Monday, May 23, 2011

ಹೋಗುವ ಮುನ್ನ ...........


ಹೋಗುವ  ಮುನ್ನ ............
    ಬಣ್ಣ  ಬಣ್ಣದ  ಮಾತನಾಡಿ, ನಿಮ್ಮ  ಪ್ರೀತಿಯ  ಬಲೆಯಲ್ಲಿ  ನನ್ನೆಲ್ಲ  ಮುಗ್ದತೆಯನ್ನು ಕೆಡವಿದಿರಿ. ನನ್ನ  ಅತಿ ಮಿತಿಮೀರಿದ  ಹುಚ್ಚು  ಪ್ರೀತಿಯನ್ನು  ನಿಮ್ಮ  ಕಾಲಡಿಯಲ್ಲಿ  ಹೊಸಕಿ  ಹಾಕಿ  ಏನೂ  ಅರಿಯದವರ೦ತೆ ನಟಿಸುತ್ತ, ನನ್ನದಲ್ಲದ ತಪ್ಪಿಗೆ ಶಿಕ್ಷೆಯ ಕೊಟ್ಟವರು  ನೀವು. ಹೇಗೆ  ತಾನೇ  ಮರೆಯಲಿ  ನಿಮ್ಮಾ ...?
    ನಿಮ್ಮೆಲ್ಲ ಸಿಹಿನೆನಪುಗಳ  ಜೊತೆ , ನನ್ನೆಲ್ಲಾ  ಮುಗ್ದತೆಯನ್ನ  ದಹಿಸಿದ  ಆ  ಕಹಿಘಳಿಗೆಗಳನ್ನೆಲ್ಲಾ  ಹೊತ್ತೊಯ್ಯುತ್ತಿದ್ದೇನೆ , ಮರಳಿ  ನನ್ನ  ಗೂಡಿಗೆ ... ನಿಮ್ಮೆಲ್ಲಾ  ಕೊಡುಗೆಗಳಿಗೆ ಕಣ್ಣೀರಿನ ಕ೦ದಾಯ ಭರಿಸಿದ್ದೇನೆ .. ಒಲ್ಲದ  ಮನಸಿನ ವಿದಾಯ ತಮಗೆ .....
    ಕೊನೆಯದಾಗಿ ಒ೦ದು ಮನವಿ: ಕಾರಣವೇ ಕೊಡದೆ ನನ್ನ ಬದುಕಿನ ಪುಟಗಳಲ್ಲಿ ಕೊನೆಯ ರುಜು ಮಾಡಬೇಡಿ ....ನಿಮ್ಮ  ಬದುಕಿನ ಎಷ್ಟೋ ಕಳೆದುಹೋದವರ ಪಟ್ಟಿಯಲ್ಲಿ  ಸೇರೋ  ಇಚ್ಛೆ  ಖOಡಿತಾ ನನ್ನಲಿಲ್ಲಾ ......ಆದರೆ ??

                                                                                                  ಗೆಳತಿ ವಿದ್ಯಾಶ್ರಿ ಬರಹ :- 

Wednesday, May 18, 2011

ಸಂಚಾರಿ ನಾನಾದೆ

ಸಂಚಾರಿ ನಾನಾದೆ ನಿನ್ನದೇ ಗುಂಗಿನಲಿ
ಅಲೆಮಾರಿ ನಾನಾದೆ ನಿನ್ನದೇ ನೆನಪಿನಲ್ಲಿ
ನೀನೇಕೆ ಮರೆಯಾದೆ ಬಂದು ನನ್ನ ಬಾಳಿನಲಿ 

