Tuesday, August 16, 2011

ತರಚಿದ ಗಾಯ

ಮೊಣಕೈ ಮಂಡಿಗಳಿಗೆ ತರಚಿದ ಗಾಯ
ಬೀಳಿಸಿದ ಗೆಳೆಯ ಕ್ಷಣದಲ್ಲೇ ಮಾಯಾ
ದೂರಲು ಓದುವೆ ನಾ ಅಮ್ಮನ ಬಳಿಗೆ
ಅಮ್ಮನೂ ಬಡಿಯುವಳು ನೋಯುತಲಿ ಒಳಗೆ

ಕಣ್ಣಲ್ಲಿ ಸಾವಿರ ಕನಸುಗಳ ಬೆಸೆದು
ಪದವಿಯ ಪರಿಧಿಗೆ ದರ್ಪದಲಿ ನಡೆದು
ಗೆಳುವೆಂಬ ಕುದುರೆಯ ವೇಗದಲಿ ಹೊಡೆದೆ
ಪದವಿಯ ನದಿಯನು ಈಜಿ ದಡ ಸೇರಿದೆ

ಹಗಲೆನದೆ ಇರುಳೆನದೆ ದಿನಗಳನು ಕಳೆದು
ನೆತ್ತರಿನ ವೇಗವನ್ನು ಆಗಾಗ ತಡೆದು
ಸುತ್ತಲಿನ ಪರಿಸರವ ಕೆಲವೊಮ್ಮೆ ಮರೆತೆ
ಕೆಟ್ಟವರ ಸಖ್ಯವು ವಿಷವೆಂದು ಅರಿತೆ

ಆಕಾಶಕೆ ತಲೆ ಎತ್ತಿ ಸುರ್ಯಣನೆ ದಿಟ್ಟಿಸಿ
ಮೋಡದ ಮರೆಗೋಗು ಎಂದೊಮ್ಮೆ ನಿಂದಿಸಿ
ನೇಸರದಿ ನಾದವನು ಮಿಡಿಸುವವನಲ್ಲ
ಅಣ್ಣ ನಿಡುವ ರೈತ ನನಾಗಲಿಲ್ಲ

ತಲೆಯನ್ನು ನೆಲದಿಂದ ಮೇಲಕ್ಕೆ ಎತ್ತದೆ
seniors ನ ಮಾತಿಗೆ ಎದುರನ್ನು ಆಡದೆ
ಶನಿವಾರ ಭಾನ್ವಾರ ರಜವನ್ನು ಮಾಡಿ
ಬೇರೆಲ್ಲ ದಿನದಂದು ಕೆಲಸದ್ದೆ ರಾಡಿ

ಸೂರ್ಯನ ದಿಟ್ಟಿಸಿ ಎಷ್ಟು ದಿನಗಳಾಯ್ತೋ
ಅಮ್ಮನಿಗೆ ಬೈಗುಳ ಎಲ್ಲಿ ಮರೆತೊಯ್ತೋ
ಪರಿಸರದಿ ಪದವಾಡೋ ದಿನಗಳು ಬರಲಿ
ಯುವಕರಿಗೆ ವ್ಯವಸಾಯ ಉತ್ಸಾಹ ತರಲಿ     

No comments:

Post a Comment