Wednesday, October 5, 2011

ಮರೆಯಲಾಗದ ಲಾಟರಿ ಟಿಕೆಟ್

ಕಾಲೇಜ್ ನ ಗೋಡೆಯ ಮೇಲೆ ಹೋಗೆ ಬಿಡುತ್ತಾ ನಾನು ಮತ್ತು ಬಾಸ್ ಬಂಡಾರಿ ಕುಳಿತಿದ್ದೆವು. ಸಿಗರೇಟನ್ನು ಘಾಡವಾಗಿ ಎಳೆದ ಭಂಡಾರಿ ಎಲ್ಲೋ ಶಿಷ್ಯ ಇನ್ನು ಸಿಂಹ ಬಂದೆ ಇಲ್ಲಾ ಅಂದ. ನಾನು ಒಮ್ಮೆ ಗಡಿಯಾರವನ್ನು ನೋಡಿ ಬಾಸ್ ಈಗ fly ಓವರ್ ಕಾಮಗಾರಿ ನಡೆಯುತ್ತಿದೆ ಅಲ್ವಾ ಟ್ರಾಫಿಕ್ ತುಂಬಾ ಇರತ್ತೆ ಅದಕ್ಕೆ ಲೇಟ್ ಆಗಿರಬೇಕು ಎಂದೆ. ಆಗ ಸಮಯ ಸುಮಾರು ೧೧ ಘಂಟೆ.  ನಾನು ದ್ವಿತೀಯ PUC ಡುಮ್ಕಿ ಹೊಡೆದು ನಮ್ಮ ಸರ್ಕಾರೀ ಕಾಲೇಜ್ ನ ಗೋಡೆಯ ಮೇಲೆ ಕೂತು ಗೆಳೆಯರ ಜೊತೆ ಹರಟೆ ಹೊಡೆಯುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದೆ. ಬಾಸ್ ನಮಗಿಂತ ಒಂದೆರಡು ವರುಷ ಹಿರಿಯರು. ಅವರು ಸಹ ಡಿಪ್ಲೋಮಾ ಇಯರ್ ಬ್ಯಾಕ್ ಆಗಿ ನಮ್ಮ ಜೊತೆಯಲ್ಲೇ ಅಡ್ಡ ಹೊಡೆಯುತಿದ್ದರು. ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟರೆ ಊಟದ  ಸಮಯಕ್ಕೆ ಮತ್ತೆ ಮನೆ ಸೇರುತಿದ್ದಿದ್ದು, ಮತ್ತೆ ಸಂಜೆ ೪ ಕ್ಕೆ ಕ್ರಿಕೆಟ್ ಆಡಲು ಹೊರಟರೆ ಮನೆ ಸೇರುತಿದ್ದಿದ್ದು ರಾತ್ರಿ ೧೦ ಘಂಟೆಗೆ. ಇಂತಹ ನಮ್ಮ ದಿನಚರಿಯಲ್ಲಿ ಸಿಂಹ ಪ್ರತಿ ದಿನ ಸಿಂಹ ಒಂದು ಒಳ್ಳೆಯ ಕೆಲಸ ಮಾಡುತಿದ್ದ. ದ್ವಿತೀಯ PUC ಫೈಲ್ ಆದರು, ಮನೆಗೆ ಒಂದಷ್ಟು ಸಹಾಯವಗುತಿದ್ದ. ಅವನು ಮಾಡುತಿದ್ದ ಕೆಲಸ ನಮ್ಮೂರಿಂದ ಬೆಂಗಳೂರಿಗೆ ಹೋಗಿ ಲಾಟರಿ ಟಿಕೆಟ್ ಕೊಂಡು ತರುವುದು. ಇಷ್ಟಕ್ಕೂ ಸಿಂಹ ಎಂದರೆ ಇವನ ಧೈರ್ಯಕ್ಕೆ ಪ್ರತಾಪಕ್ಕೆ ಕೊಟ್ಟಿರುವ ಬಿರುದೇನಲ್ಲ ಬಿಡಿ. ಅ ವಯಸಿಗೆ ಅವನ ಕಿವಿಯ ಮೇಲೆ ಒಂದೆರಡು ರೋಮ ಹುಟ್ಟಿತ್ತು, ಅದನ್ನೇ ಆಗಾಗ ನಿವುತ್ತ ಸಿಂಹ ಸಿಂಹ ಹಹಹಹ ಎಂದು ವಿಚಿತ್ರವಾಗಿ ಘರ್ಜಿಸುತಿದ್ದ. ಅದಕ್ಕೆ ನಾವು ಆಯಿತು ಬಿಡಪ್ಪ ನೀನು ಸಿಂಹನೆ ಅಂತ ಹಾಗೆ  ಕರೆಯುತಿದ್ದೆವು. ಅವನ ನಿಜವಾದ ಹೆಸರು ಮಹೇಶ್, ಮಹೇಶ್ ಕುಮಾರ್ ಯಾದವ್  

