ನಮಮ್ಮನಿಗೆ ಇದ್ದಕ್ಕಿದ್ದ ಹಾಗೆ ಅಕ್ಕನ ನೆನಪಾಗಿ ನನ್ನ ಕೇಳಿದ್ರು ಕರೆದು ಕೊಂಡು ಹೋಗು ಅಂತ, ನನಗು ಮಾಡಕ್ ಏನು ಕೆಲಸ ಇಲ್ಲದ ಕಾರಣ elecronic ಸಿಟಿ ಕಡೆ ಪ್ರಯಾಣ ಮಾಡಿದೆ. ನಾನು ಅವರ ಮನೆಗೆ ಹೋಗಿ ಸುಮಾರು ೪ ವರ್ಷ ಗಳಾಗಿತ್ತು ಹೋಗಿ ಅವರ ಮನೆ ಸೇರಿದ ತಕ್ಷಣ ಉಭಯ ಕುಶಲೋಪರಿಗಳನ್ನು ಮುಗಿಸಿ ಚೌ ಚೌ ಬಿಸ್ಕತ್ತು ತಿನ್ನುತ್ತ ಮಾತನಾಡುತ್ತಿರುವಾಗ ನಮ್ಮ ಅಣ್ಣ ನಮ್ಮ ತಾಯಿಗೆ ಹೇ ನಿನ್ನ 2nd year BA ದು ಒಂದು ಪುಸ್ತಕ ಹಾಗೆ ಇಟ್ಟಿದಿನಿ ಕಣೆ ಅಂದ ( ಹೆಚ್ಹು ಸಲಿಗೆ ಚಿಕ್ಕಮ್ಮ ಆದರು ಹೋಗೆ ಬಾರೆ ಎಂದೆ ಮಾತನಾಡುತ್ತಾರೆ ) ನಮಮ್ಮ ಯಾವುದೊ ಅದು ಅಂದ್ರು ಅದಕ್ಕೆ ನಮ್ಮಣ್ಣ untouchable ಅಂತ ನೆನಪಿದ್ಯ ಅಂದ್ರು ಅಮ್ಮ ಹೌದು ಹೌದು ಇನ್ನು ಇತ್ತಿದ್ಯ good ಅಂದ್ರು ಅದಕ್ಕವ ನಾನು ಮಾತ್ರ ಯಾರಿಗೂ ಪುಸ್ತಕ ಕೊಡೋದಿಲ್ಲಪ ಅದನ್ನ ಯಾರಿಗದ್ರು ಕೊಟ್ರೆ ವಾಪಾಸ್ ಬರೋದೆ ಕಷ್ಟ ಅದಕ್ಕೆ ಜೋಪಾನವಾಗಿ ಜೋಡಿಸ್ತೀನಿ ಸಮಯ ಸಿಕ್ಕಾಗ ಓದ್ತಾ ಇರ್ತೀನಿ ಅಂದ ಅಷ್ಟರಲ್ಲೇ ಅಲ್ಲೇ ಕೂತಿದ್ದ ನಮ್ಮ ದೊಡ್ಡಪ್ಪ ಕಣಗಾಲ್ ಶಂಕರ್ ನಾರಾಯಣ್ ( ಕನ್ನಡ ಚಿತ್ರ ರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಮೊದಲನೇ ತಮ್ಮ ) ಒಂದು ಮಾತು ಹೇಳಿದರು " ಪುಸ್ತಕಂ ವನಿತಂ ವಿತ್ತಂ ಪರ ಹಸ್ತೇ ಗತಂ ಗತಂ " ಆಹಾ ಎಷ್ಟು ಅರ್ಥ ಗರ್ಭಿತವಾಗಿದೆ ಈ ಮಾತು ಪುಸ್ತಕ ಅಗಲಿ ಹೆಣ್ಣಾಗಲಿ ಹಣ ಅಗಲಿ ಇನ್ನೊಬ್ಬರ ಕೈಗೆ ಹೋದರೆ ಅದು ಹೋದಂತಯೇ ತಿಳಿಯಬೇಕು ಅಕಸ್ಮಾತ್ ಮತ್ತೆ ಬಂದರು ಅದು ಸರಿಯಾಗಿ ಬರುವುದು ಬಹಳ ಕಷ್ಟ , ಸರಿಯಾದ ಮಾತು ನನ್ನ ಜೆವನದಲ್ಲೇ ಅಂತ ಸಂಗತಿಗಳು ನಡೆದಿವೆ ನಾನು ೫ನೆ ತರಗತಿ ಓದೋವಾಗ ನನಗೆ ಬಹುಮಾನವಾಗಿ ಬಂದಿದ್ದ ಒಂದು ಜನರಲ್ knowledge ಪುಸ್ತಕವನ್ನ ತೆಗೆದುಕೊಂಡಿದ್ದ ಮೇಸ್ಟ್ರು ನಾನು ಪ್ರೌಢ ಶಾಲೆ ಸೇರುವರೆಗೂ ಕೇಳಿದ್ರು ವಾಪಾಸ್ ಕೊಡಲಿಲ್ಲ ಕೇಳಿದಾಗೆಲ್ಲ ಎಲ್ಲೋ ಇಟ್ಟು ಬಿಟ್ಟಿದ್ದೀನಿ, ನನ್ನ ಮಗಳು ಸ್ಕೂಲ್ ಗೆ ತೊಗೊಂಡು ಹೋಗಿದ್ದಾಳೆ, ನಮ್ಮಕ್ಕನ್ ಮಗ ಓದ್ತಾ ಇದಾನೆ, ಇವತ್ ತೆಗೆದು ಇಟ್ಟಿದ್ದೆ TV ಹತ್ರ ಮರ್ತು ಬಂದಿದೀನಿ, ಹೀಗೆ ಕಾರಣ ಕೊಟ್ಟು ಕೊಟ್ಟು ಕಡೆಗೆ ನಂಗೆ ಬೇಜಾರಾಗಿ ಕೇಳೋದು ನಿಲ್ಲಿಸಿಬಿಟ್ಟೆ . ಇನ್ನು ಹಣದ ವಿಷಯಕ್ಕೆ ಬಂದರೆ PUC ಅಲ್ಲಿ snooker ಆಡುವ ಹುಚ್ಚು ಆಗ JP ನಗರದ ಒಂದು snooker parlour ಅಲ್ಲಿ ನಾವೆಲ್ಲ ಸ್ನೇಹಿತರು ಅಡುತಿದ್ದೆವು ಅಲ್ಲಿ ನನ್ನ ಕೆಲವು ಗೆಳೆಯರು account ಇಟ್ಟು ಅಡುತಿದ್ದರು ಅ parlour ಯಜಮಾನ ಅಲ್ಲಿ ಸ್ವಲ್ಪ ಹವಾ ಇಟ್ಟಿರೋ ಮನುಷ್ಯ. PU ಫೈನಲ್ exam ಹಾಲ್ ಟಿಕೆಟ್ ತೆಗೆದು ಕೊಂಡು ಕುಷಿಯಾಗಿ ಒಂದೆರಡು ಬೋರ್ಡ್ ಆಡೋಣ ಅಂತ ಹೋದರೆ ಆ parlour owner ಎಲ್ಲಿ ಮಗ ಹಾಲ್ ಟಿಕೆಟ್ ತೋರ್ಸಿ ಅಂತ ಒಂದಿಬ್ಬರದು ತೊಗೊಂಡು ಬ್ಯಾಲೆನ್ಸ್ settle ಮಾಡಿ ನಂತರ ಹಾಲ್ ಟಿಕೆಟ್ ಕೊಡ್ತೀನಿ ಅಂತ ಸತಾಯಿಸಿದ ನಮ್ಮ ಹುಡುಗ್ರು ಎಷ್ಟು ಕೆಳ್ಕೊಂದ್ರು