ಒಬ್ಬೊಬ್ಬರ ಬದುಕಿನಲಿ ಒಂದೊಂದು ತಿರುವು ಇದೆ
ನನಗ್ಯಾಕೆ ಬದುಕೆಲ್ಲ ಪ್ರೀತೀಲೇ ತಿರುಗುತಿದೆ
ನಮ್ಮಿಬ್ಬರ ನಡುವಲ್ಲಿ ಏನೆಲ್ಲಾ ಕೊರತೆ ಇದೆ 
ನಮಗಂತೂ ತಿಳಿದಿಲ್ಲ ಲೋಕಾನೆ ಹೆದರುತಿದೆ 
ನನ್ನ ಇ ಕಣ್ಣಲ್ಲಿ ಚಿರಕಾಲದ ಕನಸು ಇದೆ 
ಕನಸೆಲ್ಲ ನನಸಾಗಿ ಮಾಡೋ ಛಲವು ಇದೆ 

ಇ ಬಾಳಿನ ಪಯಣದಲಿ ಅಪಘಾತಗಳು ಎಷ್ಟೋ  
ಪ್ರೀತಿಯ ಪಯಣದಲಿ ಬಲಿಯಾದವರು ಎಷ್ಟೋ 
ಗೊತ್ತಿಲ್ಲದ ದಾರಿಯಲಿ ಅಡಚಣೆಗಳು ಎಷ್ಟೋ 
ಗುರಿಯಿಲ್ಲದ ಬದುಕಿನಲಿ ಅವಘಡಗಳು ಎಷ್ಟೋ 
ಮನ ತುಂಬಾ ನಿನ್ನ ನೋಡುವ ಗುರಿಯನ್ನು ಹೊಂದಿದೆ
ನಿನ್ನಯ ಹುಡುಕಾಟಕೆ ಕೊನೆಯೇ ಕಾಣದೆ 

                                                        ಅವಳ ಹುಡುಕಾಟದಲ್ಲಿ  ಪವನ್ :-

Wednesday, May 4, 2011

ಹುಡುಗರ ಮನಸು-7

        ಮನೆಗೆ ಬಂದ ಪ್ರವೀಣನಿಗೆ ಇನ್ನ ಕವ್ಯಾಳದೆ ಗುಂಗು, ಯಾವಾಗ ಈ  ದಿನ ಮುಗಿದು ಹೋಗುತ್ತೋ ನಾಳೆ ಬೇಗ ಬರಲಿ ಅಂತಾನೆ ಕಾಲ ಕಳೆದ, 7 ಘಂಟೆಗೇ ಅಮ್ಮನಿಗೆ ಊಟ ಹಾಕು ಅಂದ ಅಮ್ಮ ಯಾಕೋ ಪ್ರವೀಣ ಎಲ್ಲರ ಜೊತೆ ಊಟ ಮಾಡಲ್ವ ಇವತ್ತು 9 ಘಂಟೆ ತನಕ ಇರೋ ಅಂದ್ರು ಅದಕ್ಕೆ ಪ್ರವೀಣ ಇಲ್ಲಮ್ಮ ನಾಳೆ ಬೆಳಿಗ್ಗೆ ಬೇಗ ಎದ್ದು ಓದಬೇಕು ಅದಕ್ಕೆ ಈಗ ಬೇಗ ಊಟ ಮಡಿ ಮಲಗ್ತೀನಿ ಅಂದ ಅದಕ್ಕೆ ಅಮ್ಮ ಸರಿ ಬಾ ಊಟ ಮಾಡು ಅಂತ ಬಡಿಸಿದರು ಪಟ ಪಟ ಅಂತ ಊಟ ಮಡಿ ಮುಗಿಸಿ ತನ್ನ ಕೋಣೆಗೆ ಹೋಗಿ ಕಾವ್ಯಳ ಕನಸು ಕಾಣುತ್ತ ನಿದಿರಿಗೆ ಜಾರಿದ. 4 ಘಂಟೆಗೆಲ್ಲ ಎದ್ದ ಪ್ರವೀಣ 6 ಘಂಟೆ ಅಷ್ಟು ಹೊತ್ತಿಗೆ ರೆಡಿ ಆಗಿಬಿಟ್ಟಿದ್ದ ಆಗ ತಾನೆ ಎದ್ದ ಅಮ್ಮ ಏನೋ ಪ್ರವೀಣ ಇಷ್ಟು ಬೇಗ ರೆಡಿ ಆಗಿದ್ಯಾ ಇವತ್ತು ಅಂದ್ರು ಆಗ ಪ್ರವೀಣ ಇವತ್ತು ಕಾಲೇಜ್ ನಲ್ಲಿ ಸೆಮಿನಾರ್ ಕೊಡಬೇಕು ಅಮ್ಮ ಅದಕ್ಕೆ ಗೆಳೆಯನ ಮನೆಗೆ ಹೋಗಿ prepare ಆಗ್ತೀನಿ ಅಂದ ಅದಕ್ಕೆ ಅಮ್ಮ ಸರಿ ಅರ್ಧ  ಘಂಟೆ ಅದ್ರು ಇರು ತಿಂಡಿ ಮಾಡಿ ಕೊಡ್ತೀನಿ ಖಾಲಿ ಹೊಟ್ಟೆಲಿ ಹೋಗಬೇಡ ಅಂದ್ರು ಆದರೆ ಪ್ರವೀಣನದೆ ಬೇರೆ ಲೋಕ ಪ್ರೀತಿಯ ಮಾಯೆಯಲ್ಲಿದ್ದ ಪ್ರವೀಣನಿಗೆ ಊಟ ತಿಂಡಿಯ ಅರಿವಿರಲಿಲ್ಲ ನಿದಿರೆಯ ಚಿಂತೆ ಇರಲಿಲ್ಲ ಅವನ ಮನಸ ತುಂಬಾ ಅವಳ ಧ್ವನಿ ಅವಳ ಅಂದ ಚಂದವೇ ಓಡಾಡುತ್ತಿತ್ತು ಅಮ್ಮ ತಿಂಡಿ ಕ್ಯಾಂಟೀನ್ ನಲ್ಲಿ ತಿಂತೀನಿ ಅಂತ ಹೇಳಿ ಹೊರಟೇಬಿಟ್ಟ ಪ್ರವೀಣ.