ಪ್ರತಿ ದಿನ ಬೆಳಿಗ್ಗೆ ೭ ಘಂಟೆಗೆ ಬಸ್ ಹತ್ತುತಿದ್ದ, ೮ ಘಂಟೆಗೆ ಮೆಜೆಸ್ಟಿಕ್ ಸೇರಿ ಮೆಜೆಸ್ಟಿಕ್ ಚಿತ್ರ ಮಂದಿರದ ಪಕ್ಕದಲ್ಲಿರುವ ಲಾಟರಿ complex ನಿಂದ ಒಂದು ದೊಡ್ಡ ಕಿಟ್ ಬ್ಯಾಗ್ ತುಂಬ ಲಾಟರಿ ಟಿಕೆಟ್ ತುಂಬಿಕೊಂಡು, ಮತ್ತೆ ೧೧ ಘಂಟೆ ಅಷ್ಟರಲ್ಲಿ ನಮ್ಮೂರು ಸೇರುತಿದ್ದ. ಬಂದೊಡನೆ ನಮ್ಮ ಮಾಮೂಲಿ ಅಡ್ಡ ಅದ ಸರ್ಕಾರೀ ಕಾಲೇಜ್ ನ ಕಾಂಪೌಂಡ್ ಬಳಿಗೆ ಸಿಗರೇಟು ತರುತಿದ್ದ ನಮಗೂ ಅದರ ಒಂದೆರಡು ದಮ್ಮಿನ ಭಾಗ ಸಿಗುತಿತ್ತು. ಅದ್ಯಾಕೋ ಅವತ್ತೇ ಅವನು ಬಂದಿಲ್ಲ, ಸಮಯ ೧೧-೩೦ ಆಯಿತು ಆದರು ಸಿಂಹ ಬಂದಿಲ್ಲ. ನಾನು ಭಂಡಾರಿಗೆ ಬಾಸ್. ಇವತ್ತು ಸಿಂಹ ಬರಲ್ಲ ಅನ್ಸುತ್ತೆ ಬನ್ನಿ ಬಾಸ್ ಮನೆಗೆ ಹೋಗಣ ಅಂದೆ. ಅದಕ್ಕೆ ಭಂಡಾರಿ ಸರಿ ನಡಿ ಶಿಷ್ಯ ಅಂತ ಸೈಕಲ್ ನ carrier ಹತ್ತಿದರು. ನನ್ನ ಹಳೆಯ rally ಸೈಕಲ್ ನ ಎಷ್ಟು ತುಳಿದರು ಮುಂದಕ್ಕೆ ಸಾಗುತ್ತಿರಲಿಲ್ಲ, ಬಾಸ್ ತುಂಬಾ ಧಡೂತಿ ಎಂದು ಭಾವಿಸಬೇಡಿ ಅವರು ಹೆಸರಿಗಷ್ಟೇ ಬಾಸ್ ಇದ್ದದ್ದು ಬರೀ  40kg ಸೈಕಲ್ ಗೆ ಸರಿಯಾಗಿ ಸರ್ವಿಸ್ ಮಾಡಿಸಿರಲಿಲ್ಲ ಅಷ್ಟೇ....     