ಕೊಡಲಿಲ್ಲ ಕಡೆಗೆ ನನ್ನ ಬಳಿ ಉಳಿಸಿದ್ದು ಪಳಿಸಿದ್ದು ಸುಮಾರು ಒಂದು ಸಾವಿರ ಇಟ್ಟು ಅದನ್ನ ಕೊಟ್ಟು ಬೇಗ ವಾಪಾಸ್ ಕೊಡಬೇಕು ಮಗ ಅಂದೆ ಸುಮಾರು 7 ವರ್ಷ ಆಯಿತು ಇನ್ನು ಹಣ ವಾಪಾಸ್ ಬಂದಿಲ್ಲ ಈಗ ಕೆಳಕ್ಕೂ ಆಗಲ್ಲ. ಇನ್ನು ಹುಡುಗಿ ವಿಷಯ ನನಗೆ ಅನುಭವಕ್ಕೆ ಬಂದಿಲ್ಲ ನಮ್ಮ ಸ್ನೇಹಿತರು ಹೇಳ್ತಾ ಇರ್ತಾರೆ ಮಗ ಸುಮ್ನೆ ಫ್ರೆಂಡ್ ಮಾಡಿ ಕೊಟ್ಟೆ ಪಟಯಿಸ್ಕೊಂಡು ಬಿಟ್ಟ ಅಂತ , ಅದಕ್ಕೆ ದಯವಿಟ್ಟು ಗೆಳೆಯರೇ ಈ ಮೂರರ ಬಗ್ಗೆ ಜೋಪಾನ ಹುಷಾರಾಗಿ handle ಮಾಡಿ .......
Friday, March 25, 2011
ಎಳೆ ಹುಡುಗನ ಕನಸುಗಳು
ಜೀವನವನ್ನು ಸರಿಯಾಗಿ ಗಮನಿಸುತ್ತಾ ಹೋದರೆ ಒಮ್ಮೊಮ್ಮೆ ಅತೀ ಚಿಕ್ಕ ವಿಷಯಗಳು ಮನಸಿಗೆ ನಾಟಿಬಿಡುತ್ತವೆ, ನಮ್ಮ ಮನೆ ಪಕ್ಕದಲ್ಲೇ ಇರುವ ಒಬ್ಬ ಹುಡುಗನ್ನ ನನ್ನ ಗಾಡಿ ಒರೆಸಲೆಂದು ಕರೆದೆ ಅವನ ಹೆಸರು ವಿಶ್ವನಾಥ ಪ್ರೀತಿಯಿಂದ ಎಲ್ಲರು ಪಪ್ಪಳ ಎಂದು ಕರೀತಾರೆ. ಹತ್ತಿರದಲ್ಲೇ ಇರೋ ಒಂದು ಸರ್ಕಾರೀ ಶಾಲೆಯಲ್ಲಿ 3 ನೆ ತರಗತಿ ವ್ಯಾಸಂಗ ಮಾಡ್ತಾ ಇದಾನೆ ಓದಿನಲ್ಲೂ ಮುಂದು ಕೆಲಸದಲ್ಲೂ ಮುಂದು ನ ಕರೆದ ತಕ್ಷಣ ಓಡಿ ಬಂದು ಏನು ಪವನಣ್ಣ ಕರೆದ್ರಲ್ಲ ಅಂದ, ಗಾಡಿ ಒರೆಸಿ ಕೊಡೊ ಪಪ್ಪಳ ಅಂದೆ ಅದಕ್ಕೆ ಅವರಮ್ಮಮ್ಗೆ ಅಮ್ಮೋ ನ ಪವನಣ್ಣ ವೀಟ್ ಕಿಟೆ ಇರಕ್ಕೆ ಅಂತ ಕಿರುಚಿದ( ಅವರ ಮಾತೃ ಭಾಷೆ ತಮಿಳು ) ನಾನು ಗಾಡಿ ವರೆಸೋ ಬಟ್ಟೆ ತೆಗೆದು ಕೊಟ್ಟೆ ಹಾಗೆ ಒರೆಸುತ್ತಾ ಒರೆಸುತ್ತಾ ಪವನಣ್ಣ ನೀವು ಎಸ್ತನೆ ಕ್ಲಾಸು