Sunday, May 1, 2011

ಹುಡುಗರ ಮನಸು-5

       ಸಂಜೆ ಹೊತ್ತಿಗೆ ಮನೆಗೆ ಬಂದ ಪ್ರವೀಣನಿಗೆ ಮನಸಲ್ಲಿ ಏನೋ ಒಂದು ರೀತಿಯ ನಿರಾಳತೆ ಇತ್ತು. ಅಪ್ಪ ಅಮ್ಮ TV ನೋಡ್ತಾ ಕೂತಿದ್ರು ತಂಗಿ ಪೂಜ ಸಹ ಆಗ ತಾನೆ ಕಾಲೇಜ್ ನಿಂದ ಬಂದು ಕೂತಿದ್ಲು. ಮನೆಯೊಳಗೆ ಬಂದ ಪ್ರವೀಣ ಪೂಜ ನಿರು ತೊಗೊಂಡು ಬ ಅಂದ, ನೀರು ತರಲು ಎದ್ದ ಪುಜಾಳ ಜಡೆ ಎಳೆದು ಚೇಷ್ಟೆ ಮಡಿದ, ಮೊಬೈಲ್ ನ TV ಸ್ಟ್ಯಾಂಡ್ ಮೇಲೆ ಇಟ್ಟು ತಾನು ಅಪ್ಪನ ಪಕ್ಕ ಬಂದು ಕೂತ ಅದಕ್ಕೆ ಅಪ್ಪ ಏನೋ ಮಗನೆ ನಿನ್ ಹೆಂಡತಿನ TV ಮೇಲೆ ಕುಡಿಸಿ ಬಿಟ್ಟೆ ಇವತ್ತು ಅಂತ ರೇಗಿಸಿದರು ಅದಕ್ಕೆ ಪ್ರವೀಣ ಹೇ ಸುಮ್ನೆ ಇರಿ ಅಪ್ಪ ನೀವು ಅಂತ ಅಮ್ಮನ ನೋಡಿ ಏನಮ್ಮ ಸ್ಪೆಷಲ್ ಅಡುಗೆ ಮಾಡಿದ್ಯ ಇವತ್ತು, ಮಧ್ಯಾಹ್ನ ಊಟ ಮಾಡಕ್ ಆಗಿಲ್ಲ ಊಟ ಹಾಕು ಅಂದ ಅದಕ್ಕೆ ಅಮ್ಮ ನಿನಗಿಷ್ಟವಾದ ಬೆಂಡೆಕಾಯಿ ಸಾಂಬಾರ್ ಮಾಡಿದಿನೋ ಪ್ರವೀಣ ಏಳು ಊಟ ಮಾಡು ಅಂದ್ರು ಪ್ರವೀಣ ಅಲ್ಲೇ ಒಂದು ಚಾಪೆ ತೆಗೆದು ನೆಲದ ಮೇಲೆ ಕೂತ. ಅಪ್ಪ ಅಮ್ಮನಿಗೆ ಆಶ್ಚರ್ಯವಾಗಿತ್ತು ಯಾವಾಗ ನೋಡಿದರು ಮೊಬೈಲ್ ನಲ್ಲಿ ಮೆಸೇಜ್ ಮಾಡ್ಕೊಂಡು ಕುರ್ತಿದ್ದ ಮಗ ಅವತ್ತು ಮೊಬೈಲ್ ದೂರ ಇಟ್ಟಿದ್ದ, ಮನೆಗೆ ಬಂದ ತಕ್ಷಣ ಬ್ಯಾಗ್ ಬಿಸಾಕಿ ಉಟಾನು ಮಾಡದೇ ಮೊಬೈಲ್ ತೊಗೊಂಡು ಕಿವಿಗೆ ಇಟ್ಕೊಂಡು ರೂಮಿಗೆ ಹೋದರೆ ಮತ್ತೆ ಆಚೆ ಬರುತಿದ್ದಿದ್ದು ರಾತ್ರಿ ಊಟದ ಸಮಯಕ್ಕೆ , ಅಕಸ್ಮಾತ್ ಹೊರಗಡೆ ಹೋದರೆ ಯಾವ ರೋಡ್ ನಲ್ಲಿ ನಿಂತು ಮಾತಾಡ್ತಾ ಇದಾನೆ ಅನ್ನೋ ಅರಿವೇ ಇರ್ತ ಇರ್ಲಿಲ್ಲ ಆದ್ರೆ ಇವತ್ತು ಎಲ್ಲ ವಿಚಿತ್ರವಾಗಿದ್ಯಲ್ಲ ಅನ್ನೋದೇ ಅವರ ಯೋಚನೆ.
