Saturday, July 30, 2011

ಅಲಾಲ್ ಟಪಾಲ್

             ನಮ್ಮಪ್ಪ ನನ್ನ ಹಾಗೆ ಕರೆಯೋದ್ರಲ್ಲು ಒಂದು ಅರ್ಥ ಇತ್ತು ಕಾರಣ ಇತ್ತು. ಏಳುತ್ತಾ ಇದ್ದದ್ದು ೯ ಘಂಟೆ ಎದ್ದು ಹಲ್ಲು ತಿಕ್ಕೋ ಅಷ್ಟರಲ್ಲಿ ಅಮ್ಮ ಕಾಫೀ ಕೊಡುತಿದ್ದರು, ನಂತರ ಸ್ನಾನ ಮುಗಿಸಿ ತಿಂಡಿ. ಅಷ್ಟರಲ್ಲಿ ೧೧ ಘಂಟೆ ಆಗಿರೋದು. ಇನ್ನು ಆಗ ಕಂಪ್ಯೂಟರ್ ಮುಂದೆ facebook orkut ಅ ಸಂಘ ಈ ಕೂಟ ಇನ್ಯಾವುದೋ ಬಳಗ ಅಂತ ಚಾಟಿಂಗ್ ಮಾಡುತ್ತಾ ಕೂತರೆ ಮಧ್ಯಾಹ್ನ ೨ ಘಂಟೆ ಆಗುವುದೇ ಗೊತ್ತಾಗುವುದಿಲ್ಲ. ಅಷ್ಟರಲ್ಲಿ ದೇವಸ್ಥಾನಕ್ಕೆ ಹೋಗಿದ್ದ ಅಪ್ಪ ಮನೆಗೆ ಬರುತ್ತಾರೆ. ಊಟ ಮಾಡಲು ಎಲ್ಲರು ಕೂತು ಊಟ ಮುಗಿಸಿ ನಂತರ ಮತ್ತೆ online ಹೋದರೆ ಮತ್ತೆ ಸಮಯದ ಅರಿವೇ ಇರುವುದಿಲ್ಲ. ಸಂಜೆ ೬ ಘಂಟೆ ಹೊತ್ತಿಗೆ ಹಸು ಮನೆಯಲ್ಲಿನ ಸಗಣಿ ಕಸ clean ಮಾಡಿ ಮತ್ತೆ ಒಂದು ರೌಂಡ್ ಕಾಫೀ ಕುಡಿದು ಹೊರಟರೆ ಮತ್ತೆ ಮನೆ ಸೇರುತಿದ್ದಿದ್ದು 10 ಘಂಟೆಗೆ. ಸ್ನೇಹಿತರ ಜೊತೆ ಅಡ್ಡ, ಕಾಡು ಹರಟೆ, ಮನೆಗೆ ಬಂದೊಡನೆ ಊಟ ಮಾಡಿ ಮತ್ತೆ online 12 ರ ತನಕ ಚಾಟಿಂಗ್ ನಂತರ ನಿದ್ದೆ. ಈ ರೀತಿಯ ದಿನಚರಿ ಇರುವ ಯಾವ ಮಗನನ್ನಾದರೂ ಅಲಾಲ್ ಟಪಾಲ್ ಅನ್ನದೆ ಮುದ್ದು ಮಾಡೋದಕ್ಕ ಸಾಧ್ಯ?? 

            ಹೌದು ನಾನು ಅಲಾಲ್ ಟಪಾಲೇ, ಅಲೆದು ಅಲೆದು ನಂತರ ಅದರ ಗುರಿಯನ್ನು ಸೇರುವ ಟಪಾಲಿನ ಮೇಲೆ ಒಂದು ವಿಳಾಸ ಇರುತ್ತದೆ. ಹಾಗೆ ನನ್ನ ಈ ಬದುಕಿನ ವಿಳಾಸ ನಾನೆ ಬರೆದುಕೊಂಡಿರುವಂತೆ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಬೇಕೆಂದು. ಆದರೆ ವಿಧಿ ಅದನ್ನು ಸರ್ಟಿಫಿಕೇಟ್ ಗಷ್ಟೇ ಸೀಮಿತಗೊಳಿಸಿದೆ. campus ಇಂಟರ್ವ್ಯೂ ಗೆ ಬಂದ ಕಂಪನಿಗಳೆಲ್ಲ software ಗಳೆ, ನಾನು ಅದ್ರಲ್ಲಿ ಸೆಲೆಕ್ಟ್ ಆಗೋವಷ್ಟು ಬುದ್ಧಿವಂತ ಆಗಿರಲಿಲ್ಲ ಅನ್ಸುತ್ತೆ. ಯಾವ ಕಂಪನಿಯವರು ನನ್ನ ಸೆಲೆಕ್ಟ್ ಮಾಡಿಲ್ಲ. ಆದರು ಕಡೆಯ ಸೆಮಿಸ್ಟರ್ ರಿಸಲ್ಟ್ ಬರುವ ತನಕ ಏನೋ ಒಂದು ರೀತಿ ಮೊಂಡು ಧೈರ್ಯ, ನನಗೆ ಕೆಲಸ ಸಿಕ್ಕೆ ಸಿಗುತ್ತೆ, fisrt ಕ್ಲಾಸ್ ಮಾರ್ಕ್ಸ್ ಇದೆ, ಒಳ್ಳೆ communication ಇದೆ, contacts ಇದೆ, ಸಬ್ಜೆಕ್ಟ್ ಬಗ್ಗೆ ಸಹ ಸುಮಾರಾದ knowledge ಇದೆ, ಹೀಗೆಲ್ಲ ನಂಗೆ ನಾನೆ ಅಂದುಕೊಂಡು ಬಿಟ್ಟಿದ್ದೆ.. ಆದರೆ result ಬಂದು ನನ್ನ ಸ್ನೇಹಿತ ರೆಫರ್ ಮಾಡಿ attend ಮಾಡಿದ ಮೊದಲ ಇಂಟರ್ವ್ಯೂ ಅಲ್ಲೇ ನನ್ನ ಮೊಂಡು ಧೈರ್ಯವೆಲ್ಲ ಮಣ್ಣು ಪಾಲಾಯಿತು...

