಹೋಗ್ತವ್ರ, ಇಲ್ಲ ಮನೇಲೆ ಮುದ್ದೆ ಮುರಕೊಂಡು ಅವ್ರ ಇನ್ನ ಅಂತ ಕೇಳಿದಾಗ ನನ್ನಪ್ಪ ನನ್ನ ಕಡೆ ನೋಡಿ ಹುಡುಕ್ತ ಇದ್ದನಪ್ಪ ಇನ್ನು ಯಾವಾಗ್ ಸಿಗತ್ತೋ ಗೊತ್ತಿಲ್ಲ ಅಂತ ಹೇಳೋವಾಗ ನೋಡಿ ಇನ್ನು ನನಗೆ ನಿದ್ದೆ ಅದ್ರು ಎಲ್ಲಿ ಬರಲು ಸಾಧ್ಯ?? ನನಗೆ ಮಾತ್ರ ಅಲ್ಲ ಸ್ವಾಭಿಮಾನ ಇರುವ ಯಾವುದೊ ವ್ಯಕ್ತಿಗೂ ನಿದ್ದೆ ಬರಲ್ಲ ಇನ್ನು ಕನಸು ಕಾಣುವುದು ಬಹಳ ದೂರದ ಮಾತು ಅಂತ ಒಂದೇ ಮಾತಿನಲ್ಲಿ ಹೇಳಿಬಿಟ್ಟ.

ಸಮಾಜ ಎಷ್ಟು ಬದಲಾಗಿಬಿಟ್ಟಿದೆ ಅಲ್ವಾ?? ಇಲ್ಲ ನಾವೇ ಬದಲಾಗಿದ್ದಿವ?? ಮೊದಲಿಗೆ ೧೦ನೇ ಕ್ಲಾಸ್ ಓದಿದರೆ ಸಾಕು ಕೆಲಸ ಸಿಕ್ತಿತ್ತಂತೆ ನಮ್ ತಾತ ಓದಿದ್ದು ಬರಿ ೭ನೇ ಕ್ಲಾಸು ಲೋವೆರ್ ಸೆಕೆಂಡರಿ ಅಂತೆ, ಅವರು ನಮ್ಮೂರಲ್ಲಿ ಫೇಮಸ್ ಎಲೆಕ್ಟ್ರಿಕ್ contractor. ಇನ್ನು ನಮ್ಮ ತಂದೆ PUC ಓದಿದಕ್ಕೆ ಎಷ್ಟೋ ಸರ್ಕಾರೀ ಕೆಲಸಗಳು ಬಂದಿದ್ದವಂತೆ.ನಮ್ಮ ಅಣ್ಣಂದಿರು ಡಿಗ್ರಿ ಓದಿ ಒಳ್ಳೆಯ ಕಡೆ ಕೆಲಸಗಳಲ್ಲೂ ಇದ್ದಾರೆ. ಆದ್ರೆ ಈಗ ಇಂಜಿನಿಯರಿಂಗ್ ಮಡಿ MBA  ಮಾಡಿ. MA ಗಳು MCA ಗಳು ಎಲ್ಲ ಮಾಡಿಯೂ ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿರುತ್ತಾರೆ. ಮೊನ್ನೆ ಮೊನ್ನೆ syntel ಎಂಬ ಕಂಪನಿ ಗೆ ವಾಕ್-ಇನ್ ಇಂಟರ್ವ್ಯೂ ಗೆ ಎಂದು ಹೋಗಿದ್ದೆ. ಇದ್ದ ಉದ್ಯೋಗಾವಕಾಶ ಸುಮಾರು ೬೦ ಅಂತೆ ಅಲ್ಲಿ ೬೦೦೦ ಕ್ಕೂ ಹೆಚ್ಚು ಜನ ಗೇಟ್ ನ ಹೊರಗೆ ಕಾಯುತಿದ್ದೆವು. ಅದರಲ್ಲಿ ೩೦೦೦ ಉತ್ತರ ಭಾರತೀಯರು ಒಂದು ೨೦೦೦ ತಮಿಳುನಾಡು ಮತ್ತು ಆಂಧ್ರ ಮತ್ತು ಕೇರಳಿಗರು ನಮ್ಮ ಜನ ಸುಮಾರು ೧೦೦೦. ಗೇಟ್ ತೆಗೆದಿದ್ದೆ ತಡ ಒಳ್ಳೆ ತಿರುಪತಿ ವೆಂಕಟರಮಣನ ದರ್ಶನಕ್ಕೆ ಭಕ್ತರು ನುಗ್ಗುವಂತೆ ನುಗ್ಗಲು ಆರಂಭಿಸಿದರು. ನಾನು ನನ್ನ ಗೆಳೆಯ ನುಗ್ಗಲು ಸಾಧ್ಯವಾಗದೆ ಬೇಡ syntel ಸಹವಾಸ ಎಂದು ವಾಪಾಸ್ ಬಂದೆವು.ಇಂತಹ ಅದೆಷ್ಟೋ ನಿದರ್ಶನಗಳು ನಮ್ಮ ಮುಂದೆ ಇದ್ದೇ ಇವೆ 