         ಊಟ ಮುಗಿದ ಮೇಲೆ ಪ್ರವೀಣ ತನ್ನ ಫ್ರೆಂಡ್ ಮಹೇಶನಿಗೆ ಫೋನ್ ಮಾಡ್ತಾನೆ ಎಲ್ಲಿದ್ಯಾ ಮಗ ಅಂತ ಮಾತಾಡ್ಕೊಂಡು ಅಲ್ಲೇ ಇರು ಬರ್ತೀನಿ ಅಂತ ಹೇಳಿ ಬೈಕ್ ಏರಿ ಅಪ್ಪ ರಾತ್ರಿ ಊಟದ ಟೈಮ್ ಗೆ ಬರ್ತೀನಿ ಅಂತ ಹೇಳಿ ಹೊರಟ. ಮಹೇಶನ ಮೀಟ್ ಮಡಿದ ಪ್ರವೀಣ ಹಾಗೆ ಅವರ ಫ್ರೆಂಡ್ಸ್ ಎಲ್ಲ ಮಾಮೂಲಾಗಿ ಕೂರುವ ಜಾಗಕ್ಕೆ ( ಅಡ್ಡ ) ಹೋಗಿ ಧಂ ಹೊಡಿತಾರೆ. ಅಲ್ಲಿ ಎಲ್ಲ ಫ್ರೆಂಡ್ಸ್ ಇವನ್ನ ನೋಡಿ ಏನ್ ಮಗ ಎಷ್ಟು ದಿನ ಅದಮೇಲೆ ನಿನ್ ದರ್ಶನ ಅಂತ ಕಿಚಾಯಿಸಿದ್ರು ಅದಕ್ಕೆ ಪ್ರವೀಣ ನಮ್ ಹುಡುಗರನ್ನ ಬಿಟ್ಟು ನ ಎಲ್ಲೋ ಹೋಗ್ಲಿ ಅಂತ ಅವರ ಜೊತೇನೆ ರಾತ್ರಿ ಸುಮಾರು 9 -30 ವರೆಗೂ ಇದ್ದು ಒಬ್ಬರನೊಬ್ಬರು ರೇಗಿಸ್ಕೊಂಡು  ಎಂಜಾಯ್ ಮಾಡ್ಕೊಂಡು ಮನೆಗೆ ಹೊರಟ. ಮನೆಗೆ ಬಂದ ಪ್ರವೀಣನ ನೋಡಿ ಅಪ್ಪ ಹೇಯ್ ಊಟ ಹಾಕೆ ಅಂದ್ರು ಪುಜ ತಟ್ಟೆ ಹಾಕಿದಳು ಮನೆಯವರೆಲ್ಲ ಒಟ್ಟಿಗೆ ಕೂತು ಮುಕ್ತ serial ನೋಡ್ತಾ ಊಟ ಮಾಡಿದರು ಅ ದಿನ ಪ್ರವೀಣನಿಗೆ    ಪ್ರತಿ ದಿನದಂತೆ ಇರಲಿಲ್ಲ, ಯಾಕೋ ಗೊತ್ತಿಲ್ಲ ತುಂಬಾ ಮಾತಾಡ್ತಾ ಇದ್ದ, ಎಲ್ಲರ ಜೊತೆ ತುಂಬಾ ನಗ್ತಾ ಇದ್ದ, ನಿರಾಳವಾಗಿ ಊಟ ಮಾಡಿದ, ಊಟ ಅದ ಮೇಲೆ ರೂಮಿಗೆ ಬಂದ ಪ್ರವೀಣನಿಗೆ ತಾನು 2 ವರ್ಷದಿಂದ ಯಾರದ್ದೋ ಗುಲಾಮನಾಗಿದ್ದೆ ಅನಿಸ್ತು ತನ್ನ ದಿನಚರಿ ನ ಬೇರೆಯವರು ಕಂಟ್ರೋಲ್ ಮಾಡ್ತಾ ಇದ್ರೂ ಅನ್ನೋ ವಿಷಯ ಫ್ಲಾಶ್ ಆಯಿತು. ಅದೇ ಗುಂಗಿನಲ್ಲಿ ಕಣ್ಣು ಮುಚ್ಚಿದ ಪ್ರವಿನನಿಗೆ ನಿರಾಳವಾದ ನಿದ್ದೆ ಬಂತು ಅ ನಿದಿರೆಲಿ ತನ್ನ ಎರಡು ವರ್ಷ ಹಿಂದಿನ ಜೇವನ ಕಣ್ಣಿಗೆ ಕಟ್ಟಿತ್ತು.