           ಮೊದಲು  aptitude ಮತ್ತು technical ರೌಂಡ್ ಪಾಸು ಆದೆ. ನಂತರ ಪಿಯುಶ್ ಎಂಬ ವ್ಯಕ್ತಿ ಇಂಟರ್ವ್ಯೂ ಮಾಡಿದ. ಸುಮಾರು 50 ನಿಮಿಷ GSM ಮತ್ತು microcontroller ಮತ್ತು microprocessor ಇವುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ. ನಾನು ನನಗೆ ಗೊತ್ತಿದ್ದಷ್ಟು ಉತ್ತರ ನೀಡಿದೆ. ಆತ ಮುಂದಿನ ರೌಂಡ್ ಗೆ ನನ್ನ ಸೆಲೆಕ್ಟ್ ಮಾಡಿದ. ಮುಂದಿನ ರೌಂಡ್ ಅಲ್ಲಿ ತಮಿಳಿಗ ಇಂಟರ್ವ್ಯೂ ಮಾಡಿದ. ಇಂಟರ್ವ್ಯೂ ಮಾಡುತಿದ್ದವನ ಕಡೆಯಿಂದ ಮಿಂಚಿನಂತೆ ಒಂದರ ಹಿಂದೆ ಒಂದು ಪ್ರಶ್ನೆ ಹರಿದುಬಂತು, ನಿಮಗೆ ಜಾವ ಗೊತ್ತ?? ಲಿನಿಕ್ಷ್ ಗೊತ್ತ ? C ++ ಗೊತ್ತಾ? ಆಗ ಒಂದು ಕ್ಷಣ ನಾ ಓದಿದ್ದು ಎಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್ ಎಂಬುದರ ಬಗ್ಗೆ ಸಂದೇಹ ನನಗೇ ಮೂಡಿಬಂತು. ನಾ ಸ್ವಲ್ಪ ತಡವರಿಸಿ ಸರ್ ನಾನು ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಮ್ಯುನಿಕೇಶನ್ ಹುಡುಗ, ನನಗೇ ಇದರ ಬಗ್ಗೆ ಅಷ್ಟಾಗಿ ಅರಿವಿಲ್ಲ ಆದರೆ ಆದಷ್ಟು ಬೇಗ ಕಲಿತುಬಿಡುತ್ತಿನಿ. ಒಂದೇ ಒಂದು ಅವಕಾಶ ಕೊಡಿ ಸರ್ ಅಂದೆ, ಒಂದು ರೀತಿಯ ಮಾರ್ಮಿಕವಾದ ನಗು ನೀಡಿದ ಅತ ಹೊರಗಡೆ ಕಾಯಲು ಸೂಚಿಸಿದ, ಸ್ವಲ್ಪ ಸಮಯದ ನಂತರ ಇನ್ನೊಬ್ಬಾತ ಬಂದು ನನ್ನ ಹೆಸರನ್ನ ಕರೆದ, ನನಗ್ಯಾಕೋ ಪಾಸು ಆಗ್ತೀನಿ ಅನ್ನೋ ನಂಬಿಕೆ ಇರಲಿಲ್ಲ, ಯಾಕಂದ್ರೆ ಕರುಣೆಗೆ ಕೆಲಸ ಕೊಡುವುದಕ್ಕೆ ಕಂಪನಿ ನನ್ನ ಇಂಟರ್ವ್ಯೂ ಮಾಡಿದವನ ಮಾವನದ್ದಲ್ಲ, ಆದರು ನೋಡುವ ಅಂತ ನನ್ನ ದೃಷ್ಟಿಯನ್ನ ಅವನೆದೆ ತಿರುಗಿಸಿ ಕೈ ಎತ್ತಿ ನಾನೆ ನೀವು ಕರೆದ ವ್ಯಕ್ತಿ ಅನ್ನೋ ಸೂಚನೆಯನ್ನು ಮಾಡಿದೆ, ಅದಕ್ಕವನು ಸ್ವಲ್ಪವು ಮುಜುಗರ ಬೇಜಾರು ಇಲ್ಲದೆ u can leave for ದಿ ಡೇ ಅಂದ. ಇಷ್ಟಕ್ಕೂ ಅವನಿಗೆ ಬೇಜಾರಾಗುವ ಪ್ರಸಂಗವಾದರು ಏನಿದೆ ಅಲ್ಲಿ ಕೆಲಸ ಬೇಕಾಗಿದ್ದುದು ನನಗೇ, ಸಿಗದಿದ್ದರೆ ನನಗೇ ತಾನೆ ಬೇಜಾರು.

