ಆಗಿನ್ನೂ ವಯಸ್ಸು ಇಪ್ಪತ್ತೊಂದಷ್ಟೇ ಡಿಪ್ಲೋಮಾ ಮುಗಿಸಿದ ನನಗೆ ಹಣ ಸಂಪಾದಿಸುವ ಹುಚ್ಚು. ಆ ಹುಚ್ಚು ನನ್ನ ಕುಟುಂಬದವರ ಇಂಜಿನಿಯರಿಂಗ್ ಓದಿಸುವ ಆಸೆಯನ್ನು ನುಚ್ಚು ನೂರು ಮಾಡಿತ್ತು. ಯಾವುದೊ ಖಾಸಗಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ hardware ಮತ್ತು networking ಕಲಿಯುತ್ತಿದ್ದೆ. ೭ ತಿಂಗಳ ಅವಧಿಯ course ಅದ್ದರಿಂದ ಮನೆಯಲ್ಲೇ ಕೂತು ಕಾಲಹರಣ ಮಾಡುವ ಬದಲು ಯಾವುದಾದರು ಕೆಲಸಕ್ಕೆ ಹೋಗಿ ಹಣ ಸಂಪಾದಿಸೋಣವೆಂದು ಕೆಲಸದ ಬೇಟೆಗೆ ಹೊರಟೆ. ನನ್ನ ಸ್ನೇಹಿತ ಪುತ್ರ ಅದಾಗಲೇ ಸಂಗೀತ mobiles ನಲ್ಲಿ ಕೆಲಸ ಮಾಡುತಿದ್ದ, ಅವನ ನಿರ್ದೆಶನದಂತೆ ಯಾವುದೋ interview ಗೆ ಹೊರಟೆ. ನನ್ನ ಜೊತೆಗೆ ಮತ್ತೊಬ್ಬ ಸ್ನೇಹಿತ ನವೀನ್ ಸಹ ಬಂದಿದ್ದ ಮೊದಲ interview ನಲ್ಲೆ ಇಬ್ಬರಿಗೂ ಕೆಲಸ ಸಿಕ್ಕಿತು ಮಾರ್ಕೆಟಿಂಗ್ executive ೬೦೦೦ ಸಂಬಳ ಆಹಾ!! ಏನೋ ಸಂತೋಷ, ಆ ಕೆಲಸ ಸಿಕ್ಕಿದ ಖುಷಿಯಲ್ಲಿ ದಿನಪೂರ್ತಿ ನನ್ನ ಮುಖದಲ್ಲಿ ಮಂದಹಾಸ ಕಡಿಮೆಯೇ ಆಗಿರಲಿಲ್ಲ. ಮಾರನೆಯ ದಿವಸ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾದೆ ಆಗ ನಮ್ಮ ಎಜಮನರು ಒಂದು fire extinguisher ತಂದು ಮುಂದಿಟ್ಟು industrial areas ಗೆ ಹೋಗಿ ಕಂಪನಿಗಳಿಗೆ ಇದನ್ನು ಮಾರಾಟ ಮಾಡಿ ಬನ್ನಿ ಎಂದರು. ಡಿಪ್ಲೋಮಾ e & ce ಓದಿದ ನನಗೆ fire extinguisher ಮಾರುವ ಕೆಲಸ, ಸರಿ ಯಾವ ಕೆಲಸ ಆದರು ಅದನ್ನು ಶ್ರದ್ಧೆಯಿಂದ ಮಾಡಬೇಕು ಎಂದುಕೊಂಡು ನಾನು ಮತ್ತು ನನ್ನ ಸ್ನೇಹಿತ fire entinguisher ಮತ್ತು ಒಂದಷ್ಟು brouchers ಮತ್ತು ವಿಸಿಟಿಂಗ್ ಕಾರ್ಡ್ಗಳನ್ನು ಹೊತ್ತು ಬೊಮ್ಮಸಂದ್ರ industrial area ಗೆ ನಡೆದೆವು . ಯಾವ ಕಂಪನಿಗಳ ಬಾಗಿಲಿಗೆ ಹೋದರು watchman ಗಳು ಒಳಗೆ ಬಿಡುತ್ತಿರಲಿಲ್ಲ ಅಲ್ಪ ಸ್ವಲ್ಪ ಇಂಗ್ಲಿಷ್ ನಲ್ಲೆ getout ಅಂದು ಬಿಡುತಿದ್ದರು, ಆ ದಿನವೆಲ್ಲ ಅಲೆದು ಅಲೆದು ಸುಸ್ತಾಗಿ ಮತ್ತೆ ಆಫಿಸಿಗೆ ಬಂದು ಸರ್ ನಮ್ಮಿಂದ ಇ ಕೆಲಸ ಸಾಧ್ಯವಿಲ್ಲ ದಯವಿಟ್ಟು ಕ್ಷಮಿಸಿ ಎಂದು ಹೇಳಿ ಮನೆಗೆ ಹೊರಟುಬಿಟ್ಟೆವು.............. ಮುಂದೆ ಇದೆ ಮಾರಿಹಬ್ಬ........