Wednesday, October 5, 2011

ಮರೆಯಲಾಗದ ಲಾಟರಿ ಟಿಕೆಟ್

ಕಾಲೇಜ್ ನ ಗೋಡೆಯ ಮೇಲೆ ಹೋಗೆ ಬಿಡುತ್ತಾ ನಾನು ಮತ್ತು ಬಾಸ್ ಬಂಡಾರಿ ಕುಳಿತಿದ್ದೆವು. ಸಿಗರೇಟನ್ನು ಘಾಡವಾಗಿ ಎಳೆದ ಭಂಡಾರಿ ಎಲ್ಲೋ ಶಿಷ್ಯ ಇನ್ನು ಸಿಂಹ ಬಂದೆ ಇಲ್ಲಾ ಅಂದ. ನಾನು ಒಮ್ಮೆ ಗಡಿಯಾರವನ್ನು ನೋಡಿ ಬಾಸ್ ಈಗ fly ಓವರ್ ಕಾಮಗಾರಿ ನಡೆಯುತ್ತಿದೆ ಅಲ್ವಾ ಟ್ರಾಫಿಕ್ ತುಂಬಾ ಇರತ್ತೆ ಅದಕ್ಕೆ ಲೇಟ್ ಆಗಿರಬೇಕು ಎಂದೆ. ಆಗ ಸಮಯ ಸುಮಾರು ೧೧ ಘಂಟೆ.  ನಾನು ದ್ವಿತೀಯ PUC ಡುಮ್ಕಿ ಹೊಡೆದು ನಮ್ಮ ಸರ್ಕಾರೀ ಕಾಲೇಜ್ ನ ಗೋಡೆಯ ಮೇಲೆ ಕೂತು ಗೆಳೆಯರ ಜೊತೆ ಹರಟೆ ಹೊಡೆಯುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದೆ. ಬಾಸ್ ನಮಗಿಂತ ಒಂದೆರಡು ವರುಷ ಹಿರಿಯರು. ಅವರು ಸಹ ಡಿಪ್ಲೋಮಾ ಇಯರ್ ಬ್ಯಾಕ್ ಆಗಿ ನಮ್ಮ ಜೊತೆಯಲ್ಲೇ ಅಡ್ಡ ಹೊಡೆಯುತಿದ್ದರು. ಬೆಳಿಗ್ಗೆ ತಿಂಡಿ ತಿಂದು ಮನೆಯಿಂದ ಹೊರಟರೆ ಊಟದ  ಸಮಯಕ್ಕೆ ಮತ್ತೆ ಮನೆ ಸೇರುತಿದ್ದಿದ್ದು, ಮತ್ತೆ ಸಂಜೆ ೪ ಕ್ಕೆ ಕ್ರಿಕೆಟ್ ಆಡಲು ಹೊರಟರೆ ಮನೆ ಸೇರುತಿದ್ದಿದ್ದು ರಾತ್ರಿ ೧೦ ಘಂಟೆಗೆ. ಇಂತಹ ನಮ್ಮ ದಿನಚರಿಯಲ್ಲಿ ಸಿಂಹ ಪ್ರತಿ ದಿನ ಸಿಂಹ ಒಂದು ಒಳ್ಳೆಯ ಕೆಲಸ ಮಾಡುತಿದ್ದ. ದ್ವಿತೀಯ PUC ಫೈಲ್ ಆದರು, ಮನೆಗೆ ಒಂದಷ್ಟು ಸಹಾಯವಗುತಿದ್ದ. ಅವನು ಮಾಡುತಿದ್ದ ಕೆಲಸ ನಮ್ಮೂರಿಂದ ಬೆಂಗಳೂರಿಗೆ ಹೋಗಿ ಲಾಟರಿ ಟಿಕೆಟ್ ಕೊಂಡು ತರುವುದು. ಇಷ್ಟಕ್ಕೂ ಸಿಂಹ ಎಂದರೆ ಇವನ ಧೈರ್ಯಕ್ಕೆ ಪ್ರತಾಪಕ್ಕೆ ಕೊಟ್ಟಿರುವ ಬಿರುದೇನಲ್ಲ ಬಿಡಿ. ಅ ವಯಸಿಗೆ ಅವನ ಕಿವಿಯ ಮೇಲೆ ಒಂದೆರಡು ರೋಮ ಹುಟ್ಟಿತ್ತು, ಅದನ್ನೇ ಆಗಾಗ ನಿವುತ್ತ ಸಿಂಹ ಸಿಂಹ ಹಹಹಹ ಎಂದು ವಿಚಿತ್ರವಾಗಿ ಘರ್ಜಿಸುತಿದ್ದ. ಅದಕ್ಕೆ ನಾವು ಆಯಿತು ಬಿಡಪ್ಪ ನೀನು ಸಿಂಹನೆ ಅಂತ ಹಾಗೆ  ಕರೆಯುತಿದ್ದೆವು. ಅವನ ನಿಜವಾದ ಹೆಸರು ಮಹೇಶ್, ಮಹೇಶ್ ಕುಮಾರ್ ಯಾದವ್  

ಪ್ರತಿ ದಿನ ಬೆಳಿಗ್ಗೆ ೭ ಘಂಟೆಗೆ ಬಸ್ ಹತ್ತುತಿದ್ದ, ೮ ಘಂಟೆಗೆ ಮೆಜೆಸ್ಟಿಕ್ ಸೇರಿ ಮೆಜೆಸ್ಟಿಕ್ ಚಿತ್ರ ಮಂದಿರದ ಪಕ್ಕದಲ್ಲಿರುವ ಲಾಟರಿ complex ನಿಂದ ಒಂದು ದೊಡ್ಡ ಕಿಟ್ ಬ್ಯಾಗ್ ತುಂಬ ಲಾಟರಿ ಟಿಕೆಟ್ ತುಂಬಿಕೊಂಡು, ಮತ್ತೆ ೧೧ ಘಂಟೆ ಅಷ್ಟರಲ್ಲಿ ನಮ್ಮೂರು ಸೇರುತಿದ್ದ. ಬಂದೊಡನೆ ನಮ್ಮ ಮಾಮೂಲಿ ಅಡ್ಡ ಅದ ಸರ್ಕಾರೀ ಕಾಲೇಜ್ ನ ಕಾಂಪೌಂಡ್ ಬಳಿಗೆ ಸಿಗರೇಟು ತರುತಿದ್ದ ನಮಗೂ ಅದರ ಒಂದೆರಡು ದಮ್ಮಿನ ಭಾಗ ಸಿಗುತಿತ್ತು. ಅದ್ಯಾಕೋ ಅವತ್ತೇ ಅವನು ಬಂದಿಲ್ಲ, ಸಮಯ ೧೧-೩೦ ಆಯಿತು ಆದರು ಸಿಂಹ ಬಂದಿಲ್ಲ. ನಾನು ಭಂಡಾರಿಗೆ ಬಾಸ್. ಇವತ್ತು ಸಿಂಹ ಬರಲ್ಲ ಅನ್ಸುತ್ತೆ ಬನ್ನಿ ಬಾಸ್ ಮನೆಗೆ ಹೋಗಣ ಅಂದೆ. ಅದಕ್ಕೆ ಭಂಡಾರಿ ಸರಿ ನಡಿ ಶಿಷ್ಯ ಅಂತ ಸೈಕಲ್ ನ carrier ಹತ್ತಿದರು. ನನ್ನ ಹಳೆಯ rally ಸೈಕಲ್ ನ ಎಷ್ಟು ತುಳಿದರು ಮುಂದಕ್ಕೆ ಸಾಗುತ್ತಿರಲಿಲ್ಲ, ಬಾಸ್ ತುಂಬಾ ಧಡೂತಿ ಎಂದು ಭಾವಿಸಬೇಡಿ ಅವರು ಹೆಸರಿಗಷ್ಟೇ ಬಾಸ್ ಇದ್ದದ್ದು ಬರೀ  40kg ಸೈಕಲ್ ಗೆ ಸರಿಯಾಗಿ ಸರ್ವಿಸ್ ಮಾಡಿಸಿರಲಿಲ್ಲ ಅಷ್ಟೇ....     