       ಪೆಚ್ಚು ಮೊರೆ ಹಾಕಿಕೊಂಡು ಮನೆಗೆ ಬಂದೆ. ನಮ್ಮನೆಯಲ್ಲಿ ಇಂಟರ್ವ್ಯೂ ಗೆ ಹೋದರೆ ಕೆಲಸವೇ ಸಿಕ್ಕಿ ಬಿಟ್ಟಷ್ಟು
ಸಂತೋಷದಲ್ಲಿದ್ದರು. ಮನೆ ಒಳಗೆ ಕಾಲಿಡುತಿದ್ದಂತೆ ಏನಯ್ಯ ಏನಾಯ್ತು ಹೊಗಿದ್ ಕೆಲಸ ಅಂತ ಅಪ್ಪನ ಪ್ರಶ್ನೆ, ಇಲ್ಲಪ್ಪ ಸೆಲೆಕ್ಟ್ ಆಗಿಲ್ಲ ಅವರಿಗೆ ಜಾವ linix  ಎಲ್ಲ ಗೊತ್ತಿರೋ engineers ಬೇಕಂತೆ ಅಂದೆ. ಅಪ್ಪ ನೀನು ಇಂಜಿನಿಯರ್ ಅಲ್ವಾ ನಿನಗ ಬರಲ್ವ ಅಂದ್ರು ಪಾಪ ಅಮಾಯಕತೆಯಿಂದ. ಇಲ್ಲಪ್ಪ ಅದು ಕಂಪ್ಯೂಟರ್ ಓದಿರೋ ಅವರು ಓದೋ ಸಬ್ಜೆಕ್ಟ್ ನನಗೇ ಅದರ ಅನುಭವ ಇಲ್ಲ, ಕೋರ್ಸ್ ಗೆ ಸೇರಿ ಕಲಿಬೇಕು ಅಂದೆ. ಇಷ್ಟು ವರ್ಷ ಓದಿದ ಮಗ ಇನ್ನು ಸ್ವಲ್ಪ ದಿನ ಮನೆಯಲ್ಲೇ ಇರ್ತಾನೆ ಕೆಲಸಕ್ಕೆ ಹೋಗದೆ ಅಂತ ನನ್ನಪ್ಪನಿಗೆ ಖಾತ್ರಿ ಆಯಿತು. ಮನಸಲ್ಲಿ ಸ್ವಲ್ಪ ಬೇಜಾರು ಆಗಿರಬಹುದು ಅದ್ರು ಅದನ್ನ ತೋರ್ಪಡಿಸದೆ ಇರಲಿ ಮುಂದಿನ ಬರಿ ಪ್ರಯತ್ನ ಮಾಡು ಸಿಗುತ್ತೆ ಅಂದ್ರು. ಆಗ ನನಗೇ ನಾನೆ ಸ್ವಲ್ಪ ಸಮಾಧಾನ ಮಾಡ್ಕೊಂಡು ಚಿಂತೆಯ ಮರವನ್ನು ಹತ್ತುತ್ತಾ ಹೋದೆ ಬಹಳಷ್ಟು ಜಾಳು ಜಾಳದ ಪ್ರಶ್ನೆಗಳು ನನ್ನ ಕಾಡ ತೊಡಗಿದವು

        ಅಪ್ಪನ ಕೈಲಿ ದುಡ್ಡು ಖರ್ಚು ಮಾಡಿಸಿದ್ದು ಸಾಕು ಇನ್ನು ಕೋರ್ಸ್ ಅಂತ ಎಲ್ಲ ಹಣ ತೆಗೆದುಕೊಳ್ಳುವುದು ಬೇಡ ಅನ್ನೋ ನನ್ನ ಮನಸ್ಸು ನಿಜವಾಗಲು ಅಲಾಲ್  ಟಪಾಲೇ.....??

        CET ಅಲ್ಲಿ ಒಳ್ಳೆ ರಾಂಕಿಂಗ್ ಅಲ್ಲದಿದ್ದರೂ ಸುಮಾರಾದ ರಾಂಕಿಂಗ್ ಬಂದರೂ ಜನರಲ್ ಮೆರಿಟ್  ಗೆ ಸೇರಿದಕ್ಕೆ reputed ಎನಿಸಿಕೊಳೋ ಕಾಲೇಜ್ ನಲ್ಲಿ ಸೀಟ್ ಗಿಟ್ಟಿಸಿಕೊಳ್ಳಲು ಸಾಧ್ಯವಾಗದ ನಾನು ಅಲಾಲ್ ಟಪಾಲೇ.......?? 

         ಎಲೆಕ್ಟ್ರಾನಿಕ್ಸ್ ನ ಕಂಪನಿಗಳಿಗೆಲ್ಲ ಅನುಭವ ಇರುವವರೇ ಬೇಕಂತೆ ಇಲ್ಲವಾದಲ್ಲಿ ಯಾವುದಾದರು ಟ್ರೇನಿಂಗ ಇನ್ಸ್ಟಿಟ್ಯೂಟ್ ಇಂದ  ಅಥವಾ reputed ಕಾಲೇಜ್ ಗಳಿಂದ ಕ್ಯಾಮ್ಪುಸ್ inteview ಮಾಡಿ ತೊಗೋತಾರಂತೆ. ಆದ್ರೆ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಿಕಾಲ್ ಮೆಕ್ಯಾನಿಕಲ್ ವಿಭಾಗದಲ್ಲಿ ಇ ಸಮಸ್ಯೆ ಇಲ್ಲ, ನಾ ಎಲೆಕ್ಟ್ರಾನಿಕ್ಸ್ ತೊಗೊಂಡು ಅಲಾಲ್ ಟಪಾಲಾದೇನೆ???