                                                     " ಎರಡು ವರೆ ವರ್ಷದ ಹಿಂದೆ "

                                                                                              ಮುಂದುವರೆಯುವುದು :-

Friday, April 29, 2011

ಹುಡುಗರ ಮನಸು-4

        ಬೆಳಗ್ಗೆ ಎದ್ದ ಪ್ರವೀಣ ದೇವರ ಫೋಟೋ ನೋಡಕ್ಕೆ ಮುಂಚೆ ತನ್ನ ಮೊಬೈಲ್ ಫೋನ್ ನೋಡಿದ ಸುಮಾರು 12 text message ಬಂದಿತ್ತು ಎಲ್ಲ forward messages ಕೊನೇಲಿ GM(good morning ), ಆದರೆ ಕಾವ್ಯ ಇಂದ ಒಂದೂ ಸಂದೇಶ ಬಂದಿರಲಿಲ್ಲ . ಪ್ರವಿಣನೆ ಅವಳಿಗೆ ಬೆಳಗಿನ ಶುಭಾಶಯಗಳನ್ನ ತಿಳಿಸುತ್ತ ಒಂದು ಸಂದೇಶ ಕಳಿಸಿದ ಆದ್ರೆ reply ಬಂದಿಲ್ಲ. ಅಪ್ಪ ನೀರು ಕಾಯಿಸಿದ್ರು ಸ್ನಾನ ಮಡಿ ತಿಂಡಿ ಮುಗಿಸಿ ಕಾಲೇಜ್ ಗೆ ಹೊರಟ ಆಗಾಗ ಮೊಬೈಲ್ ನೋಡ್ತಾನೆ ಇದ್ದ ಕಾವ್ಯಳ ಒಂದು ಮೆಸೇಜ್ ಗಾಗಿ ಬಕಪಕ್ಷಿಯಂತೆ ಕಾಯ್ತಾ ಇದ್ದ. ಪ್ರವಿಣನಿಗೆ ಕ್ಲಾಸ್ ನಡೀತಾ ಇತ್ತು ಆಗ ಕಾವ್ಯ ಇಂದ ಒಂದು ಮೆಸೇಜ್ ಬಂತು. ಪ್ರವಿಣನಿಗೆ ಪ್ರಾಣ ಹೋಗುವಾಗ ನೀರು ಸಿಕ್ಕಷ್ಟು ಸಂತೋಷವಾಯ್ತು ಮೆಸೇಜ್ ಅಲ್ಲಿ "ಎಲ್ಲಿದ್ದಿಯ ನಾನು ಕ್ಯಾಂಟೀನ್ ಹತ್ರ ಕಾಯ್ತಾ ಇದೀನಿ ಬೇಗ ಬಾ" ಎಂದಿತ್ತು ಆದ್ರೆ ಪ್ರವಿಣನಿಗೆ ಕ್ಲಾಸ್ ಬಿಟ್ಟು ಹೋಗೋ ಸಾಧ್ಯತೆ ಇರ್ಲಿಲ್ಲ ಅದಕ್ಕೆ ಪ್ರವೀಣ ಇನ್ನು 20 ನಿಮಿಷ wait ಮಾಡು ಕ್ಲಾಸ್ ಬಿಡತ್ತೆ ಬಂದ್ ಬಿಡ್ತೀನಿ ಅಂತ reply ಮಾಡಿದ ಅದಕ್ಕೆ ಕಾವ್ಯ ಅದೆಲ್ಲ ಆಗಲ್ಲ ಈಗಲೇ ಬಂದ್ರೆ ಸಿಕ್ತೀನಿ ಇಲ್ಲ ಅಂದ್ರೆಮನೆಗೆ ಹೋಗ್ತೀನಿ ನಂಗೆ ಕ್ಲಾಸ್ ಇಲ್ಲ ಅಂದ್ಲು. ಪ್ರವೀಣ ತುಂಬಾ ಯೋಚನೆ ಮಡಿ ಸರ್ ಹತ್ರ ಸರ್ ತುಂಬಾ ತಲೆ ನೋವ್ತ ಇದೆ permission ಕೊಡಿ ಸರ್ ಅಂತ ಕೇಳದ ಅದಕ್ಕೆ ಮೇಷ್ಟ್ರು ನಿರಾಕರಿಸಿ ಕೂಡಿಸಿದರು , ಮತ್ತೆ ಕಾವ್ಯ ಮೆಸೇಜ್ ಬಂದಿತ್ತು "ಇನ್ನು ೫ ನಿಮಿಷ ಕಾಯ್ತೀನಿ ಇಲ್ಲ ಅಂದ್ರೆ ಹೋಗ್ತೀನಿ " ಪ್ರವೀಣ ಕಾವ್ಯ ಜಸ್ಟ್ ಹತ್ತು ನಿಮಿಷ ಅಷ್ಟೇ ಪ್ಲೀಸ್ ಹೋಗಬೇಡ ಅಂತ reply ಮಾಡಿದ. ಕಡೆಗೆ ಕ್ಲಾಸ್ 5 ನಿಮಿಷ ಮುಂಚೆನೇ lucturer ಬಿಡ್ತಾರೆ ಕ್ಲಾಸ್ ಬಿಟ್ಟ ತಕ್ಷಣ ಪ್ರವೀಣ ಕ್ಯಾಂಟೀನ್ ಕಡೆ ಓಡುತ್ತಾನೆ ಆದ್ರೆ ಅಲ್ಲಿ ಕಾವ್ಯ ಇರಲ್ಲ ಅಲ್ಲೇ ಇದ್ದ ಅವಳ classmate ಹತ್ರ ಕೇಳ್ತಾನೆ ಅದಕ್ಕವರು ೫ ನಿಮಿಷ ಮುಂಚೆ ಬಸ್ ಸ್ಟಾಪ್ ಹತ್ರ ನೋಡ್ದೆ ಅಂತಾಳೆ . ಪ್ರವೀಣ ಬಸ್ ಸ್ಟಾಪ್ ಕಡೆ ಒಡ್ತಾ ಇದ್ದ ಹಾಗೆ ಓಡೋವಾಗ ತನ್ನ parents ನೆನಪಾದರು ತನ್ನ ಫ್ರೆಂಡ್ಸ್ ನೆನಪಾಗ್ತಾರೆ ಅವರೆಲ್ಲ ತನಗೋಸ್ಕರ ಇರಬೇಕಾದ್ರೆ ತನು ಯಾಕೆ ಇವಳಿಗೋಸ್ಕರ ನಾಯಿ ತರ ಓಡ್ತಾ ಇದೀನಿ ಅನ್ಸಿಬಿಡ್ತು 
ಓಡ್ತ ಇದ್ದ ಪ್ರವೀಣ ಒಂದು ಕ್ಷಣ ನಿಂತು ತಾನು ಅನುಭವಿಸುತ್ತಿರುವ ಮಾನಸಿಕ ಹಿಂಸೆ ಬಗ್ಗೆ ಯೋಚನೆ ಮಾಡಿದ ತಕ್ಷಣ ಕಾವ್ಯಗೆ ಫೋನ್ ಮಾಡಿದ ಕಾವ್ಯ recieve ಮಾಡಿ ನಿಂದು ಯಾವಾಗಲು ಇದೆ ಗೋಳು ಲೇಟ್ ಲೇಟ್ ಹುಡುಗಿನ ಸರಿಯಾಗಿ ನೋಡ್ಕೋಳಕ್ ಆಗದೆ ಇದ್ದ ಮೇಲೆ girlfriend ಏನಕ್ಕ ಬೇಕು ನಿಂಗೆ ನಾನು ಮನೆಗೆ ಹೋಗ್ತಾ ಇದೀನಿ ಬೈ ಅಂದ್ಲು ಅದಕ್ಕೆ ಪ್ರವೀಣ ಇನ್ನು ಮೇಲೆ ನನಗಾಗಿ ಕಾಯೋ ಅಗತ್ಯ ಇಲ್ಲ ಕಾವ್ಯ ಅಂದ ಅದಕ್ಕೆ ಕಾವ್ಯ ಅಂದ್ರೆ ಏನು ನಿನ್ನ ಮಾತಿನ ಅರ್ಥ ಅಂದ್ಲು ಆಗ ಪ್ರವೀಣ ಒಂದು ಮಾತು ಹೇಳಿ ಫೋನ್ disconnect ಮಾಡಿದ 