ಸಂಜೆ ೪ ಆಯಿತು ಎಲ್ಲರು ಕ್ರಿಕೆಟ್ ಆಡಲು ಮೈದಾನ ಸೇರಿದ್ದವು. ಆದರೆ ಸಿಂಹ ಅಲಿಯಾಸ್ ಮಹೇಶ ಇನ್ನು ಬಂದಿಲ್ಲ. ನಮ್ಮ ಗೆಳೆಯರಲ್ಲೆಲ್ಲ ಗುಸುಗುಸುಗಳು. ಯಾಕಂದ್ರೆ ಸಿಂಹ ಲಾಟರಿ ಟಿಕೆಟ್ ತರಲು ಬಹಳಷ್ಟು ಹಣವನ್ನು ಹೊತ್ತು ಹೋಗುತಿದ್ದ ಬರುವಾಗ ಲಕ್ಷಾಂತರ ಲಾಟರಿ ಟಿಕೆಟ್ ತರುತಿದ್ದ. ಯಾರ ಬಳಿಯಲ್ಲೂ ಮೊಬೈಲ್ ಫೋನ್ ಗಳು ಇರಲಿಲ್ಲ. ಅದೇನು ದುಡ್ಡು ಹೊಡೆದುಕೊಂಡು ಪರರಿಯಾದನೋ ಅಥವಾ ಯಾರಾದ್ರು ನಮ್ಮ ಹುಡುಗನ್ನ ಕೊಳ್ಳೆ ಹೊಡೆದರೋ. ಎಲ್ಲರಿಗು ಒಂದೊಂದು ರೀತಿಯ ಚಿಂತೆ. ಚಿಂತೆಯಲ್ಲೇ toss ಹಾರಿಸಿ ಕ್ರಿಕೆಟ್ ಆಟ ಶುರು ಮಾಡಿದೆವು. ಆಡುತ್ತಿರುವಾಗಲು  ಸಹ ನಮಗೆಲ್ಲ ಅವನದೇ ಚಿಂತೆ. ಆಟ ಮುಗಿಸಿ ವಿಕೆಟ್ ಮತ್ತು ಬ್ಯಾಟ್ ಬಾಲ್ ಎತ್ತಿಡಲು ಹೊರಡಬೇಕು ಅಷ್ಟರಲ್ಲಿ ಮೈದಾನದ ಒಂದು ಮೂಲೆಯಿಂದ ಮಹೇಶ ಒಳ ಬರುವುದನ್ನು ಗಮನಿಸಿದೆವು. ಇನ್ನೇನು ಬಳಿಬರಬೇಕು ಅಷ್ಟರಲ್ಲೇ ಎಲ್ಲರಿಂದಲೂ ಪ್ರಶ್ನೆಗಳ ಸರಮಾಲೆ. ಏನೋ ಮಗ ಯಾಕೋ ಬಂದಿಲ್ಲ ಎಲ್ ಹೋಗಿದ್ದೆ ಏನ್ ಸಮಾಚಾರ ಹೀಗೆ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರದಲ್ಲಿ ಸುಮ್ಮನಾಗಿಸಿದ್ದ ಅದು ಏನು ಅಂದರೆ ಮಗ ಉಪ್ಪಾರ್ ಪೇಟೆ ಪೋಲಿಸ್ ಸ್ಟೇಷನ್ ಗೆ ಎತ್ತಕ್ಕೊಂಡೋಗಿದ್ರು ಮಗ ಅಂದ. ನಮಗೆಲ್ಲ ಒಂದು ಕ್ಷಣ ಭಯ ಆಯಿತು ಆದರು ಸ್ವಲ್ಪ ಹೊತ್ತು ಸಮಾಧಾನ ಮಾಡ್ಕೊಂಡು ಒಂದು ಪ್ಯಾಕ್ ಸಿಗರೇಟು ತಂದು ಎಲ್ಲರು ಸೇದಿ ನಂತರ ಅವನ ಕಥೆ ಮುಂದುವರೆಸಲು ಕೇಳಿದೆವು..

ಎಂದಿನಂತೆ ಅಂದು ಸಹ ತನ್ನ ದೊಡ್ಡ ಕಿಟ್ ಬ್ಯಾಗ್ ತುಂಬಾ ಲಾಟರಿ ಟಿಕೆಟ್ ತರುತಿದ್ದನಂತೆ. ದಾರಿಯಲ್ಲಿ ಒಬ್ಬ constable  ತಡೆದು ವಿಚಾರಣೆ ಮಾಡಿದ್ದಾನೆ. ಮಹೇಶನ ಬಳಿ ಎಲ್ಲ ದಾಖಲೆ ಇದ್ದರು ಸಹ ಕರೆದುಕೊಂಡು ಹೋಗಿ ಸ್ಟೇಷನ್ ಅಲ್ಲಿ ಕೂರಿಸಿದ್ದಾರೆ. ಮಹೇಶ ಹೆದರಿ ಸ್ಟೇಷನ್ ಅಲ್ಲಿ ಕೂತಿರುವಾಗ ಬರುವ ಪೋಲಿಸು ಗಳೆಲ್ಲ ಇವನ ಬಳಿ ಬರುವುದು ಲೋ ಏನೋ ನಿಂದು ಕೇಸ್ ಅನ್ನೋದು. ಓಹೋ ಲಾಟರಿ ಮಾರ್ತ್ಯ ಲಾಟರಿ, ಅಂತ ಒಂದು ಅವಾಜ್ ಹಾಕೋದು ಹೋಗೋದು ಮಾಡುತಿದ್ದರಂತೆ. crime ನವರು, ಮಾಮೂಲಿ ಪೋಲಿಸ್ ನವರು, ಬರುವ ಪೋಲಿಸ್ ರ ಶಿಷ್ಯಕೋಟಿಗಳು ಎಲ್ಲರು ಇವನ ಬಳಿ ಬರುವುದು ಬಯ್ಯುವುದು ಹೋಗುವುದು  ಮಾಡಿ ಮಹೇಶನಿಗೆ ಭಯದ ಪರಮಾವಧಿಯನ್ನು ತೋರಿಸಿದ್ದಾರೆ. ಲೋಕೆಪ್ ನಲ್ಲಿ ಒಬ್ಬ ಕಳ್ಳ ಕುತಿದ್ದನಂತೆ ಅವನನ್ನು ನೋಡಿಸಿ ಪೇದೆಯೊಬ್ಬ ಅವನು  ನಿನ್ನಂತಯೇ  ಲಾಟರಿ ಮರುತಿದ್ದ ನೋಡು ಅದಕ್ಕೆ ಬೇಡಿ ಹಾಕಿ ಕುಡಿಸಿರುವುದು ಅ ಕಳ್ಳನನ್ನು ಅಲ್ವೇನೋ ಅಂದರೆ ಭಯದಿಂದ ನಡುಗಿ ಹೌದು ಹೌದು ಅಂದಿದ್ದಾನೆ ಆಗಂತು ಮಹೇಶನಿಗೆ ಯಾಕಾದ್ರು ಇ ಕೆಲಸಕ್ಕೆ ಬಂದೆನೋ ಅನಿಸಿಬಿಟ್ಟಿದೆ. 

ಅಷ್ಟರಲ್ಲೇ inspector  ಬಂದಿದ್ದಾರೆ. ಬಂದವರು ಇವನನ್ನು ನೋಡಿ enri ಇವನದು ಕೇಸ್ ಅಂದಾಗ ಪೇದೆ ಸರ್ ಲಾಟರಿ ಮರ್ತ ಇದ್ದ ಸರ್ ಅಂದಿದ್ದಾನೆ  inspector  ಬಂದು ದಾಖಲೆ ಪರೀಕ್ಷೆ  ಮಾಡಿ  ಎಲ್ಲವು ಸರಿಯಗಿದ್ದಿದ್ದನ್ನು ಗಮನಿಸಿ  ಪೇದೆಗೆ ಒಂದಷ್ಟು ಬೈದು ಇವನನ್ನು ಮನೆಗೆ ಹೋಗಪ್ಪ ಎಂದು ಕಳುಹಿಸಿದ್ದಾರೆ . ಆಚೆ ಭಾರದ ಕಿಟ್ ಬ್ಯಾಗ್ ಹೊತ್ತು ತಂದ ಮಹೇಶನಿಗೆ ಪೇದೆ ಏನಪ್ಪಾ ಉಟಕ್ ಒಂದಿಪ್ಪತ್ತು ಕೊಟ್ಟು ಹೋಗು ಅಂದನಂತೆ. ಅದಕ್ಕೆ ಜೇಬಲ್ಲಿದ್ದ  monthly ಪಾಸು ತೋರಿಸಿ ಸರ್ ಇದನ್ನು  ಬಿಟ್ಟು  ೫ ಪೈಸೆ ಸಹ ಇಲ್ಲ ಸರ್ ಅಂತ ಹೊರಟು  ಬಂದಿದ್ದಾನೆ. ಒಟ್ಟಿನಲ್ಲಿ ಪೇದೆ ಮಾಡಿದ  ಅವಾಂತರ ನಮ್ಮ ಗೆಳೆಯರಲೆಲ್ಲ ಆತಂಕ ಸೃಷ್ಟಿ  ಮಾಡಿತ್ತು. ಇಷ್ಟೆಲ್ಲಾ ಕಥೆ ಹೇಳಿದ ಮೇಲೆ ಮಹೇಶ ತನ್ನ ಕಿವಿಯ  ಕೂದಲುಗಳನ್ನು ನಿವುತ್ತ ಹಹಹಹ ಸಿಂಹ ಹೆಂಗೆ ಪೋಲಿಸ್ ಸ್ಟೇಷನ್ ಎಲ್ಲ ನೋಡ್ಕೊಂಡು ಬಂದೆ ಅಂತ ಘರ್ಜಿಸಲು ಶುರು ಮಾಡಿದ್ದ. ಈಗ ಮಹೇಶ ಸಿನಿಮ ರಂಗದಲ್ಲಿ  ಸಹಾಯಕ ನಿರ್ದೇಶಕನಾಗಿ ದುಡಿಯುತಿದ್ದಾನೆ. ಇತ್ತೀಚಿಗೆ ಸಿಕ್ಕಾಗ ಈ ಘಟನೆಯ ಬಗ್ಗೆ ಮಾತನಾಡುತ್ತ, ನಮ್ಮ ಓದುಗರಿಗೂ ಈ ಘಟನೆಯ ಬಗ್ಗೆ ಹೇಳ ಬೇಕು ಎನಿಸಿತ್ತು ಹೇಳಿಬಿಟ್ಟೆ :)..... 