          ಮತ್ತೆ ಯಾವ ಕೆಲಸದ ಮಾಹಿತಿ ಇರೋ website ನೋಡಿದರು ಸಾಫ್ಟ್ವೇರ್ ಇಂಜಿನಿಯರ್ ಬೇಕು ಎಂಬ ಆಡ್ ಇರತ್ತೆ ಆದರೆ ನಮಗೆ ಆ ಅವಕಾಶವಿಲ್ಲ ಅವಕಾಶಗಳ ಕೊರತೆ. ಅವಕಾಶಗಳನ್ನ ಹುಡುಕುತ್ತಿರುವ ನಾನು ಅಲಾಲ್ ಟಪಾಲೇ......??

          ಸಧ್ಯ ಈಗ ಯಾವುದೊ ಖಾಸಗಿ ಕಂಪ್ಯೂಟರ್ ಕೇಂದ್ರದಲ್ಲಿ java C C ++ unix ಮತ್ತು linux  ಕಲಿಯಲು ಸೇರಿದ್ದೀನಿ ನೋಡೋಣ ನಮ್ಮ ದಿಕ್ಕು ಹೇಗೇಗೆ ಬದಲಾಗುತ್ತೋ..........................!!!!!  

                          * ಈ ಅಲಾಲ್ ಟಪಾಲ್ ಗೆ ಒಂದು ಕಂಪನಿ ಅಡ್ರೆಸ್ ಸಿಗುತ್ತಾ ನೋಡೋಣ *

Saturday, July 23, 2011

ಆಹಾ ಎಷ್ಟು ಮಜವಾಗಿತ್ತು ಆ ಕಾಲಾ.......!!!!





       ನಮ್ಮ ತಾತಂದಿರು ಹಳೆ ಕಾಲದ ಕಥೆಗಳನ್ನು ಹೇಳುವಾಗ ಮೊದಲು ಸ್ವಲ್ಪ ಸಮಾಧಾನದಿಂದ ಕೇಳ್ತೇವೆ ಬರು ಬರುತ್ತಾ ಅವರು ಅದೇ ಕಥೆಗಳನ್ನು ಮತ್ತೆ ಮತ್ತೆ ಹೇಳುತ್ತಾರೆ ನಮಗೂ ಬೋರ್ ಅನಿಸಿ ತಾತಾ ಎಷ್ಟು ಸಲಿ ಅದೇ ಕಥೆಗಳನ್ನ ಹೇಳ್ತಿರ ಅಂತ ಗೊಣಗಿಕೊಂಡು ಎದ್ದು ಹೋಗ್ತಿವಿ. ಇಂಥ ಅನುಭವಗಳು ಸಾಮಾನ್ಯವಾಗಿ ಎಲ್ಲರಿಗು ಆಗ್ತವೆ. ನನಗು ಹಾಗೇ ನಮ್ಮ ತಾತ ಕಥೆಗಳನ್ನ ಹೇಳ್ತಾ ಇದ್ರೂ ಅವರು ತಮ್ಮ ಬ್ರಿಟಿಶ್ ಮೇಷ್ಟ್ರಿಗೆ ಚಳ್ಳೆ ಹಣ್ಣು ತಿನ್ನಿಸಿ ಚಕ್ಕರ್ ಹಾಕಿದ್ದು, ಆಗಿನ ಕಾಲಕ್ಕೆ ಲೋಯರ್ ಸೆಕೆಂಡರಿ ಮುಗಿಸಿ ಕುಟುಂಬದಲ್ಲಿ ಹೆಸರು ಮಾಡಿದ್ದೂ, ಊರಿಗೆ ಮೊದಲನೇ ಎಲೆಕ್ಟ್ರಿಕ್ contractor ಆಗಿದ್ದು, ಊರಿನ ಪ್ರೆಸಿಡೆಂಟ್ ಆಗಿದ್ದು, ಆಗಿನ ಜನ ಹಾಗೆ ಹೀಗೆ ಹುಹ್ ಇನ್ನು ಬಹಳಾ. ಆದರೆ ನಾವು ಅವರು ಕಥೆ ಹೇಳುವಾಗ ಮುಗು ಮುರಿದು ಹೋಗುತಿದ್ದೆವಲ್ಲ, ನಮಗೆಲ್ಲಿ ಅರಿವಿತ್ತು ಆಗಿನ ಅ ಕಾಲದ ಬಗ್ಗೆ ಎಷ್ಟು ಹೇಳಿದರು ಮತ್ತೆ ಮತ್ತೆ ನಮ್ಮ ತಾತನವರಿಗೆ ಹೇಳಬೇಕು ಎನಿಸಿತ್ತು ಎಂದು. ಯಾಕಂದರೆ ಅ ಕಾಲವೇ ಹಾಗಿತ್ತು ಎಷ್ಟು ಅದರ ಬಗ್ಗೆ ಕೊಂಡಾಡಿದರು ಸಾಲದಂಥ ಕಾಲ. ನನಗೆ ಯಾಕೆ ಹೀಗನಿಸಿತ್ತು ಅಂದರೆ ನನಗೂ ಸಹ ಕಳೆದ ಹತ್ತು ವರ್ಷಕ್ಕೂ ಇಗ್ಗು ಬಹಳ ವ್ಯತ್ಯಾಸ ಕಾಣುತ್ತಿದೆ. ನನಗೆ ಇತ್ತೀಚಿಗಷ್ಟೇ ಇದರ ಅರಿವಾಯಿತು.