ಅಂದ, ನಾನು ಇಂಜಿನಿಯರಿಂಗ್ ಕಣೋ ಪಪ್ಪಳ ಅಂದೆ, ಅಂದ್ರೆ 20 ನೆ ಕ್ಲಾಸ್ ಅ ಅಂದ ನಾನು ಸ್ವಲ್ಪ ಯೋಚಿಸಿ ಲೆಕ್ಕ ಹಾಕಿ 16 ನೆ ಕ್ಲಾಸು ಅಂದೆ, ಹಾಗಾದ್ರೆ ನಾನು ಇ ಥರ ಗಾಡಿ ತೊಗೋಬೇಕು ಅಂದ್ರೆ ಇನ್ನು ೧೩ ಕ್ಲಾಸ್ ಓದಬೇಕು ಅಂದ. ಸ್ವಲ್ಪ ನಕ್ಕು ಹೌದು ಧೌದು ಎಂದೆ , ಹಗೆ ಗಾಡಿ ಒರೆಸುತ್ತಾ ಒರೆಸುತ್ತಾ ಪವನಣ್ಣ ನೆನ್ನೆ ನಾನು ಸೌತೆ ಕಾಯಿ ಮಾರಕ್ ಹೋಗಿದ್ದೆ ಅಂದ , ಅವರ ತೋಟದಲ್ಲಿ ಸೌತೆ ಕಾಯಿ ಬೆಳೆ ಇರಲಿಲ್ಲ ಅಲ್ಲದೆ ಅಕ್ಕ ಪಕ್ಕದ ಯಾವ ತೋಟದಲ್ಲೂ ಸೌತೆಕಾಯಿ ಬೆಳೆ ಇರಲಿಲ್ಲ ಇವನ ಹೇಗೆ ಮಾರಿಕೊಂಡು ಅನ್ನೋ ಅನುಮಾನದಲ್ಲೇ ಲೋ ಪಪ್ಪಳ ಸೌತೆಕಾಯಿ ಎಲ್ಲಿಂದ ಬಂತೋ ಅಂದೆ ಅದಕ್ಕೆ ಅವ ಪವನಣ್ಣ ಆದ ಯಾರ್ದೋ ಮನೇಲಿ ಸ್ಕೂಲ್ ಇಂದ ವಾಪಾಸ್ ಬರೋವಾಗ ಹಸುಕಾಕು ಅಂತ ಕೊಟ್ರು ನ ಮಾರಿಕೊಂಡು ಬಂದ್ ಬಿಟ್ಟೆ ಅಂದ ಅದಕ್ಕೆ ನಾನು ಲೋ ಕೆಟ್ಟಿರೋ ಸೌತೆಕಾಯಿ ಯಾರದ್ರು ಮಾರ್ತರೇನೋ ಅಂದೆ ಅವನು ಇಲ್ಲ ಪವನಣೋ.ಚಂದಗಿತ್ತು ಅದಕ್ಕೆ ಮಾರಿಕೊಂಡು ಬಂದೆ ಅಂದ ಸರಿ ಎಷ್ಟು ಕಾಸ್ ಬಂತು ಏನ್ ಮಾಡಿದೆ ಅಂದೆ ಅದಕ್ಕೆ ೨೦ ರುಪಾಯಿ ಬಂತು ನಮ್ಮಮ್ಮ ಪಾಪ ಓಲೆ ಇಲ್ಲ ಅಂತ ಇದ್ಲು ಅದಕ್ಕೆ ಚಿನ್ನದ ವಾಲೆ ತಂದು ಕೊಟ್ಟೆ ಅಂದ ನನಗೆ ನಗು ತಡೆಯಕ್ಕಾಗದೆ ಲೋ ಪಪ್ಪಳ 20 ರೂಪಾಯಿಗೆ ಯಾರೋ ಚಿನ್ನದ ವೋಲೆ ಕೊಡ್ತಾರೆ ಅಂದ್ರೆ ಅಯ್ಯೋ ಹೋಗ ಪವನಣ್ಣ ಅಷ್ಟೇ ಮತ್ತೆ ನಿಮಗೆ ಗೊತ್ತಿಲ್ಲ ಅಂದ , ಆಮೇಲೆ ಹಾಗೆ ಮುಂದುವರೆಸುತ್ತಾ ಆದ್ರೆ ಆ ವಾಲೆನ ಐಶು ಕದ್ದುಕೊಂಡೋಗವಳೆ ಕೇಳಿದ್ರೆ ನಂದೇ ಅಂತವ್ಲೇ ಪವನಣ್ಣ ಅಂದ, ಮತ್ತೆ ಈಗ ಏನೋ ಮಾಡ್ತ್ಯ ಅಂದೆ ಅದಕ್ಕೆ ಅವನು ಅಯ್ಯೋ ಹೋದ್ರೆ ಹೋಗ್ಲಿ ಶುಕ್ರವಾರ ಸಂತೆಗೆ ನಮ್ಮತ್ತೆ ಜೊತೆ carrot ಮಾರಕ್ ಹೋಗ್ತೀನಿ ಸ್ಕೂಲ್ ಬಿಟ್ ತಕ್ಷಣ ಹೋಗಿ 3 hour ವ್ಯಾಪಾರ ಮಾಡಿದ್ರೆ 20 ರುಪಾಯಿ ಕೊಡ್ತಾರೆ ಅ ಕಾಸಲ್ಲಿ ಸಂತೆಲೆ ಓಲೆ ತೆಕ್ಕೊಡ್ತೀನಿ ಅಂದ wow ಅವನ ಅಮ್ಮನಿಗೆ ವಾಲೆ ಕೊಡಿಸಬೇಕಂಬ ಅಸೆ ಅ ವಯಸಿಗೆ ತಾಯಿಯ ನೋವನ್ನ ಅರ್ಥ ಮಾಡ್ಕೊಳೋ ಮನಸು ನೋಡಿ ನನಗೆ ದಿಗ್ಭ್ರಮೆ ಆಯಿತು.ಅಷ್ಟರಲ್ಲೇ ಗಾಡಿ ಒರೆಸಿದ್ದಾಗಿತ್ತು ಒರೆಸೋ ಬಟ್ಟೆ ಒದೆರಿ ವಾಪಾಸ್ ಕೊಟ್ಟು ಹೋಗ್ತೀನಿ ಪವನಣ್ಣ ನಮ್ಮಪ್ಪನ ಜೊತೆ ನೀರ್ ಕಟ್ಟಕ್ ಹೋಗ್ಬೇಕು ಅಂತ ನಿಂತ, ನಾನು ಜೆಬಿಗೆ ಕೈ ಹಾಕಿದರೆ 3 ರು ಚಿಲ್ಲರೆ ಇತ್ತು ಕೊಟ್ಟು ಹೋಗಿ ಹುಂಡಿಗೆ ಹಕ್ಕೊಲೋ ಪಪ್ಪಳ ಅಂದೇ ಕುಷಿ ಕುಷಿಯಾಗಿ ಮನೆ ಕಡೆ ಓಡಿದ,.....
Tuesday, March 15, 2011
ಇಲ್ಲ ಅಭ್ಯಂತರ ಕೇಳಲು ಪ್ರೀತಿ ಬೈಗುಳ
ಇಲ್ಲ ಅಭ್ಯಂತರ ಕೇಳಲು ಪ್ರೀತಿ ಬೈಗುಳ
ಇಲ್ಲ ನನಗಾತುರ ಕೇಳಲು ಎದೆಯ ತಳಮಳ
ಕಾಯುವೆ ಕೊನೆಯ ಕ್ಷಣದವರೆಗೂ
ಜನುಮದ ಕೊನೆಯ ಘಳಿಗೆವರೆಗೂ
ಹಾಕೆನು ಹೃದಯದ ಬಾಗಿಲ ತೆರೆದಿದೆ ನಿನಗಾಗಿ
||ಇಲ್ಲ ಅಭ್ಯಂತರ ಕೇಳಲು ಪ್ರೀತಿ ಬೈಗುಳ||
ಸಮಯದ ಪರಿವೆ ಇಲ್ಲ ನಿನ್ನೊಂದಿಗೆ ಮಾತನಾಡುತಿರಲು
ಕತ್ತಲೆ ಲೋಕವೆಲ್ಲ ನಿ ನನ್ನ ಜೊತೆಗೆ ಇರಲು
ಮಾತಿಗೆ ಕೊರತೆ ಇಲ್ಲ ಮೌನದ ಸುಳಿವೇ ಇಲ್ಲ