                                                           " LETS  BREAK UP "

                                                                                               ಮುಂದುವರೆಯುವುದು:- 

ಹುಡುಗರ ಮನಸು-3

         ಮನೆಗೆ ಬಂದ ಪ್ರವೀಣ ಮನೆಯವರ ಜೊತೆ ಕೂತು ಊಟ ಮಾಡಿದ, ಅಪ್ಪ ತಮಾಷೆ ಮಾಡ್ತಿದ್ರು ಪ್ರವಿಣನ ತಂಗಿ ಪೂಜನ ರೇಗಿಸ್ತ ಇದ್ರು, ಪ್ರವಿಣನಿಗೆ ನಗು ಬರದೆ ಇದ್ರೂ ಸಹ ನಗೋ ಹಾಗೆ ನಟಿಸ್ತ ಇದ್ದ ಹಾಗೆ ನಗ್ತಾ ಇದ್ದವರನ್ನ ನೋಡಿ ತನ್ನ ಮತ್ತು ಕಾವ್ಯ ಬಗ್ಗೆ ಯೋಚನೆ ಮಾಡಿ ನಮ್ಮ ಅಪ್ಪ ಅಮ್ಮ ತಂಗಿ ಎಷ್ಟು ಸಂತೋಷವಾಗಿದ್ದರೆ ಅಂದುಕೊಂಡ, ರಾತ್ರಿ ಹತ್ತು ಮೂವತ್ತು ಆಗಿತ್ತು ಪ್ರವಿಣನ ಮೊಬೈಲ್ ಗೆ ಫೋನ್ ಬಂತು ಪ್ರವಿಣನ ಅಪ್ಪ ಯಾರೋ ಇಷ್ಟು ಹೊತ್ತಲ್ಲಿ ಅಂತ ಕೇಳಿದ್ರು ಅದಕ್ಕೆ ಪ್ರವೀಣ ವಿನಯ್ ಅಪ್ಪ ಅಂತ ಹೇಳಿ phone recieve ಮಾಡಿದ ಮಾತಾಡ್ತಾ ಮಾತಾಡ್ತಾ ಆಯಿತು boss ಬರ್ತೀನಿ ಅಂತ ಹೇಳಿ ಫೋನ್ ಇಟ್ಟ. ನಂತರ ಅಮ್ಮ 10 ನಿಮಿಷ ಬಂದೆ ಒಂದು ವಾಕ್ ಹೋಗಿ ಬರ್ತೀನಿ ಅಂದು ಹೊರ ಹೊರಟ. ಮಗ 10 -30 ರಲ್ಲಿ ಹೊರಗೆ ಹೋಗ್ತಾ ಇದ್ದಾನಲ್ಲ ಅನ್ನೋ ಸ್ವಲ್ಪ ಆತಂಕ ಸಹ ಅವನ ತಂದೆ ತಾಯಿಗಿರಲಿಲ್ಲ ಅಷ್ಟು ನಂಬಿಕೆ ಇತ್ತು ಪ್ರವೀಣ ನ ಮೇಲೆ, ವಿನಯ್ ನ ಮೀಟ್ ಅದ ಪ್ರವೀಣ ಏನ್ ಬಾಸ್ ಇಷ್ಟ ಹೊತ್ತಲ್ಲಿ ಅಂದ, ಅದಕ್ಕೆ ವಿನಯ್ ಹಾಗೆ ಮಗ ದಂ ಹೊಡೆಯೋಣ ಬಾ ಅಂತ ಇಬ್ರು ಹೋಗಿ cigarate ಸೇದಿ ಅವರವರ ಮನೆಗಳಿಗೆ ಹೋದರು. ಮನೆಗೆ ಬಾರೋ ಅಷ್ಟರಲ್ಲಿ 11 -30 ಆಗಿತ್ತು ಎಲ್ರೂ ಮಲಗಿದ್ರು, ಪ್ರವೀಣ ಕೂಡ ರೂಮಿಗೆ ಹೋಗಿ ಮಲ್ಕೊಂಡ ಯಾಕೋ ನಿದ್ರೆ ಬರ್ತಾ ಇರ್ಲಿಲ್ಲ, ಕಣ್ಣ ಮುಂದೆ ವಿನಯ್ ಬಂದಿದ್ದ ಅವನು ಅ ರಾತ್ರಿಲಿ ಅರ್ಧ ಘಂಟೆ ತನ್ನ problems ನ ಹೇಳ್ಕೊಂಡಿದ್ದ. ವಿನಯ್ ಗೆ ನನ್ನ ಹತ್ರನೇ ಅ problem share