Tuesday, September 2, 2014

ಚಡಪಡಿಕೆ

ಹುಡುಕುತ್ತಿರುವೆ, ಮತ್ತೆ ಮತ್ತೆ ಹುಡುಕುತ್ತಿರುವೆ
ಚಡಪಡಿಕೆ ನಿರಂತರ
ಮನವು ಹರಿವ ನದಿಯಂತಾಗಿದೆ
ಯಾವ ದಾರಿಯೋ ಏನೋ
ಯಾವ ಸಾಗರದಲ್ಲಿ ಲೀನವಾಗುವೆನೋ ಏನೋ

ಎಲ್ಲೋ ದೂರದಲ್ಲೊಂದು ಆಕೃತಿ
ಎತ್ತರ ನನ್ನನ್ನೇ ಹೋಲುತ್ತಿದೆ
ಧ್ವನಿಯೂ ನನ್ನದೇ..
ಇಗೋ ಈಗಲೇ ಮಾತನಾಡಿಸಲು ಹತ್ತಿರ ಹೊರಟೆ...
ಅರೆ! ಮಾಯವಾಯ್ತಲ್ಲ
ನನ್ನ ನಾನೇ ಅಷ್ಟು ದೂರ ಕಂಡೆನೇನು

ಯಾವುದೋ ಕನಸು ನನ್ನ ಕಾಡುತ್ತಿದೆ
ಸುಪ್ತವಾಗಿ ಕೂತಿದ್ದ ಆಸೆಗಳೆಲ್ಲ
ಒಮ್ಮೆಲೇ ಚಿಮ್ಮಿ ಸುನಾಮಿ ಎಬ್ಬಿಸಿದೆ
ಹರಿದು ಬಿಡಲೇ
ಯಾವುದೇ ಅಣೆಕಟ್ಟುಗಳಿಗೂ ಅಂಜಬೇಕಿಲ್ಲ
ನನ್ನೀ ಉತ್ಕಟ ಆಸೆ ನಿರ್ಧಾರಗಳಿಗೆ
ಎಲ್ಲವನ್ನೂ ದಾಟುವ ಶಕ್ತಿಯಿದೆ

ಪವನ್ ಪಾರುಪತ್ತೇದಾರ

1 comment:

  1. ಮನಸ್ಸಿಗಿಂತಲೂ ದೊಡ್ಡ ಶಕ್ತಿ ಇಲ್ಲ! ನಿಮ್ಮ ಸಾಲುಗಳು ನೆಚ್ಚಿಗೆಯಾದವು.
    ’ನನ್ನೀ ಉತ್ಕಟ ಆಸೆ ನಿರ್ಧಾರಗಳಿಗೆ
    ಎಲ್ಲವನ್ನೂ ದಾಟುವ ಶಕ್ತಿಯಿದೆ’

    shared at:
    https://www.facebook.com/groups/kannada3K/permalink/435285689889320/

    ReplyDelete