           ರಾಗಿ ಬೆಳೆ ಬಲೆ ಚೆನ್ನಾಗೈತೆ ಸ್ವಾಮಿ, ಈ ಸಲ ಒಳ್ಳೆ ಬಂಪರ್ ಕಾಸ್ ಮಾಡ್ತ್ಯ ಅಂತ ಚಿಕ್ಕಣ್ಣ ಹೇಳಿದಾಗ ನಮ್ಮಪ್ಪನಿಗೆ ಒಂಥರಾ ಸಂತೋಷ. ಅಂತು ಟೈಮ್ ಗೆ ಸರ್ಯಾಗಿ ಉಳಿಸಿ, ಬಿತ್ತನೆ ಮಾಡಿಸಿ, ಗೊಬ್ಬರ ಚೆಲ್ಲಿ, ಕಳೆ ಒರೆದು, ಗುಂಟುವೆ ಹಾಕಿಸಿ, ಇರೋ ಮುಕ್ಕಾಲು ಎಕರೆಗೆ 10 ಸಾವಿರ ಖರ್ಚ ಮಾಡಿದ್ದಕ್ಕೆ ಇಷ್ಟ ಮಾತ್ರ ಬೆಳೆ ಆಗಿರೋದು ಚಿಕ್ಕಣ್ಣ ಅಂತ ಸ್ವಲ್ಪ ಬಿಂಕದಿಂದನೆ ಅಂದ್ರು. ಅಂಗಲ್ಲ ಸ್ವಾಮಿ ರೇಟ್ ಚೆನ್ನಾಗೈತೆ ಈಗ ಕೆಂಪು ರಾಗಿ 13 ರೂಪಾಯಿಗೆ ತೊಕೊತಾರೆ ಅಂತ ಚಿಕ್ಕಣ್ಣ ಹೇಳೋವಾಗ ಮಧ್ಯಕ್ಕೆ ಬಾಯಿ ಹಾಕಿ ನಮ್ಮಪ್ಪ ನಂದೊಂದು ೧೫ ಮೂಟೆ ಆಗ್ತದಲ್ಲ ಚಿಕ್ಕಣ್ಣ ಅಂದ್ರು ಸ್ವಲ್ಪ ಹೊತ್ತು ಯೋಚನೆ ಮಾಡಿ ಇನ್ನ ಒಂದು ಹೆಚ್ಚೇ ಆಗ್ತದೆ ಸ್ವಾಮಿ ಅಂದ ಚಿಕ್ಕಣ್ಣ. ನಮ್ಮಪ್ಪ ಸರಿ ಹಾಗಾದ್ರೆ ನಲೇನೆ ಕೂಲಿಯವರನ್ನ ಕರೆಸಿಬಿಡು ಕುಯ್ಯಿಸಿಬಿಡನ ಅಂದ್ರು.ಹಗೆ ಮುಂದುವರೆಸಿ ಕೂಲಿ ಏನ್ ಓದ್ತಾ ಇದೆ ಅಂದ್ರು ಚಿಕ್ಕಣ್ಣ ಗಂಡಿಗೆ ೨೫೦ ಹೆಣ್ಣಿಗೆ ೨೨೦ ಅಂದ ಅಷ್ಟೋಂದ ಅಂದ್ರು ನಮಪ್ಪ ಆಶ್ಚರ್ಯದಿಂದ, ಅದಕ್ಕೆ ಚಿಕ್ಕಣ್ಣ ಇಷ್ಟಕ್ ಸಿಗೋದು ನಮ್ ಕೂಲಿಯವರು ಮಾತ್ರ ಸ್ವಾಮಿ ಅಂದ. ನಮಪ್ಪನು ಸರಿ ಹಾಗೆ ಮಾಡಪ್ಪ ಅಂದ್ರು. ಚಿಕ್ಕಣ್ಣ ಸರಿ ಸ್ವಾಮಿ, ಸ್ವಲ್ಪ ಎಲೆ ಅಡಿಕೆ ತರಕ ಏಳಿ ಅಮ್ಮಣ್ಣಿ ಯವರಿಗೆ ಅನ್ನೋ ಅಷ್ಟರಲ್ಲಿ ನಮ್ಮಮ್ಮ ಒಂದಷ್ಟು ವಿಲ್ಯದೆಲೆ ಅಡಿಕೆ ತಂದು ಕೈಗಿಟ್ರು. ಸರಿ ನಾಳೆಗೆ ಕುಲಿಯವ್ರನ್ನ ನೋಡ್ಬೇಕು ಬರ್ತೀನಿ ಸ್ವಾಮಿ ಅಂತ ಹೇಳಿ ಚಿಕ್ಕಣ್ಣ ಹೊರಟ.