ಮಾಡ್ಕೊಬೇಕು ಅಂತ ಯಾಕೆ ಅನಿಸ್ತು ಅಂತ ಪ್ರವೀಣ ಯೋಚನೆ ಮಡಿದ, ತನ್ನ ಮೇಲೆ ವಿನಯ್ ಗೆ ಎಷ್ಟು ನಂಬಿಕೆ ಅಂತ ತನಗೆ ತಾನೆ ಹೆಮ್ಮೆ ಪಟ್ಕೊಂಡ ಅಷ್ಟರಲ್ಲೇ ಅವನಿಗೊಂದು text message ಬಂದಿತ್ತು ದೂರದ ದಾಯಾದಿ ಅಣ್ಣ forward message ಕಳಿಸಿದ್ದ. ಪ್ರವಿಣನಿಗೆ ಮತ್ತು ಖುಷಿ ಆಯಿತು ತಕ್ಷಣ ಅವನಿಗೆ ಕಾವ್ಯ ನೆನಪಾಯಿತು ಅವಳು ಅನ್ನೋ ಮಾತುಗಳು ಅವಳು ಬೈದು ಕಳಿಸಿರೋ message ಗಳು ಅವನನ್ನ ಕಾಡಕ್ಕೆ ಪ್ರಾರಂಭ ಆಯಿತು ಅ ಕಹಿ ನೆನಪಲ್ಲೇ ನಿದಿರೆಗೆ ಜಾರಿದ್ದೆ ಪ್ರವೀಣ ನಿದಿರೆಲು ಕಾವ್ಯ ಕಳಿಸಿದ್ದ ಅ ಮೆಸೇಜ್ ಗಳು ಕಾಡ್ತಾ ಇತ್ತು ನಾ ಏನ್ ತಪ್ಪು ಮಾಡಿದ್ದೆ ಕಾವ್ಯ I HATE YOU ಅಂದ್ಯಲ್ಲ ಕಾವ್ಯ ಅಂತ ನರಳ್ತಾ ಕನವರಿಸುತ್ತ ಇದ್ದ ಪ್ರವೀಣ. ಆದರೆ ಅವನಿಗೆ ಗೊತ್ತಿಲ್ಲದಂತೆ ನಿರು ಕುಡಿಯಲು ಎದ್ದಿದ್ದ ಪೂಜಾ ಅಣ್ಣನ ವ್ಯಥೆ ನೋಡಿ ಮನದಲ್ಲೇ ಮರುಗಿದಳು 


                                                                                                  ಮುಂದುವರೆಯುವುದು :-

Thursday, April 28, 2011

ಹುಡುಗರ ಮನಸು-2

       ಅಂದಹಾಗೆ ಪ್ರವೀಣನ ಜೊತೆ ಮಾತನಾಡುತಿದ್ದಿದ್ದು ಅವನ girlfriend ಕಾವ್ಯ. ಅವರಿಬ್ಬರು 2 ವರ್ಷ ಆಗಿತ್ತು commit  ಆಗಿ ಪ್ರತಿದಿನ ಫೋನ್ ನಲ್ಲಿ ಒಂದು ಸಾರಿ  ಅದ್ರು ಮಾತಾಡ್ತಾ ಇದ್ರೂ ಕಾವ್ಯ ತನ್ನ ಫ್ರೀ ಮೆಸೇಜ್ ಪೂರ್ತಿ ಪ್ರವೀಣನಿಗೆ ಕಳಿಸ್ತ ಇದ್ಲು ಪ್ರವೀಣ ಕೂಡ ಹೇಗೋ ಕಷ್ಟ ಪಟ್ಟು 100 ಕ್ಕಿಂತ ಹೆಚ್ಚು ಮೆಸೇಜ್ ಕಳಿಸ್ತ ಇದ್ದ ತನು ಬೆಳಗಿನ ಜಾವ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವ ತನಕ ಎಲ್ಲ ವಿಷಯಗಳನ್ನು ಒಂದೂ ಬಿಡದ ಹಾಗೆ update ಮಾಡ್ತಿದ್ದ, ಸಮಯ ಸಿಕ್ಕಾಗೆಲ್ಲ ಅವಳನ್ನ meet ಮಾಡ್ತಿದ್ದ ಒಟ್ನಲ್ಲಿ ಇಬ್ರು ಜೋಡಿ  ಹಕ್ಕಿಗಳಾಗಿದ್ರು ಎರಡು  ವರ್ಷದಿಂದ. 