       ಒಂದು ದಿನ ಒಬ್ಬ ಹುಡುಗಿಯ ಜೊತೆ ಮಾತಾಡಿದ್ದಕ್ಕೆ ಇಷ್ಟೆಲ್ಲಾ ಬದಲಾಗಿದ್ದ 10 ಘಂಟೆ ಗೆ ಇರೋ ಕಾಲೇಜ್ ಗೆ 8 ಘಂಟೆಗೆ ಬಂದು ಕಾಯ್ತಿದ್ದ ಅವಳು ಯಾವಾಗ ಬರ್ತಲೋ ಅವಳನ್ನ ಯಾವಾಗ ನೋಡ್ತಿನೋ ಮಾತಾಡಿಸ್ತಿನೋ ಅನ್ನೋ ಕಾತುರತೆಯಲ್ಲೇ ಕಾಯ್ತಾ ಇದ್ದ ಅಂತು ಇಂತೂ 9-30 ಕೆ ಕಾವ್ಯ ಬಂದಳು ಅಷ್ಟರಲ್ಲಿ ಅವನ ಸ್ನೇಹಿತರ ಗುಂಪು ಸಹ ಬಂದಿತ್ತು ಅವರ ಜೊತೆ ಕಾಲೇಜ್ ಹೊರಗಿನ ಟೀ ಅಂಗಡಿ ಬಳಿ ಮಾತಾಡ್ತಾ ನಿಂತಿದ್ದ ಪ್ರವೀಣ ಇವಳನ್ನ ನೋಡಿದ ತಕ್ಷಣ ಅವರಿಗೆ ಒಂದು ಮಾತು ಹೇಳದೆ ಕಾವ್ಯಳ ಹಿಂದೆ ಹೊರಟು ಬಿಟ್ಟ ಜೊತೆಯಲ್ಲೇ ಇದ್ದ ಒಬ್ಬ ಸ್ನೇಹಿತ ಏನ್ ಮಗ ಎಲ್ಲೋ ಹೊರಟೆ ಅಂತ ಕೇಳಿದ ಅದಕ್ಕೆ ಪ್ರವೀಣ ಮಗ ಕ್ಲಾಸ್ ಅಲ್ಲಿ  ಸಿಕ್ತೀನಿ ಅಂತ ಹೇಳಿ ಕಾವ್ಯಲ ಹಿಂದೆ ಓಡಿದ 
          