ಸಂಜೆ ೪ ಆಯಿತು ಎಲ್ಲರು ಕ್ರಿಕೆಟ್ ಆಡಲು ಮೈದಾನ ಸೇರಿದ್ದವು. ಆದರೆ ಸಿಂಹ ಅಲಿಯಾಸ್ ಮಹೇಶ ಇನ್ನು ಬಂದಿಲ್ಲ. ನಮ್ಮ ಗೆಳೆಯರಲ್ಲೆಲ್ಲ ಗುಸುಗುಸುಗಳು. ಯಾಕಂದ್ರೆ ಸಿಂಹ ಲಾಟರಿ ಟಿಕೆಟ್ ತರಲು ಬಹಳಷ್ಟು ಹಣವನ್ನು ಹೊತ್ತು ಹೋಗುತಿದ್ದ ಬರುವಾಗ ಲಕ್ಷಾಂತರ ಲಾಟರಿ ಟಿಕೆಟ್ ತರುತಿದ್ದ. ಯಾರ ಬಳಿಯಲ್ಲೂ ಮೊಬೈಲ್ ಫೋನ್ ಗಳು ಇರಲಿಲ್ಲ. ಅದೇನು ದುಡ್ಡು ಹೊಡೆದುಕೊಂಡು ಪರರಿಯಾದನೋ ಅಥವಾ ಯಾರಾದ್ರು ನಮ್ಮ ಹುಡುಗನ್ನ ಕೊಳ್ಳೆ ಹೊಡೆದರೋ. ಎಲ್ಲರಿಗು ಒಂದೊಂದು ರೀತಿಯ ಚಿಂತೆ. ಚಿಂತೆಯಲ್ಲೇ toss ಹಾರಿಸಿ ಕ್ರಿಕೆಟ್ ಆಟ ಶುರು ಮಾಡಿದೆವು. ಆಡುತ್ತಿರುವಾಗಲು  ಸಹ ನಮಗೆಲ್ಲ ಅವನದೇ ಚಿಂತೆ. ಆಟ ಮುಗಿಸಿ ವಿಕೆಟ್ ಮತ್ತು ಬ್ಯಾಟ್ ಬಾಲ್ ಎತ್ತಿಡಲು ಹೊರಡಬೇಕು ಅಷ್ಟರಲ್ಲಿ ಮೈದಾನದ ಒಂದು ಮೂಲೆಯಿಂದ ಮಹೇಶ ಒಳ ಬರುವುದನ್ನು ಗಮನಿಸಿದೆವು. ಇನ್ನೇನು ಬಳಿಬರಬೇಕು ಅಷ್ಟರಲ್ಲೇ ಎಲ್ಲರಿಂದಲೂ ಪ್ರಶ್ನೆಗಳ ಸರಮಾಲೆ. ಏನೋ ಮಗ ಯಾಕೋ ಬಂದಿಲ್ಲ ಎಲ್ ಹೋಗಿದ್ದೆ ಏನ್ ಸಮಾಚಾರ ಹೀಗೆ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರದಲ್ಲಿ ಸುಮ್ಮನಾಗಿಸಿದ್ದ ಅದು ಏನು ಅಂದರೆ ಮಗ ಉಪ್ಪಾರ್ ಪೇಟೆ ಪೋಲಿಸ್ ಸ್ಟೇಷನ್ ಗೆ ಎತ್ತಕ್ಕೊಂಡೋಗಿದ್ರು ಮಗ ಅಂದ. ನಮಗೆಲ್ಲ ಒಂದು ಕ್ಷಣ ಭಯ ಆಯಿತು ಆದರು ಸ್ವಲ್ಪ ಹೊತ್ತು ಸಮಾಧಾನ ಮಾಡ್ಕೊಂಡು ಒಂದು ಪ್ಯಾಕ್ ಸಿಗರೇಟು ತಂದು ಎಲ್ಲರು ಸೇದಿ ನಂತರ ಅವನ ಕಥೆ ಮುಂದುವರೆಸಲು ಕೇಳಿದೆವು..

ಎಂದಿನಂತೆ ಅಂದು ಸಹ ತನ್ನ ದೊಡ್ಡ ಕಿಟ್ ಬ್ಯಾಗ್ ತುಂಬಾ ಲಾಟರಿ ಟಿಕೆಟ್ ತರುತಿದ್ದನಂತೆ. ದಾರಿಯಲ್ಲಿ ಒಬ್ಬ constable  ತಡೆದು ವಿಚಾರಣೆ ಮಾಡಿದ್ದಾನೆ. ಮಹೇಶನ ಬಳಿ ಎಲ್ಲ ದಾಖಲೆ ಇದ್ದರು ಸಹ ಕರೆದುಕೊಂಡು ಹೋಗಿ ಸ್ಟೇಷನ್ ಅಲ್ಲಿ ಕೂರಿಸಿದ್ದಾರೆ. ಮಹೇಶ ಹೆದರಿ ಸ್ಟೇಷನ್ ಅಲ್ಲಿ ಕೂತಿರುವಾಗ ಬರುವ ಪೋಲಿಸು ಗಳೆಲ್ಲ ಇವನ ಬಳಿ ಬರುವುದು ಲೋ ಏನೋ ನಿಂದು ಕೇಸ್ ಅನ್ನೋದು. ಓಹೋ ಲಾಟರಿ ಮಾರ್ತ್ಯ ಲಾಟರಿ, ಅಂತ ಒಂದು ಅವಾಜ್ ಹಾಕೋದು ಹೋಗೋದು ಮಾಡುತಿದ್ದರಂತೆ. crime ನವರು, ಮಾಮೂಲಿ ಪೋಲಿಸ್ ನವರು, ಬರುವ ಪೋಲಿಸ್ ರ ಶಿಷ್ಯಕೋಟಿಗಳು ಎಲ್ಲರು ಇವನ ಬಳಿ ಬರುವುದು ಬಯ್ಯುವುದು ಹೋಗುವುದು  ಮಾಡಿ ಮಹೇಶನಿಗೆ ಭಯದ ಪರಮಾವಧಿಯನ್ನು ತೋರಿಸಿದ್ದಾರೆ. ಲೋಕೆಪ್ ನಲ್ಲಿ ಒಬ್ಬ ಕಳ್ಳ ಕುತಿದ್ದನಂತೆ ಅವನನ್ನು ನೋಡಿಸಿ ಪೇದೆಯೊಬ್ಬ ಅವನು  ನಿನ್ನಂತಯೇ  ಲಾಟರಿ ಮರುತಿದ್ದ ನೋಡು ಅದಕ್ಕೆ ಬೇಡಿ ಹಾಕಿ ಕುಡಿಸಿರುವುದು ಅ ಕಳ್ಳನನ್ನು ಅಲ್ವೇನೋ ಅಂದರೆ ಭಯದಿಂದ ನಡುಗಿ ಹೌದು ಹೌದು ಅಂದಿದ್ದಾನೆ ಆಗಂತು ಮಹೇಶನಿಗೆ ಯಾಕಾದ್ರು ಇ ಕೆಲಸಕ್ಕೆ ಬಂದೆನೋ ಅನಿಸಿಬಿಟ್ಟಿದೆ. 