          ರಾಗಿ ತೆನೆ ಬಲಿತಿತ್ತು. ಒಂದೊಂದು ತೆನೆಯು ಹಿಡಿದರೆ ಕೈ ತುಂಬಾ ಸಿಗುವಷ್ಟು ದಪ್ಪ, ನೋಡುತಿದ್ದರೆ ನಮ್ಮ ದೃಷ್ಟಿಯೇ ತಗುಲ ಬಹುದೆಂದು ಮಧ್ಯೆ ಒಂದು ದೃಷ್ಟಿ ಬೊಂಬೆ ಕಟ್ಟಿದ್ದರು ನಮ್ಮಪ್ಪ.ನನ್ನ ಕರೆದು ಮಾರನೆಯ ದಿನ ಚಿಕ್ಕಣ್ಣ ಒಂದು ೧೦ ಜನ ಕುಲಿಯವರನ್ನ ಕರೆದು ಕೊಂದು ಬರ್ತಾನೆ ಕುಲಿಯವರಿಗೆ ರಾಘವೇಂದ್ರ ಭವನ್ ಅಲ್ಲಿ ಚಿತ್ರಾನ್ನ ಮಾಡಿಸಿಬಿಡು ಅಂದ್ರು, ನಮಮ್ಮನಿಗೆ ಕುಲಿಯವರಿಗೆ ಎಲೆ ಅಡಿಕೆ ತೆಗೆದಿಡು ಅಂತ ಹೇಳಿದ್ರು. ನ ಹೋಗಿ ರಾಘವೇಂದ್ರ ಭವನ್ ಅಲ್ಲಿ ಚಿತ್ರಾನ್ನಕ್ಕೆ ಆರ್ಡರ್ ಕೊಟ್ಟು ಬರುವಷ್ಟರಲ್ಲಿ ನಮ್ಮ ಅಪ್ಪ ಹೊಲದ ಮಧ್ಯ ನಿಂತು ನಾಳೆ ಇದೆಲ್ಲ ಕೂಲಿಯವರು ಕುಯ್ದು ಕಟ್ಟು ಕಟ್ಟುತಾರೋ ಅಂದ್ರು ಒಹ್ ಹೌದ ಸರಿ ಅಪ್ಪ ಅಂತ ನಾನು ತಲೆ ಆಡಿಸಿದೆ 

         ಮಾರನೆಯ ದಿನ ಬೆಳಿಗ್ಗೆ 9 ಆಯಿತು ಕೂಲಿಯವರು ಬಂದಿಲ್ಲ 9 -30 ಆಯಿತು ಬಂದಿಲ್ಲ ನಮಪ್ಪನಿಗೆ ಯಾಕೋ ಏನೋ ಎಡವಟ್ಟು ಆಗಿದೆ ಅಂತ ಅನ್ನಿಸ್ತು ನನ್ನ ಕರೆದು ಹೋಗಿ ಚಿಕ್ಕಣ್ಣನ ಮನೆಗೆ ಹೋಗಿ ನೋಡ್ಕೊಂಡು ಬಾರೋ ಅಂದ್ರು. ನಾ ಸರಿ ಹೊರಡ್ತೀನಿ ಅನ್ನೋ ಅಷ್ಟರಲ್ಲಿ 10 ಆಗಿತ್ತು ಅಷ್ಟರಲ್ಲಿ ಚಿಕ್ಕಣ್ಣ ಸಹ ಒಂದು ತಂಡ ಕಟ್ಕೊಂಡು ಹೊಲದೊಳಗೆ ಕಾಲಿಟ್ಟ. ಒಟ್ಟು ಹತ್ತು ಜನ ೬ ಹೆಂಗಸರು ೪ ಗಂಡಸರು. ನಮಪ್ಪ ಸ್ವಲ್ಪ ಕೋಪದಿಂದ ಏನ್ ಚಿಕ್ಕಣ್ಣ ಇದು ಬಾರೋ ಟೈಮ್ ಅ ಅಂದ್ರು ಅದಕ್ಕೆ ಆಟ ಸ್ವಾಮಿ ಈಗೆಲ್ಲ ಇಷ್ಟೇ ಸ್ವಾಮಿ ಕೆಲಸಕ್ಕೆ ಹಿಡಿಯೋದೇ ೧೦ ಘಂಟೆಗೆ ಹಳೆ ಕಾಲದ ತರ ೯ ಕ್ಕೆ ಯಾರು ಬರಲ್ಲ ಅಂದ ನಮಪ್ಪಂಗೆ ಸ್ವಲ್ಪ ಕೋಪ ಬಂದ್ರು ಸರಿ ಶುರು ಮಾಡ್ರಿ ಅಂದ್ರು.ಅಪ್ಪನಿಗೆ ಜರೂರು ಕೆಲಸ ಇದ್ದರಿಂದ ನನ್ನ ನೋಡ್ಕೊಳಕ್ಕೆ ಹೇಳಿ ಹೊರಟರು 