*******************************************************************************


      

Wednesday, September 28, 2011

ಒತ್ಲ ಜೀವನ

ಒತ್ಲ ಹೊಡೆಯೋ ಜೀವನದಲ್ಲಿ
ಕೊಟ್ಲೇ ಇಲ್ಲದ ಬದುಕಿನಲ್ಲಿ
ಕೆಲಸ ಕಾರ್ಯ ಮಾಡ್ದೆ ಇದ್ರೆ
ಹೊತ್ತಿನ್ ಹಿಟ್ಟು ಹುಟ್ಟದೆ ಇದ್ರೆ
ಅಗ್ತ್ಯ ನೀನು ಭೂಮಿ ಮೇಲೆ ದಂಡಪಿಂಡ
ಬೇಗ ಬಾಚ್ಕೋ ಜೀವನ ಸಿಕ್ದೊರ್ಗ್ ಸೀರುಂಡ

ಕಿತ್ತೋದ ಚಪ್ಪಲಿಗು ಬೆಲೆ ಇದೆ
ತುಕ್ಕಿಡಿದ ಕಬ್ಬಿಣನು ಸದ್ದು ಮಾಡ್ತದೆ
ಮಿಟಾಯಿ ಮಾರಿದರು ಪರವಾಗಿಲ್ಲ
ನಿ ಸುಮ್ನೆ ಕೂತಿದ್ರೆ ಓದಿತರೆ ಎಲ್ಲ

ಸುಲಭಕ್ಕೆ ನಿನಗೊಂದು ಕೆಲಸ ಬೇಕ
ದಿನ್ನಕ್ಕೆ ೨೦೦ ಕೂಲಿ ಸಾಕಾ
ಮದ್ಯಾಹ್ನ ಬಿರಿಯಾನಿ ಪ್ಯಾಕೆಟ್ ಇದೆ
ರಾತ್ರಿಗೆ ರಾಜ ವ್ಹಿಸ್ಕಿ ಇದೆ

ಇರುವರೆಗೂ ಯಾವ್ದಾದ್ರು ಕೆಲಸ ಮಾಡು
ಜನರತ್ರ ಒಳ್ಳೆಯ ಹೆಸರು ಮಾಡು
ಟೋಪಿಯ ಹಿಂದೆ ನೀ ಹೊಗ್ಲೆಬೇಡ
ಟೋಪಿಯ ಹಾಕ್ಸ್ಕೊಂದು ಬರ್ಲೆಬೇಡ

                                          ಪವನ್ :-

Monday, September 26, 2011

ಇರಬಾರದಿತ್ತೆ ನಾನು ಕಡಲಾಳದಲ್ಲಿ

ಇರಬಾರದಿತ್ತೆ ನಾನು ಕಡಲಾಳದಲ್ಲಿ
ಮುತ್ತಾಗಿದ್ದಿದ್ದರೆ ಕಪ್ಪೆಚಿಪ್ಪಿನ ಕಾವಲು
ಕಲ್ಲಾಗಿದ್ದಿದ್ದರೆ ಹಸಿರು ಪಾಚಿಯ ಒಡಲು  
ಮಿನಾಗಿದ್ದಿದ್ದರೆ ನನ್ನ ಕಣ್ಣಿರು ಯಾರಿಗೂ ಕಾಣುತ್ತಿರಲಿಲ್ಲ
ಮನದಾಳದ ನೋವನ್ನು ಮರೆಮಾಚ ಬಹುದಿತ್ತಲ್ಲ
ಸ್ನೇಹ ಪ್ರೀತಿಗಳ ಪಾಶ ಬೀಳುತ್ತಿರಲಿಲ್ಲ
ಸುರೊಂದು ಬೇಕೆಂದು ಹೆಣಗುತ್ತಿರಲಿಲ್ಲ
ಹುಟ್ಟಿದೆ ನೀನು ಹುಲು ಮಾನವನಾಗಿ
ಅಸೆ ಆಮಿಷಗಳ ಪ್ರತಿರೂಪವಾಗಿ
ಕೋಟಿ ಕೂಡಿಟ್ಟರು ತೃಪ್ತಿಯೇ ಇಲ್ಲ
ಗೆಳೆಯ ಬಂಧುಗಳ ಮೇಲೆ ನಂಬಿಕೆ ಇಲ್ಲ
ಬದಲಾಗಬೇಕಿದೆ ನೀ ಬಾಳುವ ರೀತಿ
ಅನುಸರಿಸು ನೀ ವಿಶ್ವ ಮಾನವನ ರೀತಿ
                                                      ಪವನ್ :-

Tuesday, September 6, 2011

ಮೊದಲ ಪ್ರೇಮ ಗೀತೆ......


ಸುತ್ತಲೂ ದೊಡ್ಡದಾಗಿ ನೆರೆದಿದ್ದ ವಿದ್ಯಾರ್ಥಿ ಸಮೂಹ, ಅಲ್ಲಲ್ಲಿ ಒಬ್ಬಬ್ಬರು ಒಂದೊಂದು ಆಟ ಅಡುತಿದ್ದರು. ಕೆಲವರು ಬಾಕ್ಸ್ ಟೆನ್ನಿಸ್, ಕೆಲವರು ಲೆಗ್ ಕ್ರಿಕೆಟ್, ಕೆಲವರು ಹೈ ಜಂಪ್ ಮತ್ತೆ ಕೆಲವರು ಕಬ್ಬಡ್ಡಿ, ಇನ್ನೊಂದು ಬದಿಯಲ್ಲಿ ಕೆಲವು ವಿದ್ಯಾರ್ಥಿಗಳು ನೆನ್ನೆ ಕೊಟ್ಟ ಹೋಂ ವರ್ಕ್ ಮನೆಯಲ್ಲಿ ಮಾಡಿಲ್ಲದಿದ್ದರಿಂದ ಸ್ನೇಹಿತರ ಬಳಿ ಪಡೆದು ಆತುರಾತುರವಾಗಿ ಗೀಚುತಿದ್ದರು.
ಅಲ್ಲೇ ಒಂದು ಮೂಲೆಯಲ್ಲಿ ಪ್ರವೀಣ ಗೆತನ್ನೇ ನೋಡುತ್ತಾ ನಿಂತಿದ್ದ. ತನ್ನ ಸ್ನೇಹಿತರೆಲ್ಲ ಒಂದಲ್ಲ ಒಂದು ಆಟ ಅಡುತಿದ್ದರು ಪ್ರವಿಣನಿಗೆ ಅ ಕಡೆ ಗಮನ ಬಂದಿಲ್ಲ, ಅವನ ಗಮನ ಏನಿದ್ದರು ಸಂಪೂರ್ಣ ಗೇಟಿನ ಕಡೆಯೇ ಕೆಂದ್ರಿಕ್ರುತವಗಿತ್ತು. ಇದ್ದಕ್ಕಿದ್ದಂತೆ PT ಮೇಷ್ಟ್ರು ಜೋರಾಗಿ ಪೀಪಿ ಊದಿದರು. ಆಡುತಿದ್ದ ಮಕ್ಕಳೆಲ್ಲರೂ ಓಡೋಡಿ ಬಂದು ಸಾಲುಗಳಲ್ಲಿ ನಿಂತರು. ಹೋಂ ವರ್ಕ್ ಮದುತಿದ್ದವರೆಲ್ಲ ಘಾಬರಿ ಘಾಬರಿಯಾಗಿ ಪುಸ್ತಕಗಳನ್ನು ಹೇಗೆ ಬರೆಯುತಿದ್ದರೋ ಹಾಗೇ ಬ್ಯಾಗ್ ಗೆ ತುಂಬಿಸಿಕೊಂಡು ಬಂದು ಸಾಲಲ್ಲಿ ನಿಂತರು. ಪ್ರವೀಣ ಗೇಟನ್ನು ನೋಡುತ್ತಲೇ ಮುಖ ಚಿಕ್ಕದು ಮಾಡಿಕೊಂಡು ಬೇಸರವಾಗಿ ಭಾರವಾದ ಹೆಜ್ಜೆ ಇಡುತ್ತಾ ಬಂದು ಸಾಲಿನ ಮುಂಭಾಗದಲ್ಲಿ ಪ್ರಾರ್ಥನೆ ಹೇಳಿಕೊಡುವ ಜಾಗದಲ್ಲಿ ನಿಂತನು.  ಅಷ್ಟರಲ್ಲೇ ಬಜಾಜ್ ಸ್ಕೂಟರ್ ಒಂದು ಬಂದು ಗೇಟಿನ ಹೊರಗಡೆ ನಿಂತಿತು. ಭಾರವಾದ ಬ್ಯಾಗ್ ಹೊತ್ತ ಹುಡುಗಿ ತನ್ನ ತಂದೆಗೆ ಟಾಟಾ ಮಾಡುತ್ತ ಗೇಟ್ ಒಳಗೆ ಬಂದು ಓಡೋಡಿ ಪ್ರಾರ್ಥನೆಯ ಜಾಗಕ್ಕೆ ಬರುತಿದ್ದಳು, ಪ್ರವಿಣನ ಬಾಡಿದ್ದ ಮುಖ ಚಿಗುರಿ ಮನ ಆತ್ಮ ವಿಶ್ವಾಸದಿಂದ ತುಳುಕಾಡಿತು. ಬ್ಯಾಗ್ ಪಕ್ಕ ಇಟ್ಟು ಅ ಹುಡುಗಿಯು ಬಂದು ಪ್ರವಿಣನ ಪಕ್ಕ ನಿಂತಳು. ಪ್ರವೀಣ ಯಾಕೆ ಕಾವ್ಯ ಇವತ್ತು ಲೇಟ್ ಅಂದ, ಅಮ್ಮ ಬಾಕ್ಸ್ ಕೊಡೋದು ಲೇಟ್ ಮಾಡಿದ್ರು ಅನ್ನೋ ಮಾಮೂಲಿ ಉತ್ತರವನ್ನೇ ಅವಳು ಕೊಟ್ಟಳು. ಸ್ವಾಮಿ ದೇವನೇ ಲೋಕ ಪಾಲನೆ ಎಂದು ಪ್ರಾರ್ಥನೆ ಮಡಿ ಎಲ್ಲರು ತಮ್ಮ ತಮ್ಮ ತರಗತಿಗಳಿಗೆ ಸೇರಿಕೊಂಡರು...