ನನ್ನ ಗೆಳೆಯ ಯಾದವ್ ಮತ್ತು ನನ್ನಲ್ಲಿ ಹೀಗೆ ಹಲವರು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ.  ನೆನ್ನೆ ಒಂದು  ಚರ್ಚೆ ನಡೀತು. ನನ್ನ ಅಣ್ಣನ ಮಗನ್ನ ಸ್ಕೂಲ್ ಗೆ ಸೇರಿಸಿದ್ದಾರೆ. nursery  ಗೆ  ಅವ್ರು  ಕಟ್ಟಿರೋ  ಶುಲ್ಕ  ೭೦,೦೦೦,  ನಾನು ಶಾಲೆಗೆ ಸೇರಿದ ವರ್ಷದಿಂದ ೭ನೆ ತರಗತಿಯವರೆಗೂ ನನ್ನ ಶಾಲೆಯ ಶುಲ್ಕ ವರ್ಷಕ್ಕೆ ೨೭ರು ಮಾತ್ರ ಪ್ರೌಢ ಶಾಲೆಯಲ್ಲಿ ವರ್ಷಕ್ಕೆ ೮೦೦ರು ಮತ್ತು polytechnic ವರ್ಷಕ್ಕೆ ೭೦೦೦, ಮತ್ತು ಇಂಜಿನಿಯರಿಂಗ್ ವರ್ಷಕ್ಕೆ ೩೫೦೦೦. ನನ್ನ ವಿದ್ಯಾಭ್ಯಾಸವೆಲ್ಲ ನನ್ನ ಅಣ್ಣನ ಮಗ ತನ್ನ ಪ್ರೈಮರಿ ಶಿಕ್ಷಣ ಮುಗಿಸೋ ಅಷ್ಟರಲ್ಲಿ ಅಗೋ ಖರ್ಚಲ್ಲಿ ಮುಗಿದು ಹೋಗಿರುತ್ತದೆ ಅಲ್ಲವೇ?? ಅದಕ್ಕೆ ಯಾದವ್ ಹೇಳ್ದ ಮಗಾ ಮೊದಲೆಲ್ಲ ವಿದ್ಯೆ ಕಳಿಸಿ ಗುರುದಕ್ಷಿಣೆ ಕೇಳ್ತಾ ಇದ್ರೂ ಆದರೆ ಈಗ ಮೊದಲೇ ಗುರುದಕ್ಷಿಣೆ ತೊಗೋತಾರೆ ಆದ್ರೆ ಮಕ್ಕಳು ವಿದ್ಯೆ ಕಲಿತರೋ ಇಲ್ಲವೋ ಯಾರು ಕೇರ್ ಮಾಡಲ್ಲ ಅಂತ. ನನಗು ಅನ್ನಿಸ್ತು ಯಾದವ್ ಮಾತು ಶೇಕಡಾ ನುರಕ್ಕಿಂತ ಹೆಚ್ಚು ಸತ್ಯ.