          ಕೆಲಸಕ್ಕೆ ಕೂತವರು ನಾನು ಅಲ್ಲೇ ಇದ್ದದನ್ನ ನೋಡಿ ಹೋಗಿ ಅಮ್ಮನಿಗೆ ಕಾಪಿ ಮಾಡಕ್ಕೆ ಹೇಳಪ್ಪಿ ಅಂದ್ರು. ಸರಿ ಅಂತ ಹೇಳಿ  ಕಾಫೀ ಮಾಡಿಸಿಕೊಂಡು ಹೋಗೋ ಅಷ್ಟರಲ್ಲಿ ಕೂತು ಹರಟೆ ಹೊಡೆಯುತಿದ್ದರು. ನಾ ಹೋದೊಡನೆ ಕಾಫೀ ಕುಡಿದು ಮತ್ತೆ ಕೆಲಸ ಹಿಡಿದರು ಆಗ ಸುಮಾರು ೧೧ ಆಗಿರಬಹುದು ಹೋಗಪ್ಪ ಎಲೆ ಅಡಿಕೆ ತೆಗೆದುಕೊಂಡು ಬಾ ಅಂದ್ರು ಮತ್ತೆ ಮನೆಗೆ ಬಂದು ಎಲೆ ಅಡಿಕೆ ತೆಗೆದುಕೊಂಡು ಹೋಗುವಷ್ಟರಲ್ಲಿ ಕೂತು ಹರಟೆ ಹೊಡೆಯುತಿದ್ದರು. ನಾ ಬಂದಿದ್ದು ನೋಡಿದವರೇ ಕೆಲಸ ಮಾಡುತಿದ್ದಂತೆ ನಟಿಸಿ ಎಲೆ ಅಡಿಕೆ ತೆಗೆದುಕೊಂಡರು. ಮಧ್ಯಾಹ್ನ 12 -45 ಆಯಿತು, ಉಟ ರೆಡಿ ಆಗೈತ ಅಂತ ಚಿಕ್ಕಣ್ಣ ಕೇಳ್ದ. ಗಾಡಿಲಿ ಒಬ್ಬ ಕೂಲಿಯವ್ನ ಕೂಡಿಸ್ಕೊಂದು ರಾಘವೇಂದ್ರ ಭವನ್ ಅಲ್ಲಿ ಆರ್ಡರ್ ಕೊಟ್ಟಿದ್ದ ಚಿತ್ರಾನ್ನ ತಂದೆ. ಎಲ್ಲರು ಚೆನ್ನಾಗಿ ತಿಂದು ಮತ್ತೊಮ್ಮೆ ಎಲೆ ಅಡಿಕೆ ಜಿಗಿಯುತ್ತ ಹರಟೆ ಹೊಡೆಯುತ್ತಾ ಕೂತರು. ಸಮಯ 1 -30 ಆಯಿತು, ನಾನು ಏಳ್ರಿ ಕೆಲಸ ಹಿಡಿರಿ ಅಂದೆ, ಅದಕ್ಕೆ ಚಿಕ್ಕಣ್ಣ ಇರು ಸ್ವಾಮಿ 2 ಘಂಟೆ ಅಗಲಿ ನಮಗೇನು ವಿಶ್ರಾಂತಿ ಬೇಡ್ವ ಅಂದ. ನಾ ಏನೋ ಇವರನ್ನ ಹಿಂಸೆ ಮಾಡ್ತಾ ಇದ್ದಿನೇನೋ ಅನ್ನಿಸ್ಬಿಡ್ತು ನಂಗೆ ಉತ್ತರ ಏನು ಕೊಡಬೇಕು ಅಂತ ತೋಚದೆ ಸರಿ ಸರಿ ಅಂದೆ

          2 ಘಂಟೆಗೆ ಶುರು ಮಡಿದ ಕೂಲಿಯವರು 5 -15 ಕ್ಕೆ ಎಲ್ಲ ಹೊರಟರು. ಇನ್ನು ಎಲ್ಲ ಸಾಲುಗಳಲ್ಲೂ 15 ಅಡಿ ಅಷ್ಟು ಮಾತ್ರ ಕೆಲಸ ಉಳಿದಿತ್ತು. ನಾನು ಏನ್ ಚಿಕ್ಕಣ್ಣ ಇನ್ನ 5 -15 ಅಂದೆ. ಸ್ವಾಮಿ ಇನ್ನೇನು 7 ಘಂಟೆ ತನಕ ಕೆಲಸ ಮಾಡ್ತಾರ ಕೂಲಿ ಕೊಡ್ರಿ ಅಂದ ಏನು ಮಾಡಲು ತೋಚದೆ ಮಾತನಾಡಿದಂತೆ ಗಂಡಾಳಿಗೆ 250 ಹೆಂಗಸಿಗೆ 220 ರು ಕೊಟ್ಟೆ. ನಾಳೆ ಇರೋ ಬಾಕಿ ಕೆಲಸಕ್ಕೆ 4 ಅಳು ಬೇಕು ಅಂದ, ನಾನು ಬೇಡಪ್ಪ ಒಪ್ಪಂದ ಕೊಡ್ತೀನಿ ಒಟ್ಟಿಗೆ 600 ತೊಗೊಂಡು ಮಾಡ್ಬಿಡು ಅಂದೆ. ಸರಿ ಅಂತ ಮಾರನೆಯ ದಿನ ಬೆಳಿಗ್ಗೆ ಒಂಭತ್ತಕ್ಕೆ ಬಂದು 11 ಘಂಟೆ ಅಷ್ಟರಲ್ಲಿ ಕೆಲಸ ಮುಗಿಸಿ ದುಡ್ಡು ತೊಗೊಂಡು ಮಾರನೆಯ ದಿನ ಬಂದು ವಾಮೆ ಹಾಕಿ ಕೊಡುತ್ತೇನೆ ಅಂತ ಹೇಳಿ ಹೊರಟೇಬಿಟ್ಟ...  