ಪ್ರವೀಣ ಮತ್ತು ಕಾವ್ಯ ಇಬ್ಬರು ಒಂದೇ ತರಗತಿಯವರು, ಹತ್ತನೇ ತರಗತಿ. ಕಾವ್ಯಳ ತಂದೆ ಕೇಂದ್ರ ಸರ್ಕಾರದ ಉದ್ಯೋಗಿ ಆಗಾಗ ವರ್ಗಾವಣೆ ಆಗುವುದರಿಂದ ಸಧ್ಯಕ್ಕೆ ಈ ಊರಿನ ವಾಸ್ತವ್ಯ. ಪ್ರವಿಣನದು ಇದೆ ಊರು ಅವರಪ್ಪ ಯಾವುದೊ ಖಾಸಗಿ ಕಂಪನಿ ಯ ಉದ್ಯೋಗಿ. ಪ್ರವೀಣ ಮತ್ತು ಕಾವ್ಯ ಇಬ್ಬರು ಕ್ಲಾಸ್ ಲೀಡರ್ ಗಳು ಸಹ. ತರಗತಿ ಕಡೆಯಿಂದ ಯಾವುದೇ ಕಾರ್ಯಕ್ರಮ ಆಯೋಜಿಸ ಬೇಕಿದ್ದರೆ, ಸರಸ್ವತಿ ಪೂಜೆ ಮುಂತಾದ ಕಾರ್ಯಕ್ರಮಗಳಲ್ಲಿ ಇವರಿಬ್ಬರದೇ ಹೆಚ್ಚಿನ ಓಡಾಟ. ಇನ್ನು ಓದಿನ ವಿಷಯಕ್ಕೆ ಬಂದರೆ ಪ್ರವೀಣ ಮತ್ತು ಕಾವ್ಯ ಇಬ್ಬರು ಯಾವಾಗಲು ಮುಂದು ಇವರಿಬ್ಬರ ನಡುವೆಯೇ ಹೆಚ್ಚಿನ ಪೈಪೋಟಿ ಯಾವಾಗಲು. ಒಂದೊಂದು ಮಾರ್ಕಿನಲಿ ಇಬ್ಬರಲ್ಲಿ ಒಬ್ಬರು ಮುಂದಿರುತಿದ್ದರು. ಇಬ್ಬರ ಮನೆಗಳು ಸುಮಾರು ದುರವಿದ್ದರು ಪ್ರವೀಣ ತನ್ನ ಹೀರೋ ಸೈಕಲ್ ನಲ್ಲಿ ಕಾವ್ಯಳ ಮನೆ ತನಕ ಹೋಗಿ ಆಟವಾಡುತಿದ್ದ ಅವಳ ಜೊತೆ.  

 ಶಾಲೆಯಲ್ಲಿ ಒಂದು ದಿನ ಚಿತ್ರ ಕಲೆಯ ಹೋಂ ವರ್ಕ್ ಕೊಟ್ಟಿದ್ದರು. ಅ ಚಿತ್ರ ಕಲೆಯ ಮೇಡಂ ಗೆ ಮೂಗಿನ ಮೇಲೆ ಕೋಪ, ಪ್ರವೀಣ ಅ ದಿನವೇ ಹೊಸ ಚಿತ್ರ ಕಲೆಯ ಪುಸ್ತಕವನ್ನು ಇಟ್ಟು ಹೋಂ ವರ್ಕ್ ಮಾಡಿ ತಂದಿದ್ದ. ಕಾವ್ಯ ಮರೆತು ಬಂದು ಬಿಟ್ಟಿದ್ದಳು. ಸರತಿಯಂತೆ ಎಲ್ಲರು ತಮ್ಮ ಹೋಂ ವರ್ಕ್ ಅನ್ನು ಎದ್ದು ಹೋಗಿ ಎಲ್ಲ ಮಕ್ಕಳು ತೋರಿಸುತಿದ್ದರು. ಪ್ರವೀಣ ಹಗೆ ಒಮ್ಮೆ ಕಾವ್ಯಳನ್ನು ನೋಡಿದ. ಕಾವ್ಯ ಹೆದರಿ ಏನು ಮಾಡುವುದೆಂದು ತೋಚದೆ ಪೆಚ್ಚು ಮೊರೆ ಹಾಕಿ ಕುಳಿತಿದ್ದಳು. ಪ್ರವಿಣನ ಪಕ್ಕದ ಬೆಂಚು ಆಗಿದ್ದರಿಂದ ಅವಳ ನೋವು ಪ್ರವಿಣನಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕಾವ್ಯಳನ್ನು ಕರೆದು ತನ್ನ ಪುಸ್ತಕವನ್ನು ಕೊಟ್ಟು ತೋರಿಸು ಅಂದ. ಕಾವ್ಯ ನೀನೇನು ಮಾಡುತ್ತಿಯ ಅಂದಾಗ ಇದು ಹೊಸ ಪುಸ್ತಕ ನಾನು ಹಳೆ ಪುಸ್ತಕದಲ್ಲೊಮ್ಮೆ ಬರೆದಿದ್ದೇನೆ ಎಂದು ಹೇಳಿದ. ಕಾವ್ಯಳ ಸರದಿ ಬಂದಾಗ ಪ್ರವೀಣ ಬರೆದಿದ್ದ ಹೋಂ ವರ್ಕ್ ತೋರಿಸಿದಳು. ನಂತರ ಸ್ವಲ್ಪ ಹೊತ್ತಿಗೆ ಪ್ರವಿಣನ ಸರದಿ ಬಂತು. ಆದರೆ ಪ್ರವೀಣ ಮೇಡಂ ಹತ್ತಿರ ಪುಸ್ತಕ ಮರೆತು ಬಂದಿರುವುದಾಗಿ ಹೇಳಿದ. ಚಿತ್ರ ಕಲೆಯ ಟೀಚರ್ ಗೆ ಕೋಪ ಮೂಗಿನ ಮೇಲಿದ್ದಿದ್ದು ನೆತ್ತಿಗೆ ಬಂದು, ಪ್ರವೀಣನಿಗೆ ಬೆತ್ತದ ರುಚಿ ತೋರಿಸಿದರು.ಶಾಲೆ ಮುಗಿದ ಮೇಲೆ ಪ್ರವೀಣನಿಗೆ ಕಾವ್ಯ sorry ಕೇಳಿದಳು. ಅದಕ್ಕೆ ಪ್ರವೀಣ ನಾ ಆಗಿದ್ದಕ್ಕೆ ಅ ಬೆತ್ತದ ಏಟು ತಡೆದೆ, ನಿನ್ನ ಕೈಲಿ ಸಾಧ್ಯವಾಗುತಿತ್ತ ಕಾವ್ಯ ಅಂದ. ಅದಕ್ಕೆ ಕಾವ್ಯ ಅಯ್ಯೋ ಹೌದಪ್ಪ thank you so much ಅಂತ ಸ್ವಲ್ಪೇ ಸ್ವಲ್ಪ ನಕ್ಕಳು ಅವಳ ಅ ನಗುವಿನಲ್ಲಿ ಪ್ರವಿಣನ ನೋವು ಆ ಕ್ಷಣಕ್ಕೆ  ಅವನಿಗೆ ಹಿತವಾಗೆ ಅನಿಸುತಿತ್ತು...

ಮಾರನೇ ದಿನ ಶಾಲೆಗೆ ಪ್ರವೀಣ ಬಂದಿರಲಿಲ್ಲ, ಸ್ನೇಹಿತರೆಲ್ಲ ಗುಸು ಗುಸು ಎನ್ನುತಿದ್ದರು, ನಂತರ ತಿಳಿದ ವಿಷಯ ಏನಂದರೆ ಪ್ರವೀಣನಿಗೆ ಜ್ವರ ಬಂದಿದೆ ಎಂದು. ಕೆಲವರು ಚಿತ್ರ ಕಲೆಯ ಮೇಡಂ ಹೊಡೆದ ಏಟು ತಿಂದೆ ಅವನಿಗೆ ಜ್ವರ ಬಂದಿರಬಹುದು ಎಂದು ಮಾತನಾಡಿಕೊಳ್ಳುತಿದ್ದರು. ಇವೆಲ್ಲ ಕೇಳಿದ ಕಾವ್ಯಳಿಗೆ ನನ್ನಿಂದಲೇ ಪಾಪ ಪ್ರವಿಣನಿಗೆ ಜ್ವರ ಬಂದಿದೆ ಎನಿಸಿಬಿಟ್ಟಿತ್ತು. ಸಂಜೆ ಶಾಲೆ ಮುಗಿದೊಡನೆ ಸೀದ ಪ್ರವಿಣನ ಮನೆಗೆ ಹೋದಳು. ಮನೆಯಲ್ಲಿ ಎಲ್ಲರನ್ನು ಮಾತನಾಡಿಸಿ, ಪ್ರವಿಣನನ್ನು  ನೋಡಿ ಏನಾಯ್ತೋ ಅಂದಳು. ಪ್ರವೀಣ viral infection ಅಂತೆ ಡಾಕ್ಟರ injection ಕೊಟ್ಟಿದ್ದಾರೆ ಆದಷ್ಟು ಬೇಗ ಸರಿ ಹೋಗುತ್ತೇನೆ. ಇನ್ನು 3 ದಿನ ಶಾಲೆಗೆ ಬರುವುದಿಲ್ಲ ಅಂದ. ಅದಕ್ಕೆ ಕಾವ್ಯ ನೀನು ಏನು ಯೋಚನೆ ಮಾಡಬೇಡ ನಿನ್ನ ಎಲ್ಲ nOtes ನಾನು update ಮಾಡಿಕೊಡ್ತೀನಿ ಅಂತ ಅವತ್ತು ಶಾಲೆಲಿ ಬರೆಸಿದ ಎಲ್ಲ notes ಗಳನ್ನೂ ಪ್ರವಿಣನ ಪುಸ್ತಕಕ್ಕೆ copy ಮಾಡಿದಳು. ಇದೇ ರೀತಿ  ಮುಂದಿನ ಮೂರೂ ದಿನಗಳು ನಡೆದವು. ಪ್ರವಿಣನ ಜ್ವರ ವಾಸಿಯಾಗಿತ್ತು. ಶಾಲೆಗ ಬಂದ ಪ್ರವಿಣನಿಗೆ ಇನ್ನು ಖುಷಿಯಾಗುವ ವಿಷಯಗಳು ಕೇಳಿಬಂತು. ಅವನ ಸ್ನೇಹಿತರೆಲ್ಲ ಲೋ ಕಾವ್ಯ ಪ್ರವಿಣನ ಮನೆಗೆ ಹೋಗಿ notes ಎಲ್ಲ ಬರೆದು ಕೊಟ್ಟಳಂತೆ. ಅವರಿಬ್ಬರ ಮಧ್ಯೆ ಏನೋ ಇದೆ ಕಣ್ರೋ ಅಂತ ಮಾತನಾಡಿಕೊಳ್ಳುತಿದ್ದರು. ಪ್ರವೀಣ ಸಹ ಇರಬಹುದು, ಅದಕ್ಕೆ ತಾನೆ ತನಗೆ ಅಷ್ಟು ಸಹಾಯ ಮಾಡಿದಳು ಎಂದು ಒಳಗೊಳಗೇ ಸಂತೋಷಗೊಂಡ...

ಪರೀಕ್ಷೆ ಹತ್ತಿರ ಬಂತು. SSLC ಪರೀಕ್ಷೆ public exam ಅದ್ದರಿಂದ ಎಲ್ಲರು ಕಷ್ಟ ಪಟ್ಟು ಓದತೊಡಗಿದರು. ಪ್ರವೀಣ ಮತ್ತು ಕಾವ್ಯ ಸಹ ಜೊತೆಯಲ್ಲಿ combined ಸ್ಟಡೀಸ್ ಮಾಡಿದರು. ಪರೀಕ್ಷೆ ಸಹ ಇಬ್ಬರು ಚೆನ್ನಾಗೆ ಬರೆದರು. ಪ್ರವೀಣ ಕಾವ್ಯಳಿಗೆ ತನಗಿಂತ ಹೆಚ್ಚು ಅಂಕ ಬರಲಿ ಅಂತ ತನಗೆ ಗೊತ್ತಿದ್ದರು ಒಂದೆರಡು ಅಂಕಗಳನ್ನು ಬಿಟ್ಟು ಬರುತಿದ್ದ. ನಂತರ ಫಲಿತಾಂಶ ಸಹ ಬಂದಿತು. ಆದರು ಪ್ರವಿಣನಿಗೆ 10 ಅಂಕ ಹೆಚ್ಚೇ ಬಂದಿತ್ತು. ಆದರೆ ಕಾವ್ಯ ತಂದೆಗೆ ಅದೇ ಸಮಯದಲ್ಲಿ ಬೇರೆಯ ಊರಿಗೆ transfer ಆಗಿತ್ತು. ಪ್ರವೀಣ ನನ್ನು ಇ ವಿಷಯ ಬಹಳಷ್ಟು ಕಾಡಿತು. ತಮ್ಮ ಊರಿನ ಕಾಲೇಜ್ ಗೆ ಸೇರಿಸಿ ಅವಳನ್ನ ಅಂತ ಅವರಪ್ಪನನ್ನು ಕೇಳಿದ. ಆದರೆ ಬಹ ದೂರಕ್ಕೆ transfer ಅದ್ದರಿಂದ ಕಾವ್ಯ ತಂದೆ ಒಪ್ಪಲಿಲ್ಲ. ಪ್ರವಿಣನ ಮೊದಲ ಪ್ರೇಮ ಗೀತೆ ಪಲ್ಲವಿ ಚರಣಗಳ ದಾಟಿ ಮತ್ತೊಮ್ಮೆ ಕೊನೆಯ ಪಲ್ಲವಿ ಬಳಿಗೆ ಬಂದಿತ್ತು. ಬಸ್ಸಿನ ಬಳಿ ಹೋಗಿ ಟಾಟಾ ಮಾಡುವಾಗ ಅವನ ಕಣ್ಣಿನಲ್ಲಿ. ಅವನಿಗೇ ಗೊತ್ತಿಲ್ಲದಂತೆ ಕಣ್ಣೀರು ಸುರಿಯುತಿತ್ತು.
  

ಇಷ್ಟೆಲ್ಲಾ ನಡೆಯುತಿದ್ದರೆ, ಹಿಂದಿನಿಂದ ಯಾರೋ ಬೆನ್ನಿಗೆ ತಿವಿದು ಲೇ ಮಗ ಅಕ್ಷತೆ ಕಾಳು ಹಾಕೋ ಅಂದಹಾಗಾಯಿತು. ಆಗಲು ಕಣ್ಣಲಿ ಸ್ವಲ್ಪ ನೀರು ತುಂಬಿತ್ತು. ಅಕ್ಷತೆ ಹಾಕಿದ ನಂತರ  ಊಟ ಮುಗಿಸಿ ಛತ್ರದಿಂದ ಹೊರಬಂದ ಪ್ರವೀಣ ಒಮ್ಮೆ ತಿರುಗಿ ಛತ್ರದ ಕಡೆ ನೋಡಿದ. ಅಲ್ಲಿ ದೊಡ್ಡದಾದ ಹೂಗಳಿಂದ ಸಿಂಗಾರವಾದ ಒಂದು ಆಕೃತಿ ಮಾಡಿದ್ದರು. ಅದರಲ್ಲಿ ಹೀಗೆ ಬರೆದಿತ್ತು
                                         

                                           "ನಿಮಗೆ ಸುಸ್ವಾಗತ ಕಾವ್ಯ weds ಪ್ರದೀಪ್ " 