                ಅಲ್ಲಿಗೆ ಹೊಸ ಪ್ರಿತಿಗಾಗಿ ಸ್ನೇಹಿತರಿಗೆ ಕೈ ಎತ್ತೋ ಪ್ರೊಗ್ರಾಮ್ ಶುರು ಮಡಿದ ನಮ್ ಪ್ರವೀಣ 

                                                                                                    ಮುಂದುವರೆಯುವುದು :-

Monday, May 2, 2011

ಹುಡುಗರ ಮನಸು-6

         ಆಗ ಪ್ರವೀಣ 2nd ಇಯರ್ Bsc ಓದುತ್ತ ಇದ್ದ ಓದಿನಲ್ಲಿ ಮಾತ್ರ ಅಲ್ಲದೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲೂ ಮುಂದಿದ್ದ ಪ್ರೀತಿ ಪ್ರೇಮದ ಗುಂಗಿರಲಿಲ್ಲ ಯಾವಾಗಲು ಸ್ನೇಹಿತರ ಜೊತೆ ಕೂಡಿ ಮಜಾ ಮಾಡ್ತಿದ್ದ ಆಗಾಗ ಹುಡುಗರೆಲ್ಲ ಸೇರಿ ಟ್ರಿಪ್ ಹೋಗ್ತಿದ್ರು birthday ಪಾರ್ಟಿಗಳು ಮಾಡ್ತಿದ್ರು, ಕ್ಲಾಸ್ ಅಲ್ಲಿ lucturers ನ ರೆಗಿಸ್ತ ಇದ್ದ ಅಷ್ಟೇ ಅಲ್ಲಾ ಎಲ್ಲಾ ಅಧ್ಯಾಪಕರ ಹತ್ತಿರ ಒಳ್ಳೆ ಹೆಸರನ್ನು ಇಟ್ಕೊಂಡಿದ್ದ , ಸ್ವರ್ಗದಂತಿತ್ತು ಅವನ ಬದುಕು ಅ ಸಮಯದಲ್ಲೇ PUC admission ಸ್ಟಾರ್ಟ್ ಆಗಿತ್ತು ಅವನ ಕಾಲೇಜ್ ಅಲ್ಲಿ PUC Bsc Msc ಎಲ್ಲ ಒಂದೇ campus ಅಲ್ಲಿ ಇತ್ತು ಪ್ರತಿ ಬಾರಿ ಕಾಲೇಜ್ ಗೆ ಹೊಸದಾಗಿ ಸೇರೋವರಿಗೆ ಫ್ರೆಷೆರ್ಸ್ ಡೇ ಮಾಡೋದು ಅವರ ಕಾಲೇಜ್ ನ ಅಭ್ಯಾಸ  ಹಾಗೆ ಈ ಬಾರಿ ಫ್ರೆಷೆರ್ಸ್ ಡೇ ಗೆ ಪ್ರೋಗ್ರಾಮ್ಸ್ register ಮಾಡೋ ಜವಾಬ್ದಾರಿ ಪ್ರವಿಣನ ಹೆಗಲ ಮೇಲೆ ಬಂದಿತ್ತು.ಅವನು ಎಲ್ಲಾ ಕ್ಲಾಸ್ ಅಲ್ಲೂ ಹಾಡು ಕುಣಿತ ನಾಟಕ ಮುಂತಾದ ಕಾರ್ಯಕ್ರಮಗಳಿಗೆ ಹೆಸರು ನೋಂದಣಿ ಮಾಡುತಿದ್ದ  ಹಾಗೆ ನೋಂದಣಿ ಮಾಡೋವಾಗ 1st PUC ಅಲ್ಲಿನ ಕ್ಲಾಸ್ ಅಲ್ಲಿ ಒಬ್ಬ ಹುಡುಗಿ ಹಿಂದಿ ಹಾಡೊಂದಕ್ಕೆ ಡಾನ್ಸ್ ಮಾಡುವುದಾಗಿ register ಮಾಡಿದ್ಲು ಪ್ರವೀಣ ಅಲ್ಲಿಯವರೆಗೂ ಯಾವ ಹುದುಗಿನು ಅಷ್ಟು observe ಮಾಡಿರಲಿಲ್ಲ ಅವಳ voice ಸಹಾ ತುಂಬಾ ಚೆನ್ನಾಗಿತ್ತು ಅವಳು ಕೂಡ ತುಂಬಾ ಸುಂದರವಾಗಿದ್ದಳು ಪ್ರವೀಣ ನಿನ್ನ ಹೆಸರು ಅಂದ ಅದಕ್ಕವಳು ಕಾವ್ಯ ಅಂದ್ಲು ಪ್ರವೀಣನಿಗೆ ಒಂಥರಾ ಕರೆಂಟ್ ಶಾಕ್ ಹೊಡೆದ ಹಾಗೆ ಆಯಿತು woooow .... ಯಾವತ್ತು ಯಾವ ಹುದುಗಿನು ಫ್ರೆಂಡ್ ರೀತಿ ಬಿಟ್ಟು ಬೇರೆ ರೀತಿ ನೋಡಿಯೇ ಇರಲಿಲ್ಲದ ಪ್ರವೀಣನಿಗೆ ಅವಳ ನೋಡಿದ ತಕ್ಷಣ love at first sight ಆಯಿತು 
        ಹೆಸರು register ಮಾಡ್ಕೊಂಡು ಕ್ಲಾಸ್ ಇಂದ ಆಚೆ ಬಂದ ಪ್ರವೀಣನಿಗೆ  ಯಾವುದೊ ಹೊಸ ಲೋಕಕ್ಕೆ ಹೋಗಿ ಬಂದ ಅನುಭವ ಆಗಿತ್ತು ಆದ್ರೆ ಅವನಿಗೆ ಗೊತ್ತಿಲ್ಲ ಅವನು ಸ್ವರ್ಗದಿಂದ ನರಕದ ಕಡೆ ಪಯಣ ಶುರು ಮಾಡಿದ್ದಾನೆ ಎಂದು 