ಬದುಕಲಿ ನೀನೆ ಎಲ್ಲ ನೀನಿಲ್ಲದೆ ಏನು ಇಲ್ಲ
||ಇಲ್ಲ ಅಭ್ಯಂತರ ಕೇಳಲು ಪ್ರೀತಿ ಬೈಗುಳ||
ಮುಸ್ಸಂಜೆಯು ಮಂಕಾಗಿದೆ ನಿನ್ನದೇ ಚೆಲುವಲಿ
ಮುಂಜಾನೆಯೇ ಮರೆತೋಗಿದೆ ನಿನ್ನದೇ ನೆನಪಲಿ
ಸಹನೆಗೆ ಮಿತಿಯೇ ಇಲ್ಲ ಸಂಶಯ ಇನ್ನು ಬೇಕಿಲ್ಲ
ಸಂತಸ ಬದುಕು ಎಲ್ಲ ನಾನಾಗುವೆ ನಿನ್ನ ನಲ್ಲ
||ಇಲ್ಲ ಅಭ್ಯಂತರ ಕೇಳಲು ಪ್ರೀತಿ ಬೈಗುಳ||
Thursday, March 10, 2011
ನೀನೆ ನನ್ನ ಜೀವ ನೀನೆ ನನ್ನ ಭಾವ
ನೀನೆ ನನ್ನ ಜೀವ ನೀನೆ ನನ್ನ ಭಾವ
ಪ್ರೇಮ ಸಿಂಚನ ನೀನೇನೆ
ಬಾವ ಮಂಥನ ನಿನದೇನೆ
ಉಸಿರು ನೀಡಿ ಮತ್ತೆ ಉಸಿರು ತೆಗೆಯುವ
ಖೂನಿ ಕೋರಳು ನೀನೇನೆ
ಪ್ರೀತಿ ಕಲಿಸುವಳು ನೀನೇನೆ
ಹೃದಯ ಕದ್ದವಳು ನೀನೇನೆ
ಪ್ರೀತಿ ಮಾಡುತ ಪ್ರೀತಿ ಕೊಲ್ಲುವ
ಸಂಚು ಹೂಡುವಳು ನೀನೇನೆ
|| ನೀನೆ ನನ್ನ ಜೀವ ||
ಸುಂದರ ಸುಂದರ ಭಾವನೆ ಮುಡಿಸಿ ಮರೆಯಾದವಳು ನೀನೇನೆ
ಕಣ್ಣ ಸೈಗೆಯಲಿ ಪ್ರೀತಿ ಕರೆ ಮಡಿ ಕಾಣೆಯಾದವಳು ನೀನೇನೆ
ಪ್ರೀತಿ ಸಿಹಿಯನು ಉನಿಸುತಿದ್ದಾಗ ನಾಯಕಿ ಕೂಡ ನೀನೇನೆ
ಕಣ್ಣು ಕಾಣದ ಕುರುಡು ಪ್ರೀತಿಗೆ ಖಳ ನಾಯಕಿಯೂ ನೀನೇನೆ
||ನೀನೆ ನನ್ನ ಜೀವ||
ಮುದ್ದು ಮಾತಿನಲ್ಲಿ ಮನಸು ಕದ್ದವಳು ಮೋಹಕ ರಾಶಿಯು ನೀನೇನೆ
ನನ್ನ ಪ್ರೀತಿಯಲಿ ಉಸಿರಾಗಿರುವಳು ಮನಸು ಕೊಟ್ಟವಳು ನೀನೇನೆ
ಮನಸು ನೀಡಿ ಮತ್ತೆ ಮನಸ ಕಸಿಯುವ ಮೋಸಗಾತಿಯೂ ನೀನೇನೆ
ಪ್ರೀತಿ ಮಾಡಿ ಮತ್ತೆ ಪ್ರಾಣ ತೆಗೆಯುವ ಪ್ರೇಮ ರಕ್ಕಸಿ ನೀನೇನೆ
||ನೀನೆ ನನ್ನ ಜೀವ||
Subscribe to:
Posts (Atom)