           ಮಾರನೆಯ ದಿನ ಚಿಕ್ಕಣ್ಣ ಎಷ್ಟು ಹೊತ್ತಾದರೂ ಬರ್ಲಿಲ್ಲ. ಸಂಜೆ ಹೋದಾಗ ಬೇರೆ ಕಡೆ ಕೂಲಿ ಹೆಚ್ಚು ಕೊಡ್ತಾರೆ ಅಂತ ಲ್ಲಿ ಹೋಗಿದ್ದೆ ಅಂದ. ಸರಿ ನಾಳೆ ಬಾರಪ್ಪ ಅಂದ್ರೆ ನಾಳೆ ಅಲ್ಲಿ ಕೆಲಸ ಬಾಕಿ ಇದೆ ಮುಗಿಸಿ ನಾಡಿದ್ದು ಬರ್ತೀನಿ ಅಂದ. ಒಣಗಿದಷ್ಟು ಒಳ್ಳೇದು ಎಂದು ನಾವು ಆಯಿತು ಅಂದೆವು. ಎರಡು ದಿನದ ನಂತರೆ ಬೆಳಗಿನ ಜಾವವೇ ಭಾರಿ ಮಳೆ ಶುರುವಾಯಿತು, ನಾನು ನಮಪ್ಪ ಒಂದೆರಡು ಸಾಲು ಕಟ್ಟುಗಳನ್ನ ಎತ್ತಿ ನೆನೆಯದ ಜಾಗಕ್ಕೆ ಹಾಕಿದೆವು. ಮಿಕ್ಕಿದ್ದು ಎತ್ತಲು ಸಾಧ್ಯವಾಗಲಿಲ್ಲ ಮಳೆ ಒಂದೇ ಸಮನೆ ಜಡಿ ಹಿಡಿದು ಮೂರೂ ದಿನ ಸುರಿಯಿತು.ಮಳೆಲಿ ತೆನೆ ಅಷ್ಟೊಂದು ನೆಂದ ಕಾರಣ ರಾಗಿ ಕಪ್ಪಾಯಿತು. ಬರಿ ೭ ಮೂಟೆ ಆಯಿತು. ಹುಲ್ಲು ಮುಗ್ಗಿ ಪುಡಿ ಪುಡಿ ಆಗಿತ್ತು. ಕಟ್ಟು ಕಟ್ಟಿಸಿ ತುಳಿಸಿ ತೂರಿಸಿ ಎಲ್ಲ ಮಾಡಲು ಖರ್ಚು ೫೦೦೦ ದಾಟಿತ್ತು.  ಒಟ್ಟು ಸೇರಿ ಸುಮಾರು ೧೫೦೦೦ ಖರ್ಚು ಆದರೆ ಲಾಭ ಮಾತ್ರ ಏನು ಇಲ್ಲ. ನಮ್ಮದು ಬರಿ ಮುಕ್ಕಾಲು ಎಕರೆ 5 ಎಕರೆ 10 ಎಕರೆ ಬೇಸಾಯ ಮಾಡುವವರ ಕಷ್ಟ ಹೇಗಿರಬಹುದು ಎಂದು ಯೋಚಿಸಿ, ಅದಕ್ಕೆ ರೈತ ಆತ್ಮ ಹತ್ಯೆ ಮಾಡಿಕೊಳ್ಳುವುದು ಎಂಬ ಅರಿವಾಯಿತು

         ೧೦ ವರ್ಷದ ಹಿಂದೆ ಹೀಗಿರಲಿಲ್ಲ ಕೆಲಸಕ್ಕೆ ೯ ಘಂಟೆಗೆ ಬರುತಿದ್ದರು. ಮೈ ಗಳ್ಳತನ ಮಾಡುತ್ತಿರಲಿಲ್ಲ, ಅತಿ ಅಸೆ ಪಡುತ್ತಿರಲಿಲ್ಲ, ಹಿಡಿದ ಕೆಲಸ ಮುಗಿಯುವವರೆಗೂ ಬೇರೆ ಕೆಲಸ ಒಪ್ಪಿಕೊಳ್ಳುತ್ತಿರಲಿಲ್ಲ. ಬೇಕೆಂದೇ ಇವತ್ತಿನ ಕೆಲಸ ನಾಳೆಗೆ ಮುಂದೂಡಿ ಹಣಕ್ಕಾಗಿ ಅಸೆ ಪಡುತ್ತಿರಲಿಲ್ಲ. ಆದರೆ ಈಗ ಎಲ್ಲವು ಅಯೋಮಯ ಆಗ ಕುಲಿಯವರಿಗೆ ನಾವು ಕೆಲಸ ಮಾಡಿ ಎಂದು ಹೇಳಲೇ ಬೇಕಾಗಿರಲಿಲ್ಲ. ತಮ್ಮ ಕೆಲಸ ತಾವು ಮುಗಿಸುತಿದ್ದರು, ಇಲ್ಲವಾದರೆ ತಿಂದ ಅಣ್ಣ ಮೈಗೆ ಹತ್ತಲ್ಲ ಸ್ವಾಮಿ ಅಂತಾಇದ್ರು. ಬರಿ ಹತ್ತು ವರ್ಷದ ಹಿಂದೆಯೇ ಅಷ್ಟು ನಿಯತ್ತು ಇದ್ದಿದ್ದರೆ ಇನ್ನು ನಮ್ಮ ತಾತ 70 ವರ್ಷದ ಹಿಂದಿನ ವಿಷಯದ ಬಗ್ಗೆ ಹೇಳುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಅಲ್ಲವೇ ಗೆಳೆಯರೇ.......!!