                                                                                                               ಮುಂದುವರೆಯುವುದು :- 

Sunday, May 1, 2011

ಹುಡುಗರ ಮನಸು-5

       ಸಂಜೆ ಹೊತ್ತಿಗೆ ಮನೆಗೆ ಬಂದ ಪ್ರವೀಣನಿಗೆ ಮನಸಲ್ಲಿ ಏನೋ ಒಂದು ರೀತಿಯ ನಿರಾಳತೆ ಇತ್ತು. ಅಪ್ಪ ಅಮ್ಮ TV ನೋಡ್ತಾ ಕೂತಿದ್ರು ತಂಗಿ ಪೂಜ ಸಹ ಆಗ ತಾನೆ ಕಾಲೇಜ್ ನಿಂದ ಬಂದು ಕೂತಿದ್ಲು. ಮನೆಯೊಳಗೆ ಬಂದ ಪ್ರವೀಣ ಪೂಜ ನಿರು ತೊಗೊಂಡು ಬ ಅಂದ, ನೀರು ತರಲು ಎದ್ದ ಪುಜಾಳ ಜಡೆ ಎಳೆದು ಚೇಷ್ಟೆ ಮಡಿದ, ಮೊಬೈಲ್ ನ TV ಸ್ಟ್ಯಾಂಡ್ ಮೇಲೆ ಇಟ್ಟು ತಾನು ಅಪ್ಪನ ಪಕ್ಕ ಬಂದು ಕೂತ ಅದಕ್ಕೆ ಅಪ್ಪ ಏನೋ ಮಗನೆ ನಿನ್ ಹೆಂಡತಿನ TV ಮೇಲೆ ಕುಡಿಸಿ ಬಿಟ್ಟೆ ಇವತ್ತು ಅಂತ ರೇಗಿಸಿದರು ಅದಕ್ಕೆ ಪ್ರವೀಣ ಹೇ ಸುಮ್ನೆ ಇರಿ ಅಪ್ಪ ನೀವು ಅಂತ ಅಮ್ಮನ ನೋಡಿ ಏನಮ್ಮ ಸ್ಪೆಷಲ್ ಅಡುಗೆ ಮಾಡಿದ್ಯ ಇವತ್ತು, ಮಧ್ಯಾಹ್ನ ಊಟ ಮಾಡಕ್ ಆಗಿಲ್ಲ ಊಟ ಹಾಕು ಅಂದ ಅದಕ್ಕೆ ಅಮ್ಮ ನಿನಗಿಷ್ಟವಾದ ಬೆಂಡೆಕಾಯಿ ಸಾಂಬಾರ್ ಮಾಡಿದಿನೋ ಪ್ರವೀಣ ಏಳು ಊಟ ಮಾಡು ಅಂದ್ರು ಪ್ರವೀಣ ಅಲ್ಲೇ ಒಂದು ಚಾಪೆ ತೆಗೆದು ನೆಲದ ಮೇಲೆ ಕೂತ. ಅಪ್ಪ ಅಮ್ಮನಿಗೆ ಆಶ್ಚರ್ಯವಾಗಿತ್ತು ಯಾವಾಗ ನೋಡಿದರು ಮೊಬೈಲ್ ನಲ್ಲಿ ಮೆಸೇಜ್ ಮಾಡ್ಕೊಂಡು ಕುರ್ತಿದ್ದ ಮಗ ಅವತ್ತು ಮೊಬೈಲ್ ದೂರ ಇಟ್ಟಿದ್ದ, ಮನೆಗೆ ಬಂದ ತಕ್ಷಣ ಬ್ಯಾಗ್ ಬಿಸಾಕಿ ಉಟಾನು ಮಾಡದೇ ಮೊಬೈಲ್ ತೊಗೊಂಡು ಕಿವಿಗೆ ಇಟ್ಕೊಂಡು ರೂಮಿಗೆ ಹೋದರೆ ಮತ್ತೆ ಆಚೆ ಬರುತಿದ್ದಿದ್ದು ರಾತ್ರಿ ಊಟದ ಸಮಯಕ್ಕೆ , ಅಕಸ್ಮಾತ್ ಹೊರಗಡೆ ಹೋದರೆ ಯಾವ ರೋಡ್ ನಲ್ಲಿ ನಿಂತು ಮಾತಾಡ್ತಾ ಇದಾನೆ ಅನ್ನೋ ಅರಿವೇ ಇರ್ತ ಇರ್ಲಿಲ್ಲ ಆದ್ರೆ ಇವತ್ತು ಎಲ್ಲ ವಿಚಿತ್ರವಾಗಿದ್ಯಲ್ಲ ಅನ್ನೋದೇ ಅವರ ಯೋಚನೆ.