                                                                                                    ಪ್ರೀತಿಯಿಂದ ಪವನ್ :-

*****************************************************************************
 ಕೃಪೆಚಿತ್ರ: theglass.com


Thursday, August 18, 2011

ಭ್ರಷ್ಟಾಚಾರ

ಪವನ್ ಪರುಪತ್ತೆದಾರ   
ನನಗೊಬ್ಬ ಸ್ನೇಹಿತ ಇದ್ದಾನೆ ಪ್ರವೀಣ್ ಅಂತ, ನನ್ನ ಜೊತೆ ಓದಿಲ್ಲವಾದರೂ ನನ್ನ ಸಹಪಾಠಿ ಅವನು, ಒಂದೇ ತರಗತಿ ಆದರೆ ಬೇರೆ ಶಾಲೆ. ಅವನ ಕೆಲಸ ತಾಲ್ಲೂಕು ಕಚೇರಿಯಲ್ಲಿ. ಸರ್ಕಾರದಿಂದ ಕೊಟ್ಟ ಕೆಲಸ ಅಲ್ಲ, ಅವನೇ ಹುಡುಕಿ ಕೊಂಡಿರುವ ವೃತ್ತಿ. ನಿಜ ಹೇಳಬೇಕೆಂದರೆ ನಮ್ಮೂರಿನ ತಾಲ್ಲೂಕು ಕಚೇರಿಯೋಳಗಿರುವರಿಗಿಂತ ಇವನು ಹೆಚ್ಚು ಕೆಲಸ ಮಾಡುತ್ತಾನೆ. ಪಹಣಿ, registration, ಖಾತೆ ಬದಲಾವಣೆ, encumberance ಸರ್ಟಿಫಿಕೇಟ್, survey sketch ಕಾಪಿ, ನಿಮಗೇನು ಬೇಕು?? ತಾಲ್ಲೂಕು ಕಚೇರಿಯ ಗೇಟ್ ನ ಪ್ಯೂನ್ ಇಂದ ಹಿಡಿದು ತಹಶೀಲ್ದಾರ್ ತನಕ, ಏನು ಕೆಲಸ ಬೇಕಾದರುಮಾಡಿಕೊಡುತ್ತಾನೆ(ಮಾಡಿಸಿಕೊಡುತ್ತಾನೆ).
ಇತ್ತೀಚಿಗೆ ನನಗೆ ಬಹಳ ಜರೂರಾಗಿ ನಮ್ಮ ಜಮೀನಿನ ಪಹಣಿ ಬೇಕಾಗಿತ್ತು. ನಮ್ಮ ಊರಿನ ಪಹಣಿ ಕೇಂದ್ರ ಬಹಳ ದಿನಗಳಿಂದ ದುರಸ್ಥಿಯಲ್ಲಿತ್ತು. ಆಗಷ್ಟೇ ಕೊಡಲು ಶುರು ಮಾಡಿದ್ದರು. ಅದ್ದರಿಂದ ತಾಲ್ಲೂಕು ಕಚೇರಿ ಬಳಿ ಹೋಗಿ ಸಾಲು ನೋಡಿದೊಡನೆ ಭಯವಾಯ್ತು. ಅದರಲ್ಲೂ ನಮ್ಮ ಸರ್ಕಾರೀ ಕಛೇರಿಯೋಳಗಿನ ಗಣಕ ಯಂತ್ರಗಳು ಯಾವಾಗ ಕೆಡುತ್ತವೋ ಗೊತ್ತಿಲ್ಲ. ಇವತ್ತು ಕೆಟ್ಟರೆ ಇನ್ನು ರಿಪೇರಿ ಆಗುವುದು ಯಾವಾಗಲೋ??? ಅಲ್ಲಿವರೆಗೂ ನನಗೂ ಕಾಯುವ ಅವಕಾಶವಿರಲಿಲ್ಲ. ಮುಲಾಜಿಲ್ಲದೆ ಪ್ರವೀಣ್ ಗೆ ಫೋನಾಯಿಸಿ ಪಹಣಿ ಬೇಕಾಗಿತ್ತು ಎಂದು ತಿಳಿಸಿದೆ. ಕೆಲವೇ ನಿಮಿಷದಲ್ಲಿ ಹಾಜರಾದ ಪ್ರವೀಣ್ ಸೀದ ನಿಂತಿದ್ದ ಜನರೆಲ್ಲರ ಮುಂದೆಯೇ, ಪಹಣಿ ಕೊಡುವ ಕೇಂದ್ರದ ಒಳಗೆ ಹೋದ. ಹತ್ತೇ ನಿಮಿಷದಲ್ಲಿ ಪಹಣಿ ತಂದು ಕೊಟ್ಟ. ನಾನು ಸರದಿಯಲ್ಲಿ ನಿಂತು ಪಹಣಿ ಪಡೆದುಕೊಂಡಿದ್ದರೆ ಸುಮಾರು ೩ ತಾಸಾದರೂ ಬೇಕಾಗಿತ್ತು ಯಾರಿಗೆ ಗೊತ್ತು ಕಂಪ್ಯೂಟರ್ ಕೆಟ್ಟು ಹೋಗಿದ್ದರೆ ಅಂದು ನನಗೆ ಪಹಣಿಯೇ ಸಿಗುತ್ತಿರಲಿಲ್ಲ. ಸರದಿಯಲ್ಲಿ ನಿಂತಿದ್ದರೆ ಪಹಣಿ 10 ರು ಆಗುತ್ತಿತ್ತು. ಅವನ್ನೆಲ್ಲ ತಪ್ಪಿಸಿಕೊಂಡಿದ್ದರಿಂದ ನಾನು ಕೊಟ್ಟ ಕಾಸು ಕೇವಲ 5ru ಹೆಚ್ಚು ಅಷ್ಟೇ. ನನ್ನ ಮೂರೂ ಘಂಟೆ ಸಮಯ, ಮತ್ತು energy ಉಳಿಯಲು ನಾನು ವ್ಯಯಿಸಿದ್ದು ಕೇವಲ 5 ರು ಮಾತ್ರ. ನನಗೆ ಅನುಕೂಲವಾದಾಗ 5 ರು ಹೆಚ್ಚು ಖರ್ಚು ಮಾಡಲು ಯಾವುದೇ ಅಭ್ಯಂತರ ಇಲ್ಲ. ನಾನು ಮಾತ್ರವಲ್ಲ ನಮ್ಮಲ್ಲಿ ಬಹಳಷ್ಟು ಮಂದಿ ಈ ಭ್ರಷ್ಟಾಚಾರವನ್ನು ತಮ್ಮ ಅನುಕೂಲ ಸಿಂಧುವಾಗಿ ಬಳಸಿಕೊಂಡಿರುತ್ತಾರೆ. ಪ್ರವೀಣ್ ನನಗೆ ರಾಜಾರೋಷವಾಗಿ ಹೇಳುತ್ತಾನೆ " ಮಗಾ ನಿಂಗೆ ನಮ್ಮೂರಿನ ತಾಲ್ಲೂಕು ಆಫೀಸ್ ನಲ್ಲಿ ಏನೇ ಕೆಲಸ ಇದ್ರೂ ಹೇಳು, ಸ್ನೇಹಿತ ಅಂತ ಸಾಧ್ಯವಾದಷ್ಟು ಕಡಿಮೆಯಲ್ಲಿ ಮಾಡಿಸಿ ಕೊಡ್ತೀನಿ. ಇಲ್ಲಿ ಗುಮಾಸ್ತನಿಂದ ತಹಶಿಲ್ದಾರ್ ವರೆಗೆ ಎಷ್ಟು ಎಷ್ಟು ಕೊಡಬೇಕು ಎಂದು ನನಗೆ ಗೊತ್ತಿದೆ ಅಂತ"
ಇದು ತಾಲ್ಲೂಕು ಆಫೀಸ್ ಗಷ್ಟೇ ಸೀಮಿತವಾದ ವಿಷಯವಲ್ಲ, ನಮ್ಮ ರಾಜ್ಯದ ಎಲ್ಲ ಊರುಗಳಲ್ಲೂ ವಾಹನ ತರಬೇತಿ ಕೇಂದ್ರಗಳಿವೆ. ಇಲ್ಲಿ ನೀವು 3500 ರು ಕೊಟ್ಟು ನೊಂದಾಯಿಸಿದರೆ ಸಾಕು ನೀವು ಒಂದೆರಡು ದಿನ ಅವರೊಂದಿಗೆ ಕಲಿತು ನಂತರ inspector ಮುಂದೆ ಗಾಡಿ ಹೇಗಾದರು ಓಡಿಸಿ ನಿಮಗೆ ಪರವಾನಗಿ ಸಿಗುತ್ತದೆ. ಯಾಕಂದರೆ ನೀವು ಕೊಡುವ 3500 ರು ನಲ್ಲಿ 500 ಓ 1000 ಓ ಅ inspector ಜೇಬಿಗೆ ಸೇರಿರುತ್ತದೆ. ಅದೇ ನೀವು ನಿವಾಗಿಯೇ ಸರಿಯಾಗಿ ಕಲಿತು ಅವನ ಮುಂದೆ ಓಡಿಸಿ ತೋರಿಸಿ, ಕೆಲಸಕ್ಕೆ ಬಾರದ ಒಂದೆರಡು ಪ್ರಶ್ನೆ ಕೇಳಿ ನಿಮ್ಮನ್ನು reject ಮಾಡುತ್ತಾನೆ. ನಿಮಗೆ ಒಂದೇ ಸಲಿಗೆ ಪರವಾನಗಿ ಕೊಡುವುದಿಲ್ಲ, ಅದು ತಪ್ಪು ಇದು ತಪ್ಪು ಎಂದು ಎಣಿಸುತ್ತಾನೆ. ನಿಮ್ಮಿಂದ ಹಣ ಕೀಳುವ ವರೆಗೂ ಬಿಡುವುದಿಲ್ಲ. ನಾಗರಿಕರು ಇವನ ಬಳಿ ಯಾವನು ಪದೇ ಪದೇ ಅಲೆಯುವುದು ಎಂದು ಅವನು ಕೇಳಿದಷ್ಟು ಹಣವನ್ನೋ, ಅಥವಾ ಯಾವುದಾದರು ವಾಹನ ತರಬೇತಿ ಕೇಂದ್ರದಿಂದಲೋ ಬಂದು ಪರವಾನಗಿ ಪಡೆಯುತ್ತಾರೆ. ಇಲ್ಲಿ ನಾಗರೀಕನಿಗೆ ಪರವಾನಗಿ ಸಿಕ್ಕರೆ ಸಾಕು ಎಂಬ ಕುತೂಹಲ, ಮತ್ತೆ ಮತ್ತೆ ಬರಬಾರದೆಂಬ ಹಂಬಲ. ಅದೇ ನಮ್ಮ ಅಧಿಕಾರಿಗೆ ಹೇಗಾದರೂ ದುಡ್ಡು ಮಾಡಬೇಕಂಬ ಬಯಕೆ. ಇಲ್ಲಿ ಸಹ ನಾಗರೀಕನಿಗೆ ಭ್ರಷ್ಟಾಚಾರ ಅನುಕೂಲ ಸಿಂಧುವಾಗಿದೆ.