       ಆದ್ರೆ ಕೆಲವು ತಿಂಗಳುಗಳ ಹಿಂದೆ ಪ್ರವೀಣ Msc ಸೇರ್ಕೊಂಡ ಕಾವ್ಯ ಇನ್ನು 1st  Bsc ಓದ್ತಾ ಇದಾಳೆ ಆಗ್ಲಿಂದ ಸ್ವಲ್ಪ ಇವರ ಮಧ್ಯೆ ಬಿರುಕಾಗಿದೆ. ಅದ್ರು ಏನು ಆಗದೆ ಇರೋ ಹಾಗೆ ಪ್ರವೀಣ ಮತ್ತೆ ಕಾವ್ಯ ಎಲ್ಲರ ಎದುರಿಗೂ ನಟಿಸ್ತ ಇದ್ರೂ. ಇ ನಡುವೆ ಒಂದು ದಿನ ಪ್ರವೀಣ ಕಾವ್ಯ ಗೆ ಫೋನ್ ಮಾಡಿ ಮಾತಾಡ್ತಾ ಇದ್ದ ಸುಮಾರು 1ಘಂಟೆ ಮಾತಾಡಿದ್ದ, ಕಾವ್ಯ ಅದ್ರು ಇನ್ನು ಮಾತಾಡೋ ಇನ್ನು ಮಾತಾಡೋ ಅಂತ ಕೇಳ್ತಾನೆ ಇದ್ಲು ಯಾಕೆ ಅಂತ ಗೊತ್ತಿಲ್ಲ ಅವಳಿಗೆ ಅವನ ವಾಯ್ಸ್ ಕೇಳಬೇಕು ಅಂತ ಅಸೇನೋ ಅಥವಾ ನಂ ಹುಡುಗ ನ ಹೇಳ್ದಂಗೆ ಕೇಳ್ತಾನೆ ಅನ್ನೋ ಅಹಂಕರಾನೋ ಗೊತ್ತಿಲ್ಲ ಒಟ್ನಲ್ಲಿ ಮಾತಾಡು ಮಾತಾಡು ಅಂತಿದ್ಲು ಅಷ್ಟರಲ್ಲೇ ಪ್ರವಿಣನಿಗೆ  ಮತ್ತೊಂದು ಕಾಲ್ ಬಂತು ಮೊದ್ಲು ಯಾರು ಅಂತ ನೋಡಿಲ್ಲ ಆದ್ರೆ ಮತ್ತೆ ಬಂದಾಗ ನೋಡಿದ ಅಮ್ಮ ! ತಕ್ಷಣ ಗಾಬರಿಯಾಗಿ ಕಾವ್ಯ ಒಂದು ನಿಮಿಷ ಅಂತ disconnect ಮಾಡಿ recieve ಮಾಡಿದ. ಅ ಕಡೆ ಇಂದ ಪ್ರವೀಣನ ಅಮ್ಮ ಲೋ ಪ್ರವೀಣ ಎಲ್ಲೋ ಇದ್ಯಾ 10 ಘಂಟೆ ಆಯಿತು ಇನ್ನು ಮನೆಗೆ ಬಂದಿಲ್ಲ, ಊಟಕ್ಕೆ ಕಾಯ್ತಾ ಇದಿವೋ ಅಂದ್ರು ಅದಕ್ಕೆ ಪ್ರವೀಣ ಅಮ್ಮ ಬಂದ್ಬಿಟ್ಟೆ ಇನ್ನೇನು 10 ನಿಮಿಷ ಅಂತ ಫೋನ್ ಕಟ್ ಮಡಿ ಮತ್ತೆ ಕಾವ್ಯಗೆ ಫೋನ್ ಮಾಡಿದ, ಕಾಲ್ recieve ಮಾಡಿದ ಕಾವ್ಯ ಇಷ್ಟ ಹೊತ್ತಲ್ಲಿ ಯಾವಳ್ ಫೋನ್ ಮಾಡಿದ್ಲು ನಿಂಗೆ ಅಂದ್ಲು ಪ್ರವಿಣನಿಗೆ ಚಪ್ಪಲಿಲಿ ಹೂಡೆದ ಹಾಗಾಯಿತು, ಕಾವ್ಯ ಅಮ್ಮನ ಜೊತೆ ಮಾತಾಡ್ತಿದ್ದೆ ಅಂದ, ಅದಕ್ಕವಳು ನ ನಂಬಬೇಕ ಅಂದ್ಲು ಪ್ರವಿಣನಿಗೆ ತುಂಬಾ ಬೇಜಾರಾಗಿ ಕಾಲ್ disconnect ಮಾಡಿದ. ಕಾವ್ಯ ಮತ್ತೆ ಫೋನ್ ಮಾಡಿದ್ಲು ಪ್ರವೀಣ recieve ಮಾಡಲಿಲ್ಲ ಒಂದು ನಿಮಿಷ ಅದಮೇಲೆ ಪ್ರವಿಣನ inbox ಅಲ್ಲಿ ಒಂದು ಮೆಸೇಜ್ ಶಬ್ದ ಮಾಡಿತ್ತು ಅದು ಕಾವ್ಯ ಇಂದ 