         ಊಟ ಮುಗಿದ ಮೇಲೆ ಪ್ರವೀಣ ತನ್ನ ಫ್ರೆಂಡ್ ಮಹೇಶನಿಗೆ ಫೋನ್ ಮಾಡ್ತಾನೆ ಎಲ್ಲಿದ್ಯಾ ಮಗ ಅಂತ ಮಾತಾಡ್ಕೊಂಡು ಅಲ್ಲೇ ಇರು ಬರ್ತೀನಿ ಅಂತ ಹೇಳಿ ಬೈಕ್ ಏರಿ ಅಪ್ಪ ರಾತ್ರಿ ಊಟದ ಟೈಮ್ ಗೆ ಬರ್ತೀನಿ ಅಂತ ಹೇಳಿ ಹೊರಟ. ಮಹೇಶನ ಮೀಟ್ ಮಡಿದ ಪ್ರವೀಣ ಹಾಗೆ ಅವರ ಫ್ರೆಂಡ್ಸ್ ಎಲ್ಲ ಮಾಮೂಲಾಗಿ ಕೂರುವ ಜಾಗಕ್ಕೆ ( ಅಡ್ಡ ) ಹೋಗಿ ಧಂ ಹೊಡಿತಾರೆ. ಅಲ್ಲಿ ಎಲ್ಲ ಫ್ರೆಂಡ್ಸ್ ಇವನ್ನ ನೋಡಿ ಏನ್ ಮಗ ಎಷ್ಟು ದಿನ ಅದಮೇಲೆ ನಿನ್ ದರ್ಶನ ಅಂತ ಕಿಚಾಯಿಸಿದ್ರು ಅದಕ್ಕೆ ಪ್ರವೀಣ ನಮ್ ಹುಡುಗರನ್ನ ಬಿಟ್ಟು ನ ಎಲ್ಲೋ ಹೋಗ್ಲಿ ಅಂತ ಅವರ ಜೊತೇನೆ ರಾತ್ರಿ ಸುಮಾರು 9 -30 ವರೆಗೂ ಇದ್ದು ಒಬ್ಬರನೊಬ್ಬರು ರೇಗಿಸ್ಕೊಂಡು  ಎಂಜಾಯ್ ಮಾಡ್ಕೊಂಡು ಮನೆಗೆ ಹೊರಟ. ಮನೆಗೆ ಬಂದ ಪ್ರವೀಣನ ನೋಡಿ ಅಪ್ಪ ಹೇಯ್ ಊಟ ಹಾಕೆ ಅಂದ್ರು ಪುಜ ತಟ್ಟೆ ಹಾಕಿದಳು ಮನೆಯವರೆಲ್ಲ ಒಟ್ಟಿಗೆ ಕೂತು ಮುಕ್ತ serial ನೋಡ್ತಾ ಊಟ ಮಾಡಿದರು ಅ ದಿನ ಪ್ರವೀಣನಿಗೆ    ಪ್ರತಿ ದಿನದಂತೆ ಇರಲಿಲ್ಲ, ಯಾಕೋ ಗೊತ್ತಿಲ್ಲ ತುಂಬಾ ಮಾತಾಡ್ತಾ ಇದ್ದ, ಎಲ್ಲರ ಜೊತೆ ತುಂಬಾ ನಗ್ತಾ ಇದ್ದ, ನಿರಾಳವಾಗಿ ಊಟ ಮಾಡಿದ, ಊಟ ಅದ ಮೇಲೆ ರೂಮಿಗೆ ಬಂದ ಪ್ರವೀಣನಿಗೆ ತಾನು 2 ವರ್ಷದಿಂದ ಯಾರದ್ದೋ ಗುಲಾಮನಾಗಿದ್ದೆ ಅನಿಸ್ತು ತನ್ನ ದಿನಚರಿ ನ ಬೇರೆಯವರು ಕಂಟ್ರೋಲ್ ಮಾಡ್ತಾ ಇದ್ರೂ ಅನ್ನೋ ವಿಷಯ ಫ್ಲಾಶ್ ಆಯಿತು. ಅದೇ ಗುಂಗಿನಲ್ಲಿ ಕಣ್ಣು ಮುಚ್ಚಿದ ಪ್ರವಿನನಿಗೆ ನಿರಾಳವಾದ ನಿದ್ದೆ ಬಂತು ಅ ನಿದಿರೆಲಿ ತನ್ನ ಎರಡು ವರ್ಷ ಹಿಂದಿನ ಜೇವನ ಕಣ್ಣಿಗೆ ಕಟ್ಟಿತ್ತು.

                                                     " ಎರಡು ವರೆ ವರ್ಷದ ಹಿಂದೆ "

                                                                                              ಮುಂದುವರೆಯುವುದು :-