ಇನ್ನು ನಮ್ಮ ರಾಜ್ಯದಲ್ಲಿ ನಡೆದ ಗಣಿ ಹಗರಣದ್ದು ಅದೇ ಕಥೆ ಅಲ್ಲವೇ. ನಿನಗೆ ನಾನು ಕೆಲಸ ಮಾಡಿಕೊಡುತ್ತೇನೆ ನನಗೆ ನೀನು ಎಷ್ಟು ಕೊಡುತ್ತಿಯ ಅನ್ನೋ ಮನೋಭಾವ ಎಲ್ಲ ರಾಜಕೀಯ ವ್ಯಕ್ತಿಗಳಲ್ಲಿ ಬಂದುಬಿಟ್ಟಿದೆ. ಚುನಾವಣೆಗೆ ಕೋಟಿ ಕೋಟಿ ಸುರಿದು ಬರುವುದೇ, ಇಲ್ಲಿ ನೂರಾರು ಕೋಟಿ ಲೂಟಿ ಹೊಡೆಯಲು ಎಂದು ಮೊದಲೇ ನಿರ್ಧರಿಸಿದಂತಿದೆ. ಒಂದು ಉದಾಹರಣೆ ನಮ್ಮ ವಾರ್ಡ್ ಎಲೆಕ್ಷನ್ ಗೆ ಒಂದು ಪಕ್ಷದ ಅಭ್ಯರ್ಥಿ ಏನೇನು ನೀಡಿದ್ದ ಗೊತ್ತೇ?? ಮೂಗು ಬಟ್ಟು(ಚಿನ್ನದ್ದು), ಅಕ್ಕಿ ಮೂಟೆ, ಮತ್ತು ಒಂದು ಓಟಿಗೆ 1000 ರು. ಅವನ ಚುನಾವಣ ವೆಚ್ಚ 50 ಲಕ್ಷವಂತೆ, ಭಗವಂತಾ....!! ಅಷ್ಟು ಹಣ ಖರ್ಚು ಮಡಿದ ಮೇಲೆ, ಅವನು ವಾರ್ಡ್ ನ ಅಭಿವೃದ್ಧಿಗಾಗಿ ಬರುವ ಹಣವನ್ನು ಪೂರ್ತಿಯಾಗಿ ಅದಕ್ಕೇ ಬಳಸುತ್ತಾನೆಂಬ ನಂಬಿಕೆ ಯಾವ ನಾಗರಿಕನಿಗೂ ಇರುವುದಿಲ್ಲ. ಆದರೆ ಅವನು ಕೊಡುವ ಸಮಯದಲ್ಲಿ ಎಲ್ಲರು ನಾ ಮುಂದು ತಾ ಮುಂದು ಎಂದು ತೆಗೆದುಕೊಳ್ಳುತ್ತಾರೆ. ನಮ್ಮ ಜನರಲ್ಲೂ ಅವನು ಗೆದ್ದಮೇಲೆ ಕೆಲಸ ಮಾಡುವುದಿಲ್ಲ ಎಂದು ಖಾತ್ರಿಯಾಗಿದೆ, ಅದಕ್ಕೆ ಚುನಾವಣೆ ಸಮಯದಲ್ಲೇ ಎಷ್ಟು ಬರುತ್ತೋ ಅಷ್ಟೂ ಎಲ್ಲ ಪಾರ್ಟಿಗಳಿಂದ ಕಿತ್ತುಬಿಡೋಣ ಎಂಬ ಅಸೆ ಬುರುಕುತನ, ಇಲ್ಲೂ ಸಹ ಭ್ರಷ್ಟಾಚಾರವನ್ನು ಅನುಕೂಲ ಸಿಂಧುವಾಗಿ ಬಳಸಿಕೊಳ್ಳುತಿದ್ದಾರೆ.
ಇನ್ನು ಕೇಂದ್ರ ಸರ್ಕಾರದ್ದು, 2G ಹಗರಣ, CWG ಹಗರಣ, ಮಹಾರಾಷ್ಟ್ರದ ಆದರ್ಶ್ ಸೊಸೈಟಿ ಹಗರಣ ಎಷ್ಟು ಬೇಕು ಸ್ವಾಮಿ ಎಲ್ಲ ಹಗರಣಗಳಿಗು ಮುಲ ಕಾರಣ ಚುನಾಯಿತ ಪ್ರತಿನಿಧಿಗಳು ತಾವು ಜನರಿಂದ ಆರಿಸಲ್ಪಟ್ಟ ನಾಯಕರು ಎಂಬುದನ್ನು ಮರೆತು. ಎಲ್ಲಾ ವ್ಯವಹಾರಗಳನ್ನು ಮಾಡುವ ಏಜೆಂಟ್ ಗಳು ಎಂದುಕೊಂಡಿದ್ದಾರೆ. ನಮ್ಮ corporate ಜನ ಅಂದರೆ ಬಿಸಿನೆಸ್ಮೆನ್ ಗಳು. ಇಂತಹ ದಲ್ಲಾಳಿಗಳನ್ನು. ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳುತ್ತಾರೆ. ಅವರಿಗೇನು ಹಣ ಸಂಪಾದನೆ ಆದರೆ ಅಷ್ಟೇ ಸಾಕು. ಸಾಮಾನ್ಯ ಜನರ ಬಗ್ಗೆ ಚಿಂತಿಸುವುದಕ್ಕೆ ಅವರೇನು ಬೀದಿ ಕೊಳಾಯಿಗಳಲ್ಲಿ ಕುಡಿಯುವ ನೀರಿಗೆ ಎಲ್ಲರ ಜೊತೆ ಜಗಳವಾಡುವವರಲ್ಲ, ಮನೆಯಲ್ಲಿ ಎಲ್ಲಿ ನಲ್ಲಿ ತಿರುಗಿಸಿದರೆ ಅಲ್ಲಿ ನಿರು ಬರುತ್ತದೆ. ಮನೆಯ ಬಳಿಯ ಕರೆಂಟ್ ಕಂಬದಲ್ಲಿ ತೊಂದರೆ ಆದರೆ ಲಂಚ ಕೊಟ್ಟು ಕಂಬ ಹತ್ತಿಸೋಕೆ ಲೈನ್ ಮ್ಯಾನ್ ಕರೆತರಬೇಕಿಲ್ಲ, ಅವರಿರುವ ಜಾಗದಲ್ಲಿ ೨೪ ಘಂಟೆ ಪವರ್ ಇರುತ್ತದೆ. ಇನ್ನು ಇಂತಹ ಉದಾಹರಣೆಗಳು ಹಲವು....
ಈಗ್ಗೆ ಈ ಭ್ರಷ್ಟಾಚಾರದ ವಿರುದ್ಧ ಅಣ್ಣ ಹಜಾರೆ ಅವರು ನಿರಶನ ಕೈಗೊಂಡಿದ್ದಾರೆ, ಆದರೆ ಅವರ ನಿರಶನದಿಂದ ಮಾತ್ರ ನಮ್ಮ ದೇಶ ಬದಲಾಗುವುದಿಲ್ಲ. ಅದು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಒಂದು ದಾರಿ ಅಷ್ಟೇ. ಅದರಲ್ಲಿ ಸ್ವಲ್ಪವಾದರೂ ಯಶ ಕಂಡರೆ ಅವರ ನಿರಶನ ನಡೆಸಿದ್ದಕ್ಕೂ ಒಂದು ಅರ್ಥವಿರುತ್ತದೆ. ಆದರೆ ಈ ಅವಕಾಶವಾದಿ ರಾಜಕಾರಿಣಿಗಳು ಯಾವ ಯಾವ ರೀತಿ ಉಸರವಲ್ಲಿಯಂತೆ ಬಣ್ಣ ಬದಲಿಸುತಿದ್ದಾರೆ ಎಂಬುದನ್ನು ನೀವೇ ಗಮನಿಸಿದ್ದೀರಿ. ಭ್ರಷ್ಟಾಚಾರ 1947 ಆಗಸ್ಟ್ 15 ರಂದೇ ಹುಟ್ಟಿದೆ ಅಗಲಿಂದಲೇ ಇದರ ಬೇರನ್ನು ಬೆಳೆಯಲು ಬಿಡಬಾರದಿತ್ತು ಆದರೆ ಅದು ಈಗ ಬೃಹದಾಕಾರವಾಗಿ ಬೆಳೆದಿದೆ. ಸಾಧ್ಯವಾದಷ್ಟು ಹೋರಾಡೋಣ. ನಿಜವಾದ ಹೋರಾಟ ನಾವು ನಮ್ಮ ಅನುಕೂಲತೆಯ ಆಸೆಯ ಮನಸಿನ ಮೇಲೆ ನಡೆಸಬೇಕು. ಪಹಣಿಗೆ ಮೂರೂ ಘಂಟೆ ನಿಂತರು ಪರವಾಗಿಲ್ಲ ಲಂಚ ಕೊಡುವುದು ಬೇಡ, ನನ್ನೆಷ್ಟು ಸಲಿ reject ಮಾಡಿದರು ಒಮ್ಮೆ ಸೆಲೆಕ್ಟ್ ಮಾಡಿ ಪರವಾನಗಿ ಕೊಟ್ಟೇ ಕೊಡುತ್ತಾನೆ ಎಂಬ ಛಲ ನಮ್ಮಲ್ಲಿ ಬರಬೇಕು.ರಾಜಕಾರಿಣಿಗಳನ್ನು ಆರಿಸುವಾಗ ಬಹಳ ಜೋಪಾನವಾಗಿ ಆಯ್ಕೆ ಮಾಡಬೇಕು. ಇಷ್ಟೆಲ್ಲಾ ಮಾಡಿದರೆ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಮ್ಮ ಸೇವೆ ಇರುತ್ತದೆ.
ಸರಿ ಗೆಳೆಯರೇ, ಸಧ್ಯ ಅಣ್ಣ ಅವರ ಹೋರಾಟಕ್ಕೆ ಬೆಂಬಲ ಕೊಡೋಣ ನಮ್ಮ ಕೈಲಿ ಎಷ್ಟು ಸಾಧ್ಯವೋ ಅಷ್ಟು ಹೋರಾಟದಲ್ಲಿ ಪಾಲ್ಗೊಳ್ಳೋಣ ಏನಂತೀರಿ.........???????
ನೀವು ಕೂಡ ಒಂದಲ್ಲ ಒಂದು ಜಾಗದಲ್ಲಿ ಭ್ರಷ್ಟಾಚಾರವನ್ನು ನಿಮ್ಮ ಅನುಕೂಲತೆಗೊಸ್ಕರ ಬೆಂಬಲಿಸಿರುತ್ತೀರಿ. ಹೌದು ತಾನೆ ಎದೆ ಮುಟ್ಟಿಕೊಂಡು ಹೇಳಿ......??? :) :)
**********************************************************************

