Monday, December 12, 2011

ಹೊಗಳಿಬಿಡಿ ನನ್ನ


ಹೊಗಳಿಬಿಡಿ ನನ್ನ
ನಾನೇನು ಉತ್ತಮನಲ್ಲ
ಹಾಗಂತ ಕೆಟ್ಟವನೂ ಅಲ್ಲ
ಆದರೂ ಹಾಳು ಮನದ ಮುಲೆಯಲ್ಲಿ
ಹೊಗಳವರೇನೋ ಎಂಬ ದುರಾಸೆ
ಹೊಗಳಿಬಿಡಿ ನನ್ನ

ಆಗಾಗ ತಲೆಕೆಟ್ಟ ಬರಹಗಳ ಓದಿ
ಪ್ರಾಸವಿಲ್ಲದ ಪದ್ಯದ ಅಂತರಾಳವನು ಅರಿತು
ಅಕ್ಷರದ ಭಾವಕ್ಕೆ ಬಹಳಷ್ಟು ಬೆಲೆ ನೀಡಿ
ಅರೆಬೆಂದ ಸಾಹಿತಿಯ ಕವನವನು ತಿಳಿದು
ಹೊಗಳಿಬಿಡಿ ನನ್ನ

ಉಪಮೆಯ ಉಪಯೋಗ ನನಗೆ ತಿಳಿದಿಲ್ಲ
ಅಲಂಕಾರಗಳಲ್ಲಿ ಪರಿಣಿತನು ನಾನಲ್ಲ
ತಿಳಿದವರು ನೀವು ತಿಳಿಯದವ ನಾನು
ಆಂಬೆಗಾಲನು ಇಡುತಿರುವೆ ಚಿವುಟದಿರಿ ನನ್ನ
ನೋವಲೂ ನಿಲ್ಲದು ನನ್ನ ಬರವಣಿಗೆ

ಅತ್ತಾಗ ದುಃಖದಲಿ ಬರೆವೆ
ನಕ್ಕಾಗ ನಲಿವಿನಲಿ ಬರೆವೆ
ಒಟ್ಟಿನಲಿ ಬದುಕಲ್ಲಿ ಬರವಣಿಗೆ ಮೆರೆವೆ
ಕೇಳಿಬಿಡಿ ನನ್ನ ಅಹವಾಲು
ಹಾಕುತಿಹೆ ನಿಮ್ಮಯ ಎದೆಗೆ ಟಪಾಲು
ಹೊಗಳಿಬಿಡಿ ನನ್ನ

ಪವನ್ :-

No comments:

Post a Comment