                                                         " I HATE U "

                                                                                                    ಮುಂದುವರೆಯುವುದು :-  

Wednesday, April 27, 2011

ಹುಡುಗರ ಮನಸು-1

        ಪ್ರವೀಣನ ಮೊಬೈಲ್ ಬ್ಯಾಟರಿ ಡೌನ್ ಆಗಿತ್ತು, ಅಷ್ಟೇ ಅಲ್ಲ currency ಕೂಡ ಮುಗಿದು ಹೋಗೋ ಹಂತಕ್ಕೆ ಬಂದಿತ್ತು, ಅದ್ರು ಅಲ್ಲೇ ಓಡಾಡ್ತಾ ಮಾತಾಡ್ತಾ ಇದ್ದ ಅದೇ ರಸ್ತೆಲೆ ಮತ್ತೆ ಮತ್ತೆ ಓಡಾಡ್ತಾ ಇದ್ದ. ಅಲ್ಲೇ ಇದ್ದ ಒಬ್ಬ ವ್ಯಕ್ತಿ ಇವನನ್ನೇ observe ಮಾಡ್ತಾ ಇದ್ದರು ಮನಸಲ್ಲೇ ಏನು ಇ ಹುಡುಗ ಇಷ್ಟು ಮಾತಾಡ್ತಾ ಇದಾನೆ ಅಂತ ಅಂದುಕೊಂಡು ಕೊನೆಗೆ ಒಂದು ಮಾತು ಕೆಲೆಬಿಡೋಣ ಅಂತ ಹೇ ಮರಿ ಏನಪ್ಪಾ ಇದೆ ರೋಡಲ್ಲಿ ಆಗ್ಲಿಂದ ಮೂರು ಸರಿ ಓಡಾಡ್ತಾ ಇದ್ದೀಯ ಏನ್ ವಿಷ್ಯ ಅಂದರು, ಅದಕ್ಕೆ ಪ್ರವೀಣ ಸ್ವಲ್ಪ ಭಯದಿಂದನೆ ಏನಿಲ್ಲ ಅಂಕಲ್ ಫ್ರೆಂಡ್ ಬರ್ತೀನಿ ಅಂದಿದ್ದ ಅವನಿಗಾಗಿ ಕಾಯ್ತಾ ಇದೀನಿ ಅದೇ ಮಾತಾಡ್ತಾ ಇದ್ದೆ ಫೋನಲ್ಲಿ ಅಂದ. ಅದಕ್ಕೆ ಅ ವ್ಯಕ್ತಿ ಫ್ರೆಂಡ್ ಅ ಇಲ್ಲ girlfriend ಅ ಅಂದ್ರು ಪ್ರವೀಣ ಗೆ ಸ್ವಲ್ಪ ನಾಚಿಕೆ ಆಯಿತು ಅದ್ರು ಏನು ಆಗದ ಹಗೆ ಹೇ ಸುಮ್ನಿರಿ ಅಂಕಲ್ ತಮಾಷೆ ಮಾಡಬೇಡಿ ಅಂದ್ಕೊಂಡು ಇನ್ನು ಇ ರೋಡ್ danger ಅಂತ ಮತ್ತೆ ಮೊಬೈಲ್ ಕಿವಿಗೆ ಅಂಟಿಸಿಕೊಂಡು ಪಕ್ಕದ roadge jump ಅದ 