ಅಷ್ಟರಲ್ಲೇ inspector  ಬಂದಿದ್ದಾರೆ. ಬಂದವರು ಇವನನ್ನು ನೋಡಿ enri ಇವನದು ಕೇಸ್ ಅಂದಾಗ ಪೇದೆ ಸರ್ ಲಾಟರಿ ಮರ್ತ ಇದ್ದ ಸರ್ ಅಂದಿದ್ದಾನೆ  inspector  ಬಂದು ದಾಖಲೆ ಪರೀಕ್ಷೆ  ಮಾಡಿ  ಎಲ್ಲವು ಸರಿಯಗಿದ್ದಿದ್ದನ್ನು ಗಮನಿಸಿ  ಪೇದೆಗೆ ಒಂದಷ್ಟು ಬೈದು ಇವನನ್ನು ಮನೆಗೆ ಹೋಗಪ್ಪ ಎಂದು ಕಳುಹಿಸಿದ್ದಾರೆ . ಆಚೆ ಭಾರದ ಕಿಟ್ ಬ್ಯಾಗ್ ಹೊತ್ತು ತಂದ ಮಹೇಶನಿಗೆ ಪೇದೆ ಏನಪ್ಪಾ ಉಟಕ್ ಒಂದಿಪ್ಪತ್ತು ಕೊಟ್ಟು ಹೋಗು ಅಂದನಂತೆ. ಅದಕ್ಕೆ ಜೇಬಲ್ಲಿದ್ದ  monthly ಪಾಸು ತೋರಿಸಿ ಸರ್ ಇದನ್ನು  ಬಿಟ್ಟು  ೫ ಪೈಸೆ ಸಹ ಇಲ್ಲ ಸರ್ ಅಂತ ಹೊರಟು  ಬಂದಿದ್ದಾನೆ. ಒಟ್ಟಿನಲ್ಲಿ ಪೇದೆ ಮಾಡಿದ  ಅವಾಂತರ ನಮ್ಮ ಗೆಳೆಯರಲೆಲ್ಲ ಆತಂಕ ಸೃಷ್ಟಿ  ಮಾಡಿತ್ತು. ಇಷ್ಟೆಲ್ಲಾ ಕಥೆ ಹೇಳಿದ ಮೇಲೆ ಮಹೇಶ ತನ್ನ ಕಿವಿಯ  ಕೂದಲುಗಳನ್ನು ನಿವುತ್ತ ಹಹಹಹ ಸಿಂಹ ಹೆಂಗೆ ಪೋಲಿಸ್ ಸ್ಟೇಷನ್ ಎಲ್ಲ ನೋಡ್ಕೊಂಡು ಬಂದೆ ಅಂತ ಘರ್ಜಿಸಲು ಶುರು ಮಾಡಿದ್ದ. ಈಗ ಮಹೇಶ ಸಿನಿಮ ರಂಗದಲ್ಲಿ  ಸಹಾಯಕ ನಿರ್ದೇಶಕನಾಗಿ ದುಡಿಯುತಿದ್ದಾನೆ. ಇತ್ತೀಚಿಗೆ ಸಿಕ್ಕಾಗ ಈ ಘಟನೆಯ ಬಗ್ಗೆ ಮಾತನಾಡುತ್ತ, ನಮ್ಮ ಓದುಗರಿಗೂ ಈ ಘಟನೆಯ ಬಗ್ಗೆ ಹೇಳ ಬೇಕು ಎನಿಸಿತ್ತು ಹೇಳಿಬಿಟ್ಟೆ :)..... 

*******************************************************************************


      

1 comment:

  1. ಪವನ್‍ ಒಂದು ಅನುಭದ ತೆಕ್ಕೆಯಲ್ಲಿ ಸಡಿಲಗೊಂಡ ಮನಸ್ಸಿನ ಧುಮ್ಮಾನಗಳು ಪದಗಳಲ್ಲಿ ಹವಿದ್ದನ್ನು ಕಂಡು ಸಂತಸಗೊಂಡೆ. ತುಂಬಾ ಸುಂದರವಾದ ಬರಹದ ಶೈಲಿ ನಿಮ್ಮದು. ಚೆನ್ನಾಗಿದೆ ಲೇಖನ.

    ReplyDelete