Tuesday, August 16, 2011

ತರಚಿದ ಗಾಯ

ಮೊಣಕೈ ಮಂಡಿಗಳಿಗೆ ತರಚಿದ ಗಾಯ
ಬೀಳಿಸಿದ ಗೆಳೆಯ ಕ್ಷಣದಲ್ಲೇ ಮಾಯಾ
ದೂರಲು ಓದುವೆ ನಾ ಅಮ್ಮನ ಬಳಿಗೆ
ಅಮ್ಮನೂ ಬಡಿಯುವಳು ನೋಯುತಲಿ ಒಳಗೆ

ಕಣ್ಣಲ್ಲಿ ಸಾವಿರ ಕನಸುಗಳ ಬೆಸೆದು
ಪದವಿಯ ಪರಿಧಿಗೆ ದರ್ಪದಲಿ ನಡೆದು
ಗೆಳುವೆಂಬ ಕುದುರೆಯ ವೇಗದಲಿ ಹೊಡೆದೆ
ಪದವಿಯ ನದಿಯನು ಈಜಿ ದಡ ಸೇರಿದೆ

ಹಗಲೆನದೆ ಇರುಳೆನದೆ ದಿನಗಳನು ಕಳೆದು
ನೆತ್ತರಿನ ವೇಗವನ್ನು ಆಗಾಗ ತಡೆದು
ಸುತ್ತಲಿನ ಪರಿಸರವ ಕೆಲವೊಮ್ಮೆ ಮರೆತೆ
ಕೆಟ್ಟವರ ಸಖ್ಯವು ವಿಷವೆಂದು ಅರಿತೆ

ಆಕಾಶಕೆ ತಲೆ ಎತ್ತಿ ಸುರ್ಯಣನೆ ದಿಟ್ಟಿಸಿ
ಮೋಡದ ಮರೆಗೋಗು ಎಂದೊಮ್ಮೆ ನಿಂದಿಸಿ
ನೇಸರದಿ ನಾದವನು ಮಿಡಿಸುವವನಲ್ಲ
ಅಣ್ಣ ನಿಡುವ ರೈತ ನನಾಗಲಿಲ್ಲ

ತಲೆಯನ್ನು ನೆಲದಿಂದ ಮೇಲಕ್ಕೆ ಎತ್ತದೆ
seniors ನ ಮಾತಿಗೆ ಎದುರನ್ನು ಆಡದೆ
ಶನಿವಾರ ಭಾನ್ವಾರ ರಜವನ್ನು ಮಾಡಿ
ಬೇರೆಲ್ಲ ದಿನದಂದು ಕೆಲಸದ್ದೆ ರಾಡಿ

ಸೂರ್ಯನ ದಿಟ್ಟಿಸಿ ಎಷ್ಟು ದಿನಗಳಾಯ್ತೋ
ಅಮ್ಮನಿಗೆ ಬೈಗುಳ ಎಲ್ಲಿ ಮರೆತೊಯ್ತೋ
ಪರಿಸರದಿ ಪದವಾಡೋ ದಿನಗಳು ಬರಲಿ
ಯುವಕರಿಗೆ ವ್ಯವಸಾಯ ಉತ್ಸಾಹ ತರಲಿ     

Thursday, August 11, 2011

ಕನಸುಗಳೇ ಕನಸುಗಳೇ

ಕನಸುಗಳೇ ಕನಸುಗಳೇ ಕೆದರುವಿರೇಕೆ ಮನವನ್ನು
ಕನವರಿಕೆ ಬರಿಸುವಿಕೆ ಕಾಡುವಿರೇಕೆ ನನ್ನನ್ನು
ಸಮಯದ ಪರಿವೇ ಇರದು
ಸಹನೆಗೆ ಮಿತಿಯೇ ಬರದು
ಮನಸಿನ ಸ್ವರದ ತಾಳ
ಮಿತಿ ಇರದ ಎದೆ ಬಡಿತದ ಮೇಳ
ಇದಕ್ಕೆಲ್ಲ ಕಾರಣ ಪ್ರಿತೀನೆ ಅಲ್ಲವೆ 
|| ಕನಸುಗಳೇ ಕನಸುಗಳೇ ||
 
ಕದ್ದು ನೋಡಲೇನು ನಿನ್ನ ತುಟಿಯಂಚಿನ ನಗುವ
ಲೋಕ ನನ್ನನು ಕಳ್ಳನೆಂದರು ಪರವಾಗಿಲ್ಲ
ಕೊಡುವೆಯೇನು ನೀನು ಪ್ರೀತಿ ಬೆರೆಸಿದ ಮಧುವ
ಪರದೇಸಿ ಹೃದಯಕೆ ಬೇರೆ ಏನ ಕೇಳಲು ತೋಚಲ್ಲ
ಗೊತ್ತಿಲ್ಲದ ಹೊಸ ಲೋಕಕೆ ಕರೆದುಕೋ ಗೆಳತಿ
ನನ್ನೀ ಪ್ರೇಮ ಲೋಕಕೆ ನಿನೋಬ್ಬಳೆ ಒಡತಿ
 
|| ಕನಸುಗಳೇ ಕನಸುಗಳೇ ||