       ಪ್ರವೀನಂಗೆ ಅಷ್ಟರಲ್ಲೇ ಮತ್ತೊಂದು ಕಾಲ್ ಬರುತ್ತೆ, ಆದರೆ ಇಲ್ಲಿ ಒಬ್ಬರ ಜೊತೆ ಮಾತಾಡ್ತಾ ಇರ್ತಾನೆ ಕಾಲ್ ವೈಟಿಂಗ್ ಕಂಡೊಡನೆ ತಾನು ಮಾತನಾಡುತಿದ್ದವರಿಗೆ ಒಂದು ನಿಮಿಷ ಯಾವುದೊ ಕಾಲ್ ಬರ್ತಾ ಇದೆ ಮತ್ತೆ ಮಾಡ್ತೀನಿ ಅಂದ ಆಕಡೆ ಇಂದ ನಿಂದ್ಯವಗ್ಲು ಇದೆ ಗೋಳು ಅಂತ ಹೇಳಿ ಫೋನ್ disconnect ಮಾಡಿದ್ರು. ಪ್ರವೀಣ ಫೋನ್ recieve ಮಾಡಿದ್ರೆ ಹಳೆ ಫ್ರೆಂಡ್ ಪೂರ್ಣ ಮಾಡಿದ್ದ ಪ್ರೀತಿಯಿಂದ ಮಾತಾಡ್ತಾ ಇದ್ದ ಫ್ರೆಂಡ್ ಗೆ ಬೇಗ ಬೈ ಹೇಳಕ್ಕೆ ಮನಸಾಗಲಿಲ್ಲ ಅದಕ್ಕೆ ಸ್ವಲ್ಪ ಹೆಚ್ಚೇ  ಮಾತಾಡ್ತಾ ಇದ್ದ. ಅ ಹಳೆ ಫ್ರೆಂಡ್ ಜೊತೆ ಅ ಕಾಲ್ ಮುಗಿಸಿ ಮತ್ತೆ ತನು ಮೊದಲು ಮಾತಾಡ್ತಾ ಇದ್ದ ನಂಬರ್ ಗೆ dial ಮಾಡಿದ recieve ಮಾಡಲಿಲ್ಲ ಮತ್ತೆ ಮತ್ತೆ ಕಾಲ್ ಮಾಡಿದ ಅ ಕಡೆ disconnect ಮಾಡಿದ್ರು ಎರಡು ನಿಮಿಷದಲ್ಲಿ ಅವನಿಗೊಂದು text message ಬಂದಿತ್ತು 

                                          " DONT DISTURB ME BYE "


                                                                                  ಮುಂದುವರೆಯುವುದು :-
  

Saturday, April 16, 2011

ಪ್ರೀತಿಯ ಜಾದು ನನ್ನ ಮೇಲೆ ಬೀರಿದೆ

ಅರಿವಿಲ್ಲದೆ ಅರಿವಾಗಿದೆ
ಕೊನೆಯಿಲ್ಲದೇ ಶುರುವಾಗಿದೆ 
ಇ ಲೋಕವೇ ಮರೆತೋಗಿದೆ 
ಮರೆಗುಳಿತನ ಹೆಚ್ಚಾಗಿದೆ 

ಯಾಕೆ ಹೀಗೆ ನನ್ನ ಮನಸು ಮಾರು ಹೋಗಿದೆ 
ಪ್ರೀತಿಯ ಜಾದು ನನ್ನ ಮೇಲೆ ಬೀರಿದೆ

ಸಂತಸಕ್ಕೆ ಸಮಯ ನೂರು ನನಗೆ ಯಾವುದಿಲ್ಲ 
ಆದರುನು ಮುಗುಳುನಗೆಯ ತಡೆಯಲಾಗುತ್ತಿಲ್ಲ
ದಿನವು ಬರುವ ಸೂರ್ಯನನ್ನು ನೋಡಲಾಗುತಿಲ್ಲ 
ನನ್ನ ನಲ್ಲೆ ಬರುವ ಸಮಯ ಎದಿರು ನೋಡುತಿನಲ್ಲ

ಯಾಕೆ ಹೀಗೆ ನನ್ನ ಮನಸು ಮಾರು ಹೋಗಿದೆ 
ಪ್ರೀತಿಯ ಜಾದು ನನ್ನ ಮೇಲೆ ಬೀರಿದೆ

ನಿದಿರೆನೆ ಬಾರದು ಹೊರಳಾಟ ಸಾಲದು 
ಹಾಗುಹೀಗೂ ಬಂದರು ಅವಳ ಕಾಟ ನಿಲ್ಲದು 
ನ ಮಾಡೋ ಕೆಲಸದಲ್ಲೂ ಅವಳ ಪಾಲು ಹೆಚ್ಚಿದೆ 
ಒಮ್ಮೆಯೂ ಮಾತನಾಡದೆ ನನ್ನ ಬದುಕು ಹಂಚಿದೆ 

ಯಾಕೆ ಹೀಗೆ ನನ್ನ ಮನಸು ಮಾರು ಹೋಗಿದೆ 
ಪ್ರೀತಿಯ ಜಾದು ನನ್ನ ಮೇಲೆ ಬೀರಿದೆ


                                                ಪ್ರೀತಿಇಂದ ಪವನ್ :-




Friday, April 8, 2011

ಮೌನವೇ ಮಾತಾದರು

ಮೌನವೇ ಮಾತಾದರು
ಇಬ್ಬನಿ ಮಳೆಯಾದರೂ
ಸೂರ್ಯನೇ ಮರೆಯಾದರು
ಚಂದಿರ ಕಾಣೆಯಾದರು
ನನಗೆ ನಿನ್ನಾ ನೆನಪು ಒಂದೇನೆ ನಿದಿರೆ
ಮಾತೇ ಹೊರಡಲ್ಲ ನಿನ್ನ ನೋಡದೇನೆ ಇದ್ರೆ
ಮಾತಿನ ಸರಮಾಲೆ ನೀ ಹಾಕದೇನೆ ಇದ್ರೆ
ದಿನವಿಡೀ ನನಗೆ ಅಂದು ಬರಿಯಾ ತೊಂದರೆ 



ಪ್ರೀತಿಯಿಂದ ಪವನ್