ನನ್ನ ಮತ್ತೊಬ್ಬ ಗೆಳೆಯ ಒಂದು ಖಾಸಗಿ ಶಾಲೆಯಲ್ಲಿ ಕನ್ನಡ ಮೇಷ್ಟ್ರಾಗಿ ಕೆಲಸ ಮಾಡುತಿದ್ದಾನೆ. ಅವನು ಹೊಸತಾಗಿ ಕೆಲಸಕ್ಕೆ ಸೇರಿದ್ದ ಸಮಯ. ತರಗತಿಯಲ್ಲಿ ಬಹಳಷ್ಟು ಅಸಭ್ಯವಾಗಿ ವರ್ತಿಸುತಿದ್ದ ಒಂದಷ್ಟು ಹುಡುಗರಿಗೆ ಬೆತ್ತದ ರುಚಿ ತೋರಿಸಿದ್ದಾನೆ. ಅಷ್ಟೇ ಮಾರನೆಯ ದಿನವೇ ಅ ಹೊಡೆಸಿಕೊಂಡ ಮಕ್ಕಳ ತಂದೆ ತಾಯಂದಿರು ಬಂದು ಅವರ ಶಾಲೆಯ 
ಮುಖ್ಯೋಪಾಧ್ಯಾಯಿನಿಗೆ ದೂರು ನೀಡಿದ್ದಾರೆ. ನನ್ನಪ್ಪನಿಗೆ ಟೀಚರ್ ಹೊಡೆದರು ಎಂದು ಹೇಳಿದ್ದರೆ  ಮತ್ತೂ  ಮನೆಯಲ್ಲಿ ಒದೆ ಬೀಳುತಿತ್ತು. ನನ್ನ ಗೆಳೆಯನನ್ನ ತನ್ನ ಕೊನೆಗೆ ಕರೆಸಿಕೊಂಡ ಮೇಡಂ ನೋಡಪ್ಪ ಮಕ್ಕಳು  ಎಷ್ಟಾದರೂ  ತೀಟೆ ಮಾಡಿಕೊಳ್ಳಲಿ. ನೀನು ಅವರ ಮೇಲೆ ಕೈ ಮಾಡಬೇಡ, ಅಕಸ್ಮಾತ್ ಮಾಡಿದ್ದೆ ಆದರೆ ನಿನ್ನ ಕೆಲಸ  ಕಳೆದು ಕೊಳ್ಳಬೇಕಾದೀತು ಎಂಬ ಎಚ್ಚರಿಕೆ ನೀಡಿದ್ದಾರೆ. ಅದಕ್ಕೆ ನನ್ನ ಗೆಳೆಯ  ಮೇಡಂ  ಒಳ್ಳೆಯ  ಮಾತಿನಲ್ಲಿ  ಕೇಳದಿದ್ದರೆ  ಮಕ್ಕಳನ್ನು ತಿದ್ದುವುದದರು ಹೇಗೆ ಎಂದನಂತೆ. ಅದಕ್ಕೆ ಮೇಡಂ ಅಕಸ್ಮಾತ್ ಅವರು ಒಳ್ಳೆಯ  ದಾರಿ  ಹಿಡಿಯಲಿಲ್ಲವೆಂದರೆ ಅದು ಅವರ  ಕರ್ಮ  ನಿನಗ್ಯಾಕೆ  ಚಿಂತೆ  ಎಂದರಂತೆ.  ಅಪ್ಪಿ ತಪ್ಪಿ  ನಿಂಬೆ ಹುಳಿಯನ್ನು  ಮರೆತು ಬಾಯಲ್ಲೇ ಇಟ್ಟುಕೊಂಡು ಮೇಡಂ ಕೈಲಿ ಸಿಕ್ಕಿ ಬಿದ್ದರೆ ಗೆಣುವಿನ ಮೇಲೆ  ಬೆತ್ತದಿಂದ  ಹೊಡೆಯುತಿದ್ದ ನಮ್ಮ  ಟೀಚರ್ಗಳೆನಾದ್ರೂ ಈಗಿನ ಕಾಲದ ಮಕ್ಕಳಿಗೆ ಸಿಕ್ಕಿದ್ದರೆ, ಒಂದು ದಿನವು ಮೇಡಂ ಕೆಲಸದಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ     

ನಮ್ಮ ವಿದ್ಯಾಭ್ಯಾಸ ಪದ್ಧತಿ ಹೇಗಿರುತ್ತದೋ ಮಕ್ಕಳು ಹಾಗೆ ಇರುತ್ತಾರೆ. ಮಕ್ಕಳಿಗೆ ಹೆಚ್ಚು ಹೊಮೆವೊರ್ಕ್ ಕೊಡುವ ಹಾಗಿಲ್ಲ ಮಕ್ಕಳಿಗೆ ಹೊಡೆಯುವ ಹಾಗಿಲ್ಲ, ಅವರಿಗೆ ಮೊಬೈಲ್ ಫೋನ್ ಕೊಡಿಸಬೋಹುದು. ಇಂಟರ್ನೆಟ್ ಮುಂತಾದ ಸುಲಭವಾಗಿ ಅನಾನುಕುಲವಾಗಿಯೂ ಮಾರ್ಪಡಬಲ್ಲ ಅವಕಾಶಗಳನ್ನು ಒದಗಿಸುವುದು ಎಲ್ಲವು ಇದ್ದರೆ ಮಕ್ಕಳ ಭವಿಷ್ಯ ಉದ್ದಾರ. ನಿಮಗೆ ಗೊತ್ತಿರುತ್ತದೆ ಅನುಭವವು ಆಗಿರುತ್ತದೆ ಎಷ್ಟು ಜನ ಹಿಗ್ಹ್ ಸ್ಕೂಲ್ ಮಕ್ಕಳು ಇ ನಡುವೆ ಸಂಜೆ ಶಾಲೆಯಿಂದ ಬಂದೊಡನೆ ಆಟ ಆಡುವುದಕ್ಕೆ ಹೋಗದೆ facebook ನಲ್ಲಿ ಚಾಟಿಂಗ್ ಮಾಡುತ್ತ ಕುಡುತ್ತಾರೆ ಎಂದು.
ಎಷ್ಟೇ ಅಗಲಿ ಮಕ್ಕಳ ಭವಿಷ್ಯ ಜೋಪಾನ ಗೆಳೆಯರೇ.......    

No comments:

Post a Comment